ರೋಲ್ಸ್ ರಾಯ್ಸ್‌ನಿಂದ ಅತ್ಯಂತ ಶಕ್ತಿಶಾಲಿ ಕಾರು
ಸಾಮಾನ್ಯವಾಗಿ ಆಟೋ ಶೋಗಳು ನೂತನ ಕಾರು ಕಾನ್ಸೆಪ್ಟ್ ಪ್ರದರ್ಶನ ಮಾಡಲಿಕ್ಕಿರುವ ಸೂಕ್ತ ವೇದಿಕೆ ಎನಿಸಿಕೊಂಡಿದೆ. ಪ್ರಸಕ್ತ ಸಾಗುತ್ತಿರುವ 2013 ಜಿನೆವಾ ಮೋಟಾರ್ ಶೋದಲ್ಲಿ ಇದರ ಪೂರ್ಣ ಸದ್ಭಳಕೆ ಮಾಡಿಕೊಂಡಿರುವ ವಿಶ್ವದ ಅತಿ ಪುರಾತನ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ರೋಲ್ಸ್ ರಾಯ್ಸ್, ತನ್ನ ಶ್ರೇಷ್ಠ ಮಾಡೆಲನ್ನು ಅನಾವರಣಗೊಳಿಸಿದೆ.
ನೂತನ ರೋಲ್ಸ್ ರಾಯ್ಸ್ ವ್ರೈತ್, ಬ್ರಿಟನ್ ವಾಹನ ತಯಾರಕ ಕಂಪನಿಯಾದ ಬಿಡುಗಡೆಗೊಂಡಿರುವ ಅತ್ಯಂತ ಹೆಚ್ಚಿನ ಶಕ್ತಿಶಾಲಿ ಕಾರಾಗಿದೆ. ಇದರೊಂದಿಗೆ ರೋಲ್ಸ್ ರಾಯ್ಸ್ ನಿಷ್ಠೆ ಇನ್ನಷ್ಟು ಹೆಚ್ಚಿದೆ.

ಐಷಾರಾಮಿ ಆಂತರಿಕ ಸೌಲಭ್ಯಗಳನ್ನು ರೋಲ್ಸ್ ರಾಯ್ಸ್ ವ್ರೈತ್ ಹೊಂದಿದೆ. ವುಡನ್ ಹಾಗೂ ಲೆಥರ್ ಸೀಟ್‌ಗಳ ಜತೆ ಇದರ 1,340 ಓಪ್ಟಿಕ್ ಲ್ಯಾಂಪ್, ನೀವು ಬೆಳದಿಂಗಳ ರಾತ್ರಿಯಲ್ಲಿರುವಂತೆ ಭಾಸವಾಗಲಿದೆ.

ಎಂಜಿನ್
ಐಷಾರಾಮಿ ಹಾಗೂ ರಾಯಲ್ ಸವಾರಿಯ ಸಂಕೇತವಾಗಿರುವ ರೋಲ್ಸ್ ರಾಯ್ಸ್ ವ್ರೈತ್, ವಿ12 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 624 ಹಾರ್ಸ್ ಪವರ್ (800 ಎನ್‌ಎಂ) ಉತ್ಪಾದಿಸಲಿದೆ.

ಟ್ರಾನ್ಸ್‌ಮಿಷನ್
ಹಾಗೆಯೇ 8 ಸ್ಪೀಡ್ ಆಟೋಮ್ಯಾಟಿಕ್ ಝಡ್‌ಎಫ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ನಿರ್ವಹಣೆ
ಅಂದ ಹಾಗೆ ರೋಲ್ಸ್ ರಾಯ್ಸ್ ವ್ರೈತ್ ಕೇವಲ 4.2 ಸೆಕೆಂಡುಗಳಲ್ಲಿ 0-100 ಕೀ.ಮೀ. ತನಕ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗಿದ್ದರೂ ಗರಿಷ್ಠ ವೇಗದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.

ರೋಲ್ಸ್ ರಾಯ್ಸ್ ವ್ರೈತ್ 2,360 ಕಿಲೋ ಭಾರ ಹೊಂದಿರುವ ಹೊರತಾಗಿಯೂ ಹೆಚ್ಚಿನ ವೇಗತೆಯಲ್ಲಿ ಚಲಿಸಲು ನೆರವಾಗಲಿದೆ.

ಉಪಗ್ರಹ ಅನುದಾನಿತ ಪ್ರಸರಣ
ಇನ್ನೊಂದು ಮಹತ್ವದ ವೈಶಿಷ್ಟ್ಯ ಏನೆಂದರೆ ಉಪಗ್ರಹ ಅನುದಾನಿತ ಪ್ರಸರಣ ರೋಲ್ಸ್ ರಾಯ್ಸ್ ವ್ರೈತ್ ಚಾಲನೆಯನ್ನು ಸುಗಮವಾಗಿಸಲಿದೆ.
















Click it and Unblock the Notifications








