ಹೋಂಡಾ ಸಿಬಿಆರ್ ಉತ್ತರಾಧಿಕಾರಿ ಆಗಮನಕ್ಕೆ ರೆಡಿ

Written By:

ಜಗತ್ತಿನ ಅತಿ ಪುರಾತನ ಮೋಟಾರ್ ಸೈಕಲ್ ಶೋಗಳಲ್ಲಿ ಒಂದಾಗಿರುವ ಇಐಸಿಎಂಎ (Esposizione Internazionale Ciclo Motociclo e Accessori- EICMA) ಅಥವಾ ಮಿಲಾನ್ ಮೋಟಾರ್ ಸೈಕಲ್ ಶೋ, ಇಟಲಿಯ ಮಿಲಾನ್‌‍ನಲ್ಲಿ ವರ್ಷಂಪ್ರತಿ ನಡೆದು ಬರುತ್ತಿರುವ ಜನಪ್ರಿಯ ಮೋಟಾರ್ ಸೈಕಲ್ ಶೋ ಆಗಿದೆ.

ಪ್ರಸ್ತುತ ಮೋಟಾರ್ ಸೈಕಲ್ ಶೋದಲ್ಲಿ ಬಹುತೇಕ ಎಲ್ಲ ಕಂಪನಿಗಳು ತಮ್ಮ ನೂತನ ಅವತರಣಿಕೆಯೊಂದಿಗೆ ಭಾಗವಹಿಸುತ್ತವೆ. ಇದೇ ಕಾರಣಕ್ಕಾಗಿ ಜಗತ್ತಿನೆಲ್ಲೆಡೆಯ ವಾಹನ ಪ್ರೇಮಿಗಳನ್ನು ಸೆಳೆಯುವಲ್ಲಿ ಇಐಸಿಎಂಎ ಆಟೋ ಶೋ ಯಶಸ್ವಿಯಾಗಿದೆ.

ಅಂದ ಹಾಗೆ 2014 ಮಿಲಾನ್ ಮೋಟಾರ್ ಸೈಕಲ್ ಶೋಗೆ ಈಗಾಗಲೇ ಚಾಲನೆ ದೊರಕಿದೆ. ಇದರಂತೆ ಜಪಾನ್ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಹೊಚ್ಚ ಹೊಸತಾದ ಹೋಂಡಾ ಸಿಬಿಆರ್300ಆರ್ ಅನಾವರಣಗೊಳಿಸಿದೆ.

To Follow DriveSpark On Facebook, Click The Like Button
ಮಿಲಾನ್ ಶೋದಲ್ಲಿ ಹೋಂಡಾ ಸಿಬಿಆರ್300ಆರ್ ಪ್ರದರ್ಶನ

ಸಿಬಿಆರ್250ಆರ್ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಟ್ಟಿರುವ 2014 ಸಿಬಿಆರ್300ಆರ್, ಮೊದಲು ಚೀನಾ ಮೋಟಾರ್ ಶೋದಲ್ಲಿ ಇದೀಗ ಇಟಲಿಯಲ್ಲಿ ಪ್ರದರ್ಶನಗೊಂಡಿದ್ದು, ಎಂಜಿನ್ ಜತೆಗೆ ಎಲ್ಲ ತಾಂತ್ರಿಕ ಮಾಹಿತಿಗಳನ್ನು ಹೊರಹಾಕಿದೆ.

ಮಿಲಾನ್ ಶೋದಲ್ಲಿ ಹೋಂಡಾ ಸಿಬಿಆರ್300ಆರ್ ಪ್ರದರ್ಶನ

ನಿಂಜಾ ಪಾಲಿಗೆ ಕಂಟಕವಾಗಲಿರುವ ಹೋಂಡಾ ಸಿಬಿಆರ್300ಆರ್, ಭಾರತದಲ್ಲಿ ಸಿಬಿಆರ್250ಆರ್ ಆವೃತ್ತಿಯ ಜತೆಗೆ ಮಾರಾಟವಾಗುವ ನಿರೀಕ್ಷೆಯಿದೆ.

ಮಿಲಾನ್ ಶೋದಲ್ಲಿ ಹೋಂಡಾ ಸಿಬಿಆರ್300ಆರ್ ಪ್ರದರ್ಶನ

ಸಿಬಿಆರ್1000ಆರ್ ವಿನ್ಯಾಸದಿಂದ ಸ್ಫೂರ್ತಿ ಪಡೆದುಕೊಂಡು ಸಿಬಿಆರ್300ಆರ್ ತಯಾರಿಸಲಾಗಿದೆ. ಹಾಗೆಯೇ ಟ್ವಿನ್ ಹೆಡ್‌ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಮಿಲಾನ್ ಶೋದಲ್ಲಿ ಹೋಂಡಾ ಸಿಬಿಆರ್300ಆರ್ ಪ್ರದರ್ಶನ

ಸಿಬಿಆರ್300ಆರ್, 286ಸಿಸಿ ಎಂಜಿನ್ ಪಡೆದುಕೊಳ್ಳಲಿದೆ. ಇದು 30.4 ಅಶ್ವಶಕ್ತಿ (27ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮಿಲಾನ್ ಶೋದಲ್ಲಿ ಹೋಂಡಾ ಸಿಬಿಆರ್300ಆರ್ ಪ್ರದರ್ಶನ

ಹೋಂಡಾ ಪ್ರಕಾರ, ಡಿಜಿಟಲ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂನಲ್ಲಿ ಸುಧಾರಣೆ ತರಲಾಗಿರುವುದಾಗಿ ತಿಳಿಸಿದೆ. ಇದು ಉತ್ತಮ ರೈಡಿಂಗ್ ಅನುಭವಕ್ಕೆ ಕಾರಣವಾಗಲಿದೆ.

ಮಿಲಾನ್ ಶೋದಲ್ಲಿ ಹೋಂಡಾ ಸಿಬಿಆರ್300ಆರ್ ಪ್ರದರ್ಶನ

ನೂತನ ಹೋಂಡಾ ಸಿಬಿಆರ್300ಆರ್ 12.87 ಲೀಟರ್ ಎಂಜಿನ್ ಹೊಂದಿದ್ದು, ಪ್ರತಿ ಲೀಟರ್ 30 ಕೀ.ಮೀ. ಮೈಲೇಜ್‌ನಲ್ಲಿ 389 ಕೀ.ಮೀ. ತನಕ ಸರಾಗವಾಗಿ ಸಾಗಬಹುದಾಗಿದೆ.

ಮಿಲಾನ್ ಶೋದಲ್ಲಿ ಹೋಂಡಾ ಸಿಬಿಆರ್300ಆರ್ ಪ್ರದರ್ಶನ

ಹಾಗಿದ್ದರೂ ಆಸನ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು ಹಿಂದಿನ ಆವೃತ್ತಿಯ ವಿನ್ಯಾಸವನ್ನು ಪಡೆದುಕೊಂಡಿದೆ.

ಮಿಲಾನ್ ಶೋದಲ್ಲಿ ಹೋಂಡಾ ಸಿಬಿಆರ್300ಆರ್ ಪ್ರದರ್ಶನ

ಹಾಗೆಯೇ ಇನ್ಸ್ಟುಮೆಂಟ್ ಕ್ಲಸ್ಟರ್ ಸಹ ಸಮಾನ ವಿನ್ಯಾಸ ಪಡೆದುಕೊಂಡಿದೆ.

ಮಿಲಾನ್ ಶೋದಲ್ಲಿ ಹೋಂಡಾ ಸಿಬಿಆರ್300ಆರ್ ಪ್ರದರ್ಶನ

ಯುರೋಪ್‌ನಲ್ಲಿ ಕಡ್ಡಾಯ ನಿಯಮವಿರುವುದರಿಂದ ಎಬಿಎಸ್ ಸ್ಟಾಂಡರ್ಡ್ ಆಗಿ ಲಭಿಸಲಿದೆ. ಆದರೆ ಇತರ ರಾಷ್ಟ್ರಗಳಲ್ಲಿ ಇದೊಂದು ಐಚ್ಛಿಕ ಆಯ್ಕೆಯಾಗಿರಲಿದೆ.

ಮಿಲಾನ್ ಶೋದಲ್ಲಿ ಹೋಂಡಾ ಸಿಬಿಆರ್300ಆರ್ ಪ್ರದರ್ಶನ

ಪ್ರಸ್ತುತ ದರ ವಿವರಗಳ ಬಗ್ಗೆ ಹೆಚ್ಚೇನು ಮಾಹಿತಿ ಬಂದಿಲ್ಲ.

ಮಿಲಾನ್ ಶೋದಲ್ಲಿ ಹೋಂಡಾ ಸಿಬಿಆರ್300ಆರ್ ಪ್ರದರ್ಶನ

ಇನ್ನು ಭಾರತ ಮಾರುಕಟ್ಟೆಗೆ ಮುಂದಿನ ವರ್ಷ ಆಗಮಿಸುವ ನಿರೀಕ್ಷೆಯಿದೆ.

English summary
Honda did reveal to us the 2014 CBR300R, the possible successor to the CBR250R at the CIMAMotor show in China.
Story first published: Wednesday, November 6, 2013, 11:04 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark