ಆಸ್ಟನ್ ಮಾರ್ಟಿನ್‌ ಪವರ್‌ಫುಲ್ ಸ್ಪೆಷಲ್ ಎಡಿಷನ್

By Nagaraja

ಬ್ರಿಟಿಷ್ ವಾಹನ ತಯಾರಕರಿಂದ ಲಭ್ಯವಾಗುವ ಅತ್ಯಂತ ಪವರ್‌ಫುಲ್ ಗಾಡಿ ಆಸ್ಟನ್ ಮಾರ್ಟಿನ್ ವ್ಯಾಂಗಿಷ್ ವೊಲಾಟೆ ಆಗಿದೆ. ಪ್ರಸ್ತುತ ವಿ12 ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಕನ್ವರ್ಟಿಬಲ್ ಜಿಟಿ ಕಾರು ಜೂನ್ ತಿಂಗಳಲ್ಲಿ ಅನಾವರಣಗೊಂಡಿತ್ತು.

ಇದರ ಬೆನ್ನಲ್ಲೇ ಆಸ್ಟನ್ ಮಾರ್ಟಿನ್ ಇನ್ನೊಂದು ಸ್ಪೆಷಲ್ ಎಡಿಷನ್ ಮಾಡೆಲ್ ವ್ಯಾಂಗಿಷ್ ವೊಲಾಟೆ ನೀಮ್ಯಾನ್ ಮಾರ್ಕಸ್ (Vanquish Volante Neiman Marcus) ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಅಮೆರಿಕ ಮೂಲದ ವಿಶೇಷ ಉತ್ಪನ್ನಗಳನ್ನು ಮಾರಾಟ ಮಾಡುವ ನೀಮ್ಯಾನ್ ಮಾರ್ಕಸ್ ಹೆಸರುವಾಸಿಯಾಗಿದೆ. ಪ್ರಸ್ತುತ ಆಸ್ಟನ್ ಮಾರ್ಟಿನ್ ಕಾರು (ಇಂದು) ನವೆಂಬರ್ 19ರಂದು ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಪ್ರದರ್ಶನ ಕಾಣಲಿದೆ.

Aston Martin Vanquish Volante Neiman Marcus Edition

ಆಸ್ಟನ್ ಮಾರ್ಟಿನ್ ಆವೃತ್ತಿಯು ವಿಶೇಷ ಬಣ್ಣದ (Seychelles Blue) ವೆರಿಯಂಟ್‌ನಲ್ಲಿ ಆಗಮನವಾಗಲಿದೆ. 20 ಇಂಚು ಲಿಕ್ವಿಡ್ ಫಿನಿಶ್ ಅಲಾಯ್ ವೀಲ್ಸ್ ಇತರ ಪ್ರಮುಖ ವೈಶಿಷ್ಟ್ಯವಾಗಿದೆ.

Aston Martin Vanquish Volante Neiman Marcus Edition

ಇನ್ನು ಕಾರಿನೊಳಗೂ ಐಷಾರಾಮಿ ವಿನ್ಯಾಸಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಇದು 4.1 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ಅಂತೆಯೇ ಗಂಟೆಗೆ ಗರಿಷ್ಠ 294 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

Aston Martin Vanquish Volante Neiman Marcus Edition

ಹಾಗಿದ್ದರೂ ಕೇವಲ ಸೀಮಿತ 10 ಆವೃತ್ತಿಯಲ್ಲಿ ಮಾತ್ರ ಆಸ್ಟನ್ ಮಾರ್ಟಿನ್‌ನ ಈ ಸ್ಪೆಷಲ್ ಎಡಿಷನ್ ಕಾರು ಉತ್ಪಾದನೆಯಾಗಲಿದೆ.

Aston Martin Vanquish Volante Neiman Marcus Edition

ಇನ್ನು ದರದ ಬಗ್ಗೆ ಮಾತನಾಡುವುದಾದ್ದಲ್ಲಿ ಸಾಮಾನ್ಯ ಆಸ್ಟನ್ ಮಾರ್ಟಿನ್‌ಗಿಂತಲೂ 50,000 ಅಮೆರಿಕನ್ ಡಾಲರ್ ಹೆಚ್ಚು ಪಾವತಿಸಬೇಕಾಗಿದೆ. ಅಂದರೆ 344500 ಅಮೆರಿಕನ್ ಡಾಲರ್‌ಗಳಷ್ಟು ದುಬಾರಿಯಾಗಲಿದೆ.

Aston Martin Vanquish Volante Neiman Marcus Edition

ಅಂದ ಹಾಗೆ ಇದು 6.0 ಲೀಟರ್ ವಿ12 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 573 ಅಶ್ವಶಕ್ತಿ (620 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

More from DriveSpark

Article Published On: Tuesday, November 19, 2013, 12:37 [IST]
English summary
Aston Martin Vanquish Volante is one of the most powerful sports tourer offered by the British automaker. The V12 engine powered convertible GT car was unveiled in June this year. Aston Martin recently revealed a special edition model of the same named Vanquish Volante Neiman Marcus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+