ಫ್ರಾಂಕ್‌ಫರ್ಟ್ ಮೋಟಾರ್ ಶೋ- ಹೋಂಡಾ ಸಿವಿಕ್ ಟೂರರ್

By Nagaraja

ಜಗತ್ತಿನ ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಹೋಂಡಾ ಪ್ರಖ್ಯಾತ 65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಸಿವಿಕ್ ಟೂರರ್ ಪ್ರದರ್ಶಿಸಿದೆ. ಮುಂದಿನ ವರ್ಷ ಯುರೋಪ್ ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಹೋಂಡಾ ಸಿವಿಕ್ ಟೂರರ್, 1.6 ಐಡಿಟೆಕ್ ಎಂಜಿನ್‌ನಿಂದ ನಿಯಂತ್ರಸಲ್ಪಡಲಿದೆ.

ಹೆಚ್ಚು ಲಗ್ಗೇಜ್ ಸ್ಪೇಸ್ ಹೊಂದಿರುವುದು ಹೋಂಡಾ ಸಿವಿಕ್ ಟೂರರ್‌ನ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಈ ಐದು ಸೀಟಿನ ಕಾರು ಪ್ರವಾಸ ಮುಂತಾದ ದೂರ ಪ್ರಯಾಣಕ್ಕೆ ತೆರಳಲು ಉತ್ತಮ ಆಯ್ಕೆಯಾಗಿರಲಿದೆ. ಇದರಲ್ಲಿ ಗರಿಷ್ಠ ಸುರಕ್ಷಾ ಮಾನದಂಡ ಅನುಸರಿಸಲಾಗಿದ್ದು, ಆಟೋ ವಿಶ್ಲೇಷಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಡಿಸೈನ್

ಡಿಸೈನ್

ಸಂಪೂರ್ಣವಾಗಿಯೂ ಯುರೋಪ್‌ನಲ್ಲಿ ಅಭಿವೃದ್ಧಿ ಹಾಗೂ ವಿನ್ಯಾಸಗೊಳಿಸಲಾಗಿರುವ ಹೋಂಡಾ ಸಿವಿಕ್ ಟೂರರ್‌ನಲ್ಲಿ ಇದೇ ಮೊದಲ ಬಾರಿಗೆ ಮುಂದುವರಿದ ಆಕ್ಟಿವ್ ಸೇಫ್ಟಿ ಸಿಸ್ಟಂ ಆಳವಡಿಸಲಾಗುತ್ತಿದೆ. ಇದನ್ನು ಯುರೋಪ್‌ನಲ್ಲಿರುವ ಹೋಂಡಾ ಆರ್ ಆಂಡ್ ಡಿ ತಂಡ ಅಭಿವೃದ್ಧಿಪಡಿಸಿದೆ.

ಸುರಕ್ಷತೆ

ಸುರಕ್ಷತೆ

ಚಾಲಕ ಹಾಗೂ ಪ್ರಯಾಣಿಕ ಸೇರಿದಂತೆ ಪಾದಚಾರಿಗಳಿಗೂ ಗರಿಷ್ಠ ಪ್ರಮಾಣದ ಸುರಕ್ಷತೆಯನ್ನು ಖಾತ್ರಿಪಡಿಸುತ್ತಿರುವ ಹೋಂಡಾ ಸಿವಿಕ್ ಟೂರರ್ ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಲಿದೆ. ಈ ಮುಖಾಂತರ ಪ್ರತಿಯೊಬ್ಬರಿಗೂ ಭದ್ರತೆಯ ತತ್ವವನ್ನು ಸಾರಲಿದೆ.

ಸ್ಥಳಾವಕಾಶ

ಸ್ಥಳಾವಕಾಶ

ನುಣುಪಾಗಿಯೂ ಹೊಳಪಾದ ಹೊರಂಗಣ ವಿನ್ಯಾಸ ಹೊಂದಿರುವ ಹೋಂಡಾ ಸಿವಿಕ್ ಟೂರರ್ ಒಳಗಡೆಯೂ ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸುತ್ತಿದೆ.

ಬೂಟ್ ಸ್ಪೇಸ್

ಬೂಟ್ ಸ್ಪೇಸ್

ಹೋಂಡಾದ ಶೋಧನಾತ್ಮಕ ಮ್ಯಾಜಿಕ್ ಸೀಟ್ ಸಿಸ್ಟಂ ತಂತ್ರಗಾರಿಕೆಯಲ್ಲಿ ನೂತನ ಸಿವಿಕ್ ಟೂರರ್ ಗರಿಷ್ಠ 624 ಲೀಟರ್ ಬೂಟ್ ಸ್ಪೇಸ್ ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನು ರಿಯರ್ ಸೀಟ್ ಮಡಚಿದರೆ ಬರೋಬ್ಬರಿ 1668 ಲೀಟರ್ ಬೂಟ್ ಸ್ಪೇಸ್ ಸಿಗಲಿದೆ.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ನೂತನ ಹೋಂಡಾ ಸಿವಿಕ್ ಟೂರರ್ ಒಟ್ಟು ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಅರ್ಥ್ ಡ್ರೀಮ್ಸ್ ಟೆಕ್ನಾಲಜಿ ಸಿರೀಸ್‌ನ 1.6 i-DTEC ಹಾಗೂ i-VTEC ಎಂಜಿನ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಲ್ಲಿ ಲಭ್ಯವಿರಲಿದೆ.

ಅಡಾಪ್ಟಿವ್ ಡ್ಯಾಂಪರ್ ಸಿಸ್ಟಂ

ಅಡಾಪ್ಟಿವ್ ಡ್ಯಾಂಪರ್ ಸಿಸ್ಟಂ

ಇನ್ನು ನೂತನವಾದ ಅಡಾಪ್ಟಿವ್ ಡ್ಯಾಂಪರ್ ಸಿಸ್ಟಂ (ಎಡಿಎಸ್) ಮೂಲಕ ವ್ಯತಿರಿಕ್ತ ಡ್ರೈವಿಂಗ್ ಪರಿಸ್ಥಿತಿಯಲ್ಲೂ ಆರಾಮದಾಯಕ ಹಾಗೂ ಸ್ಥಿರತೆಯ ಚಾಲನೆಗೆ ನೆರವು ಮಾಡಲಿದೆ.

ವಿನ್ಯಾಸ

ವಿನ್ಯಾಸ

ಇನ್ನು ಸಿವಿಕ್ ಟೂರರ್ ವಿನ್ಯಾಸದಲ್ಲಿ ಯಾವುದೇ ರಾಜಿಗೆ ತಯಾರಾಗದ ಹೋಂಡಾ, ಹೆಚ್ಚು ಕ್ರೀಡಾತ್ಮಕ, ನುಣುಪಾದ ಹಾಗೂ ಡೈನಾಮಿಕ್ ಶೈಲಿ ಕಲ್ಪಿಸಿಕೊಟ್ಟಿದೆ.

ಪರಿಸರ ಸ್ನೇಹಿ

ಪರಿಸರ ಸ್ನೇಹಿ

ಹೋಂಡಾದ ಇನ್ನೊಂದು ಆವೃತ್ತಿಯಾದ ಸಿವಿಕ್ ಹ್ಯಾಚ್‌ಬ್ಯಾಕ್ ಕಾರಿಗೆ ಹೋಲಿಸಿದಾಗ ನೂತನ ಸಿವಿಕ್ ಟೂರರ್ ಎಲ್ಲ ಹಂತದಲ್ಲಿಯೂ ಹೆಚ್ಚು ಆಕರ್ಷಕವಾಗಿ ಗೋಚರಿಸುತ್ತಿದೆ. ಹಾಗೆಯೇ ಕಡಿಮೆ ಹೊಗೆ ಹೊರಸೂಸಲಿದ್ದು (99g/km), ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

ಭಾರತ ಎಂಟ್ರಿ?

ಭಾರತ ಎಂಟ್ರಿ?

ಹಾಗೊಂದು ವೇಳೆ ಭವಿಷ್ಯದಲ್ಲಿ ಹೋಂಡಾ ಸಿವಿಕ್ ಟೂರರ್ ಭಾರತಕ್ಕೆ ಪ್ರವೇಶಿಸಿದ್ದಲ್ಲಿ ಟೊಯೊಟಾ ಇನ್ನೋವಾಗೆ ಪ್ರತಿಸ್ಪರ್ಧಿಯೆನಿಸಲಿದೆ.

ದರ

ದರ

ಆದರೆ ಇವೆಲ್ಲಕ್ಕೂ ಸಿವಿಕ್ ಟೂರರ್ ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗಬೇಕಾಗಿರುವುದು ಅತಿ ಮುಖ್ಯವಾಗಿದೆ. ಸದ್ಯ ಈ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ.

More from DriveSpark

Article Published On: Thursday, September 12, 2013, 10:15 [IST]
English summary
The 2013 Frankfurt Motor Show provides the setting for Honda to publicly reveal the new Civic Tourer. Developed and designed in Europe, the new Civic Tourer offers class-leading trunk volume of 624 litres (rear seats up, measured up to the tonneau cover), advanced technology and distinctive styling.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+