ಫ್ರಾಂಕ್‌ಫರ್ಟ್ ಮೋಟಾರ್ ಶೋ ನೋಡಲು ಮರೆತು ಬಿಟ್ರಾ?

By Nagaraja

ಜಗತ್ತಿನ ಅತಿದೊಡ್ಡ ವಾಹನ ಪ್ರದರ್ಶನ ಮೇಳವಾದ ಫ್ರಾಂಕ್‌ಫರ್ಟ್ ಮೋಟಾರ್ ಶೋ ಅಥವಾ ಫ್ರಾಂಕ್‌ಫರ್ಟ್ ಆಟೋ ಶೋ ಈ ಬಾರಿಯೂ ಅತ್ಯಂತ ಯಶಸ್ಸಿನಿಂದ ಜರಗಿತ್ತು. ತವರೂರು ಜರ್ಮನಿ ಸೇರಿದಂತೆ ಇಡಿ ವಿಶ್ವವನ್ನೇ ಪುಳಕಿತಗೊಳಿಸಿದ 65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013 ಸೆಪ್ಟೆಂಬರ್ 10ರಿಂದ 22ರ ವರೆಗೆ ಭರ್ಜರಿಯಾಗಿ ಸಾಗಿತ್ತು. ಈ ವೇಳೆಯಲ್ಲಿ ಹಲವಾರು ಉತ್ಪಾದಕ ಹಾಗೂ ಕಾನ್ಸೆಪ್ಟ್ ವರ್ಷನ್ ಕಾರುಗಳು ಪ್ರದರ್ಶನ ಕಂಡಿದ್ದವು.

ದುಬಾರಿ ಮರ್ಸಿಡಿಸ್ ಬೆಂಝ್‌ನಿಂದ ಹಿಡಿದು, ಆಡಿ, ಬಿಎಂಡಬ್ಲ್ಯು, ಷೆವರ್ಲೆ, ಫೋರ್ಡ್, ಪೋರ್ಶೆ, ಫೆರಾರಿ, ರೋಲ್ಸ್ ರಾಯ್ಸ್, ಬೆಂಟ್ಲಿ ಸೇರಿದಂತೆ ಜಗತ್ತಿನ ದಿಗ್ಗಜ ಕಂಪನಿಗಳು ಈ ಆಟೋ ಶೋದಲ್ಲಿ ಭವಿಷ್ಯದ ಯೋಜನೆಗಳೊಂದಿಗೆ ಮುಂದೆ ಬಂದಿದ್ದವು.

ಪ್ರದರ್ಶನ ಕಂಡ ಉತ್ಪಾದಕ ಕಾರುಗಳು
ಆಡಿ ಎ8, ಆಡಿ ಎ3 ಆಲ್ಟ್ರಾ, ಬಿಎಂಡಬ್ಲ್ಯು 435ಐ ಎಂ ನಿರ್ವಹಣೆ, 2013 ಬಿಎಂಡಬ್ಲ್ಯು ಐ3, 2013 ಬಿಎಂಡಬ್ಲ್ಯು ಐ8, ಬುಕಾಟಿ ವೆಯ್ನಾನ್ ಗ್ರಾಂಡ್ ಸ್ಪೋರ್ಟ್ ವಿಟೆಸ್ಸೆ ಜೀನ್ ಬುಕಾಟಿ, ಷೆವರ್ಲೆ ಕ್ಯಾಮರೊ ಕನ್ವರ್ಟಿಬಲ್, ಡ್ಯಾಸಿಯಾ ಡಸ್ಟರ್ ಫೇಸ್‌ಲಿಫ್ಟ್, ಫೆರಾರಿ 458 ಸ್ಪೆಷಲೆ, ಮರ್ಸಿಡಿಸ್ ಬೆಂಝ್ ಎಸ್63 ಎಂಎಂಜಿ, 2013 ನಿಸ್ಸಾನ್ ಎಕ್ಸ್ ಟ್ರೇಲ್, 2013 ಓಪೆಲ್ ಇಸ್ನಿಗ್ನಿಯಾ ಕಂಟ್ರಿ ಟೂರರ್, ಪ್ಯೂಜೆಟ್ 308

ಕಾನ್ಸೆಪ್ಟ್ ಕಾರುಗಳು
ಆಡಿ ನನುಕ್ ಕ್ವಾಟ್ರೊ ಕಾನ್ಸೆಪ್ಟ್, ಕ್ಯಾಡಿಲೆಕ್ ಎಲ್ಮಿರಾಜ್, ಫೋರ್ಡ್ ಎಸ್-ಮ್ಯಾಕ್ಸ್ ಕಾನ್ಸೆಪ್ಟ್, ಓಪೆಲ್ ಮೊನ್ಜಾ ಕಾನ್ಸೆಪ್ಟ್, ಫೋಕ್ಸ್‌ವ್ಯಾಗನ್ ಗಾಲ್ಫ್ ಸ್ಪೋರ್ಟ್ಸ್‌ವ್ಯಾನ್ ಮತ್ತು ವೋಲ್ವೋ ಕಾನ್ಸೆಪ್ಟ್ ಕೂಪೆ.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಮುಂದಿನ ಬಟನ್ ಕ್ಲಿಕ್ ಮಾಡುತ್ತಾ ಫ್ರಾಂಕ್‌ಫರ್ಟ್‌ನಲ್ಲಿ ಪ್ರದರ್ಶನವಾದ ಉತ್ಪಾದಕಾ ಹಾಗೂ ಕಾನ್ಸೆಪ್ಟ್ ಕಾರುಗಳ ಬಗ್ಗೆ ಮಾಹಿತಿ ಪಡೆಯೋಣ. ಖಂಡಿತವಾಗಿಯೂ ನೀವಿದನ್ನು ಇಷ್ಟಪಡುವ ಭರವಸೆ ನಮ್ಮದು.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಇದೇ ಆಟೋದಲ್ಲಿ ಬೆಂಟ್ಲಿ ತನ್ನ ಆಕರ್ಷಕ ಕಾಂಟಿನೆಂಟಲ್ ಜಿಟಿ ವಿ8 ಕಾರನ್ನು ಪ್ರದರ್ಶಿಸಿತ್ತು.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಫ್ರಾಂಕ್‌ಫರ್ಟ್ ಮೋಟಾರ್ ಶೋ ವರ್ಷಂಪ್ರತಿ ಜರ್ಮನಿಯ ಫ್ರಾಂಕ್‌ಫರ್ಟ್ ನಗರದಲ್ಲಿ ಆಯೋಜನೆಯಾಗುತ್ತದೆ. ಇದೇ ಕಾರಣಕ್ಕಾಗಿ ಫ್ರಾಂಕ್‌ಫರ್ಟ್ ಮೋಟಾರ್ ಶೋ ಎಂಬ ಹೆಸರು ಬಂದಿದೆ. ಇನ್ನು ಜರ್ಮನಿಯಲ್ಲಿ ಇದು Internationale Automobil-Ausstellung (IAA) ಎಂದೇ ಪ್ರಸಿದ್ಧಿ ಪಡೆದಿದೆ.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ನೀವು ಇಡಿ ವಿಶ್ವದ ವಾಹನೋದ್ಯಮವನ್ನು ತೆರೆದು ನೋಡಿದರೆ ಜರ್ಮನಿಗರ ಪ್ರಾಬಲ್ಯ ತಿಳಿದು ಬರುತ್ತದೆ. ಇಲ್ಲಿಂದಲೇ ಮರ್ಸಿಡಿಸ್, ಬಿಎಂಡಬ್ಲ್ಯು, ಆಡಿ ಹಾಗೂ ಫೋಕ್ಸ್‌ವ್ಯಾಗನ್‌ಗಳಂತಹ ವಿಶ್ವ ವಿಖ್ಯಾತ ಕಂಪನಿಗಳು ತಲೆದೋರಿವೆ.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಮರ್ಸಿಡಿಸ್ ಬೆಂಝ್ ಪಾಲಿಗಿದು ಊರಿನ ಜಾತ್ರೆಯಂತಿತ್ತು. ಹಾಗಾಗಿಯೇ ಈ ಸಂದರ್ಭದ ಗರಿಷ್ಠ ಲಾಭ ಪಡೆಯುವಲ್ಲಿ ವಿಶೇಷವಾಗಿಯೂ ಸಜ್ಜಾಗಿ ನಿಂತಿದ್ದವು.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಇದೇ ಸಂದರ್ಭದಲ್ಲಿ ಅಮೆರಿಕದ ಖ್ಯಾತ ಕಾರು ತಯಾರಕ ಸಂಸ್ಥೆಯಾದ ಫೋರ್ಡ್ ತನ್ನ ಬಹುನಿರೀಕ್ಷಿತ ಎಂಪಿವಿ ಎಸ್‌ಮ್ಯಾಕ್ಸ್ ಕಾರನ್ನು ಅನಾವರಣಗೊಳಿಸಿತ್ತು.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಅದೇ ರೀತಿ ಸ್ಕೋಡಾ ತನ್ನ ಜನಪ್ರಿಯ ಆಕ್ಟಾವಿಯಾ ನೂತನ ಅವತಾರವಾದ ಆರ್‌ಎಸ್ ಸಹ ಪ್ರದರ್ಶನಕ್ಕಿರಿಸಿತ್ತು.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಇನ್ನು ಏಷ್ಯಾದ ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಜಪಾನ್ ಮೂಲದ ನಿಸ್ಸಾನ್, ತನ್ನ ಅತ್ಯಾದ್ಭುತ ಎಸ್‌ಯುವಿ ಎಕ್ಸ್‌ಟ್ರೇಲ್ ಸಹ ಅನಾವರಣಗೊಳಿಸಿತ್ತು.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಹಾಗಿದ್ದರೂ ಭಾರತದ ಯಾವುದೇ ವಾಹನ ತಯಾರಕ ಸಂಸ್ಥೆಗಳು ಇದುವರೆಗೆ ಫ್ರಾಂಕ್‌ಫರ್ಟ್ ಮೋಟಾರ್ ಶೋ ಪ್ರವೇಶಿಸದಿರುವುದು ತುಂಬಾನೇ ಬೇಸರದ ಸಂಗತಿಯಾಗಿದೆ. ಆದರೆ ವಾಹನ ಜಗತ್ತಿನಲ್ಲಿ ಭಾರತ ಗಳಿಸುತ್ತಿರುವ ವೇಗವನ್ನು ಗಮನಿಸಿದರೆ ಫ್ರಾಂಕ್‌ಫರ್ಟ್‌ನಲ್ಲಿ ಭಾರ ಕಾರುಗಳು ರಾರಾಜಿಸುವ ದಿನಗಳು ಇನ್ನು ಬಹುದೂರವಿಲ್ಲ.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಷೆವರ್ಲೆ ಸಹ ತನ್ನ ಆಕರ್ಷಕ ಸ್ಪೋರ್ಟ್ಸ್ ಕಾರಾದ ಕ್ಯಾಮರೊದ ನೂತನ ವೆರಿಯಂಟ್ ಸಹ ಇದೇ ಆಟೋ ಶೋದಲ್ಲಿ ಪ್ರದರ್ಶಿಸಿತ್ತು.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ನಿಮ್ಮ ಮಾಹಿತಿಗಾಗಿ, ಫ್ರಾಂಕ್‌ಫರ್ಟ್ ಮೋಟಾರ್ ಶೋದ ಇತಿಹಾಸವು ಸಹ ಅಷ್ಟೇ ರೋಚಕವಾಗಿದೆ. ಮೊದಲ ಐಎಎ ಮೋಟಾರ್ ಶೋ 1897ನೇ ಇಸವಿಯಲ್ಲಿ ಬರ್ಲಿನ್‌ನ ಹೋಟೆಲ್ ಬ್ರಿಸ್ಟಾಲ್‌ನಲ್ಲಿ ಆಯೋಜನೆಯಾಗಿತ್ತು.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಫ್ರಾಂಕ್‌ಫರ್ಟ್ ಮೋಟಾರ್ ಶೋ ಹಾಗೂ ಫೆರಾರಿ ಕಾರುಗಳಿಗೆ ವಿಶೇಷ ನಂಟಿದೆ. ಈ ಬಾರಿಯೂ ಅದನ್ನು ಸಾಬೀತುಪಡಿಸಿರುವ ಫೆರಾರಿ ವಿಶೇಷವಾ 458 ಸ್ಪೋರ್ಟ್ಸ್ ಕಾರು ಪ್ರದರ್ಶಿಸಿತ್ತು.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಫ್ರಾಂಕ್‌ಫರ್ಟ್ ಮೋಟಾರ್ ಶೋದ ಆಯೋಜನೆ ಸುಸಜ್ಜಿತ ಮಟ್ಟದಲ್ಲಿರುತ್ತದೆ ಎಂಬುದೇ ಇದರ ಯಶಸ್ಸಿಗೆ ಕಾರಣವಾಗಿದೆ. ಇಲ್ಲಿ ವಾಹನ ಕಂಪನಿಗಳಿಗೆ ತಮ್ಮ ಕಾನ್ಸೆಪ್ಟ್‌ಗಳನ್ನು ಪರಿಚಯಿಸಲು ವಿಶಾಲವಾದ ಪ್ರದರ್ಶನಾ ಶಾಲೆಗಳನ್ನು ಏರ್ಪಡಿಸಲಾಗಿದೆ.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಜಪಾನ್‌ನ ಇನ್ನೊಂದು ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತನ್ನ ಜನಪ್ರಿ ಸಿವಿಕ್ ಟೂರರ್ ಸಹ ಇದೇ ಮೋಟಾರ್ ಶೋದಲ್ಲಿ ಪ್ರದರ್ಶಿಸಿದೆ.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಇನ್ನು ಬ್ರಿಟನ್‌ನ ದೈತ್ಯ ಕಾರು ತಯಾರಕ ಸಂಸ್ಥೆಯಾದ ಜಾಗ್ವಾರ್, ತನ್ನ ಸಿ ಎಕ್ಸ್17 ಕಾನ್ಸೆಪ್ಟ್ ಸಹ ಅದ್ದೂರಿಯಾಗಿ ಅನಾವರಣಗೊಳಿಸಿತ್ತು.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

1977ನೇ ಇಸವಿಯಲ್ಲಿ 4 ದಶಲಕ್ಷ ವಾಹನಗಳನ್ನು ಉತ್ಪಾದಿಸುವಲ್ಲಿ ಜರ್ಮನಿ ಯಶಸ್ವಿಯಾಗಿತ್ತು. ಇದರಲ್ಲಿ ಫ್ರಾಂಕ್‌ಫರ್ಟ್ ಮೋಟಾರ್ ಶೋ ಪಾಲು ಬಲುದೊಡ್ಡದಾಗಿತ್ತು.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಇಟಲಿಯ ಫೇಮಸ್ ಸ್ಪೋರ್ಟ್ಸ್ ಕಾರು ತಯಾರಕ ಸಂಸ್ಥೆಯಾದ ಲಂಬೊರ್ಗನಿ, ತನ್ನ ಗಲರ್ಡೊ ಎಲ್‌ಪಿ 570-4 ಕಾರನ್ನು ಸಹ ಪ್ರದರ್ಶಕ್ಕಿರಿಸಿತ್ತು.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ನಿಸ್ಸಾನ್ ನೂತನ ಕಾನ್ಸೆಪ್ಟ್ ಮಾದರಿಯನ್ನು ಸಹ ಅನಾವರಣಗೊಳಿಸಿತ್ತು. ಪ್ರಸ್ತುತ ಕಾರಿನ ವಿನ್ಯಾಸ ನೋಡುಗರನ್ನು ಮಂತ್ರಮುಗ್ಧಗೊಳಿಸಿತ್ತು.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಇನ್ನು ತಾವೇನು ಕಮ್ಮಿಯೇನಲ್ಲ ಎಂಬಂತೆ ಆಡಿ ಸಹ ಆಕರ್ಷಕ ಕಾನ್ಸೆಪ್ಟ್‌ಗಳೊಂದಿಗೆ ರಂಗಕ್ಕಿಳಿದಿತ್ತು.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಆಡಿ ತನ್ನ ಆಕರ್ಷಕ ನ್ಯಾನೂಕ್ ಕ್ವಾಟ್ರೊ ಕಾನ್ಸೆಪ್ಟ್ ಪ್ರದರ್ಶಿಸಿತ್ತು. ಇದು ಕೇವಲ 3.8 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಫ್ರಾಂಕ್‌ಫರ್ಟ್ ಮೋಟಾರ್ ಶೋ ಭವಿಷ್ಯದ ಕಾರು ಪರಿಕಲ್ಪನೆಯನ್ನು ಪದರ್ಶಿಸಲು ಉತ್ತಮ ವೇದಿಕೆಯೊದಗಿಸಿತ್ತು.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಇಟಲಿ ವಾಹನ ತಯಾರಕ ಸಂಸ್ಥೆಯಾದ ಜೀಪ್ ಸಹ ತನ್ನ ಆಧುನಿಕ ಕಾನ್ಸೆಪ್ಟ್‌ನೊಂದಿಗೆ ಮುಂದೆ ಬಂದಿತ್ತು.

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ 2013

ಒಟ್ಟಾರೆಯಾಗಿ ಫ್ರಾಂಕ್‌ಫರ್ಟ್‌ನಲ್ಲಿ ಕಾರಿನ ಜತೆ ಜತೆಗೆ ತಂತ್ರಗಾರಿಕೆ ಆವಿಷ್ಕಾರವಾಗಿತ್ತು. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

More from DriveSpark

Article Published On: Saturday, October 12, 2013, 16:13 [IST]
English summary
Frankfurt Motor Show is the world's largest motor show. It is held biennially in Frankfurt am Main, Hesse, Germany. Here we are presenting highlights of 2013 Frankfurt Motor Show in pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+