ಡೆಟ್ರಾಯ್ಟ್ ಸ್ಪೆಷಲ್; ಟೊಯೊಟಾ ಕರೊಲ್ಲಾ ಕಾನ್ಸೆಪ್ಟ್
ವಿಶ್ವದ ಶ್ರೇಷ್ಠ ಆಟೋ ಶೋಗಳಲ್ಲಿ ಒಂದಾಗಿರುವ ಉತ್ತರ ಅಮೆರಿಕ ಅಂತರಾಷ್ಟ್ರೀಯ ಆಟೋ ಶೋ ಅಥವಾ ಡೆಟ್ರಾಯ್ಟ್ ಆಟೋ ಶೋದಲ್ಲಿ ಜಪಾನ್‌ನ ಜನಪ್ರಿಯ ಕಾರು ತಯಾರಕ ಸಂಸ್ಥೆಯಾದ ಟೊಯೊಟಾ, ಅತಿ ನೂತನ ಕಾನ್ಸೆಪ್ಟ್ ಕಾರೊಂದನ್ನು ಪರಿಚಯಿಸಿದೆ.
ಅತ್ಯಾಧುನಿಕ ವಿನ್ಯಾಸದೊಂದಿಗೆ ಕೂಡಿದ ಕರೊಲ್ಲಾ ಫ್ಯೂರಿಯಾ ಒಂದೇ ನೋಟದಲ್ಲಿ ನೋಡುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಖಂಡಿತವಾಗಿಯೂ ಈ ಸೆಗ್ಮೆಂಟ್‌ನಲ್ಲಿ ಕರೊಲ್ಲಾ ಫ್ಯೂರಿಯಾ ಹೊಸ ಮೈಲುಗಲ್ಲು ಸೃಷ್ಟಿಸುವುದರಲ್ಲಿ ಎರಡು ಮಾತಿಲ್ಲ.
ನಿಮ್ಮ ಮಾಹಿತಿಗಾಗಿ, ಕರೊಲ್ಲಾ ಜಾಗತಿಕವಾಗಿ ಟೊಯೊಟಾದಿಂದ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರು ಆಗಿದೆ. ಇದೀಗ ಹೊಸ ಫ್ಯೂರಿಯಾ ಕಾನ್ಸೆಪ್ಟ್ ಮೂಲಕ ಸ್ಪೋರ್ಟಿ ಎಕ್ಸ್‌ಟಿರಿಯರ್ ವಿನ್ಯಾಸ, ಬಾಗಿಕೊಂಡಿರುವ ರೂಫ್, ಉದ್ದ ಹಾಗೂ ಅಗಲವಾದ ವೀಲ್ ಬೇಸ್ ನೀಡಲಾಗಿದೆ.
ಪ್ರಸ್ತುತ ಕರೊಲ್ಲಾ ಫ್ಯೂರಿಯಾ ಕಾರು ಉತ್ಸಾಹಿಗಳ ಕುತೂಹಲಕ್ಕೆ ಕಾರಣವಾಗಿದೆ. ಖಂಡಿತವಾಗಿಯೂ ಈ ಕಾನ್ಸೆಪ್ಟ್ ಕಾರನ್ನು ನೀವು ಲೈಕ್ ಮಾಡಲಿದ್ದು, ಯಾವಾಗ ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಟೊಯೊಟಾ ಕರೊಲ್ಲಾ ಫ್ಯೂರಿಯಾ ಕಾನ್ಸೆಪ್ಟ್
ಡೆಟ್ರಾಯ್ಟ್‌ನಲ್ಲಿ ಸಾಗುತ್ತಿರುವ ಉತ್ತಮ ಅಮೆರಿಕ ಅಂತರಾಷ್ಟ್ರೀಯ ಆಟೋ ಶೋದಲ್ಲಿ ಟೊಯೊಟಾ ಕರೊಲ್ಲಾ ಫ್ಯೂರಿಯಾ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಲಾಗಿದೆ.

ಟೊಯೊಟಾ ಕರೊಲ್ಲಾ ಫ್ಯೂರಿಯಾ ಕಾನ್ಸೆಪ್ಟ್
ಟೊಯೊಟಾ ಫ್ಯೂರಿಯಾ ಕಾನ್ಸೆಪ್ಟ್ ಕಾರು ಸ್ಪೋರ್ಟಿ ಎಕ್ಸ್‌ಟೀರಿಯರ್ ಲುಕ್ ಹೊಂದಿದ್ದು, ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಟೊಯೊಟಾ ಕರೊಲ್ಲಾ ಫ್ಯೂರಿಯಾ ಕಾನ್ಸೆಪ್ಟ್
ಫ್ಯೂರಿಯಾ ಕಾನ್ಸೆಪ್ಟ್ ಕಾರಿನಲ್ಲಿ ಟೊಯೆಟಾ ಪ್ರಭಾವಿ ವಿನ್ಯಾಸವನ್ನು ಹೊರತಂದಿದೆ. ಅಂದ ಹಾಗೆ ಪ್ರಸಕ್ತ ಸಾಲಿನಲ್ಲೇ ಕರೊಲ್ಲಾ ಲಾಂಚ್ ಆಗುವ ನಿರೀಕ್ಷೆಯಿದೆ.

ಟೊಯೊಟಾ ಕರೊಲ್ಲಾ ಫ್ಯೂರಿಯಾ ಕಾನ್ಸೆಪ್ಟ್
ಕರೊಲ್ಲಾ ಫ್ಯೂರಿಯಾ ಕಾನ್ಸೆಪ್ಟ್ ಕಾರಿನಲ್ಲಿ ದೊಡ್ಡದಾದ ಫ್ರಂಟ್ ಗ್ರಿಲ್‌ನೊಂದಿಗೆ ವಿನ್ಯಾಸ ಮಾಡಲಾಗಿದೆ.

ಟೊಯೊಟಾ ಕರೊಲ್ಲಾ ಫ್ಯೂರಿಯಾ ಕಾನ್ಸೆಪ್ಟ್
ಟೊಯೊಟಾ ಕರೊಲ್ಲಾ ಫ್ಯೂರಿಯಾ ಕಾನ್ಸೆಪ್ಟ್ ಕಾರಿನ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು ಸಹ ಅಷ್ಟೇ ಆಕರ್ಷಿಣೀಯವಾಗಿದೆ.

ಟೊಯೊಟಾ ಕರೊಲ್ಲಾ ಫ್ಯೂರಿಯಾ ಕಾನ್ಸೆಪ್ಟ್
ಫ್ಯೂರಿಯಾ ಕಾನ್ಸೆಪ್ಟ್ ಹೊಸ ಕರೊಲ್ಲಾದ ಅವತಾರವಾಗಲಿದೆ ಎಂಬುದನ್ನು ಟೊಯೊಟಾ ಅಧಿಕೃತವಾಗಿ ಖಚಿತಪಡಿಸಿಲ್ಲ. ಆದರೆ ಕರೊಲ್ಲಾ ಪ್ರೇಮಿಗಳು ಈ ಹೊಸ ಕಾರಿನಲ್ಲಿ ಹಳೆ ವಿನ್ಯಾಸ ಹೊಂದಿರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟೊಯೊಟಾ ಕರೊಲ್ಲಾ ಫ್ಯೂರಿಯಾ ಕಾನ್ಸೆಪ್ಟ್
ಇದರ ಸ್ಪೋರ್ಟಿ 19 ಇಂಚು ಅಲಾಯ್ ವೀಲ್ ಕೂಡಾ ಪ್ರಭಾವಿ ಎನಿಸಿಕೊಂಡಿದೆ.

ಟೊಯೊಟಾ ಕರೊಲ್ಲಾ ಫ್ಯೂರಿಯಾ ಕಾನ್ಸೆಪ್ಟ್
ಖಂಡಿತವಾಗಿಯೂ ಡೆಟ್ರಾಯ್ಟ್ ಆಟೋ ಶೋದಲ್ಲಿ ಟೊಯೊಟಾ ಫ್ಯೂರಿಲ್ಲಾ ಪ್ರಮುಖ ಆಕರ್ಷಣೆಯಾಗಿದೆ.



Click it and Unblock the Notifications








