ಟೊಕಿಯೋದಲ್ಲೊಂದು ಯಮಹಾ ಶೋ
ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯ ಪ್ರಾಬಲ್ಯವನ್ನು ಅರಿತಿರುವ ಜಗತ್ತಿನೆಲ್ಲ ವಾಹನ ತಯಾರಕ ಸಂಸ್ಥೆಗಳು ಇಲ್ಲಿಗೆ ಗಮನ ಕೇಂದ್ರಿಕರಿಸಿದೆ. ಇದರಿಂದ ಜಪಾನ್ ಮೂಲದ ದ್ವಿಚಕ್ರ ವಾಹನ ಉತ್ಪಾದಕ ಸಂಸ್ಥೆಯಾಗಿರುವ ಯಮಹಾ ಕೂಡಾ ಹೊರತಾಗಿಲ್ಲ.
ಪ್ರಸ್ತುತ ಸಾಗುತ್ತಿರುವ ಟೊಕಿಯೊ ಮೋಟಾರ್ ಶೋದಲ್ಲಿ ನೂತನ ಆರ್25 ಕಾನ್ಸೆಪ್ಟ್ ಪ್ರದರ್ಶಿಸಿರುವ ಯಮಹಾ, ನಿರೀಕ್ಷೆ ಮೂಡಿಸಿದೆ.

ಈಗಾಗಲೇ ಯಮಹಾದ ಆರ್15 150 ಸಿಸಿ ಸ್ಪೋರ್ಟ್ಸ್ ಬೈಕ್ ಮಾರುಕಟ್ಟೆಯಲ್ಲಿದೆ. ಇದೀಗ ಆರ್25ರ ಮೂಲಕ ಮಾರಾಟ ಕುದುರಿಸಿಕೊಳ್ಳುವ ನಂಬಿಕೆಯಲ್ಲಿದೆ.
ಈ 250ಸಿಸಿ ಬೈಕ್ ಮುಂದಿನ ವರ್ಷ ಲಾಂಚ್ ಆಗುವ ಸಾಧ್ಯತೆಯಿದೆ. ಇದು ಟ್ವಿನ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.
ಇನ್ನು ಹಿಂದಿನ ಆವೃತ್ತಿಗೆ ಹೋಲಿಸಿದರೆ ಹೆಚ್ಚು ಕ್ರೀಡಾತ್ಮಕ ವಿನ್ಯಾಸ ಪಡೆದುಕೊಳ್ಳಲಿದೆ. ಇದು ಭಾರತ ಸೇರಿದಂತೆ ಬೆಳೆದು ಬರುತ್ತಿರುವ ಇತರ ಏಷ್ಯಾ ಮಾರುಕಟ್ಟೆಗಳನ್ನು ಗುರಿಯಾಗಿರಿಸಿಕೊಳ್ಳಲಿದೆ.


Click it and Unblock the Notifications








