90 kmpl ಮೈಲೇಜ್ ನೀಡುವ ಕಾರನ್ನು ನೋಡಿದ್ರಾ?

Posted By:

ನಾವಿಂದು ಹೊಸ ಹಾಗೂ ವಿಶೇಷವಾದ ಕಾರೊಂದನ್ನು ಪರಿಚಯಿಸಲಿದ್ದೇವೆ. ಯಾಕೆಂದರೆ ದೇಶದ ಗ್ರಾಹಕರ ದೃಷ್ಟಿಕೋನದಲ್ಲಿ ಇದು ನಿರ್ಣಾಯಕವೆನಿಸಲಿದೆ. ಜಗತ್ತಿನ

ಪ್ರಖ್ಯಾತ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಫೋಕ್ಸ್‌ವ್ಯಾಗನ್ ನೂತನ ಕಾರೊಂದನ್ನು ಅಭಿವೃದ್ಧಿಪಡಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಾಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಅಂದ ಹಾಗೆ ಈ ಟ್ವಿನ್ ಅಪ್ ಕಾರು ಎಷ್ಟು ಮೈಲೇಜ್ ನೀಡುತ್ತದೆ ನಿಮಗೆ ಗೊತ್ತೇ? ಲೀಟರ್‌ಗೆ ಬರೋಬ್ಬರಿ 90.91 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರಲಿದೆ. ಅಂದ ಹಾಗೆ ಇದು ಫೋಕ್ಸ್‌ವ್ಯಾಗನ್ ಪಾಲಿಗೆ ಹೊಸತೇನಲ್ಲ? ಈ ಹಿಂದೆಯೂ ಫೋಕ್ಸ್‌ವ್ಯಾಗನ್ ಇದನ್ನು ಆವರ್ತಿಸಿತ್ತು.

ಅಷ್ಟಕ್ಕೂ ಫೋಕ್ಸ್‌ವ್ಯಾಗನ್ ನೂತನ ಟ್ವಿನ್ ಅಪ್ ಕಾರಿನಲ್ಲಿ ಆಳವಡಿಸಿರುವ ತಂತ್ರಗಾರಿಕೆಯಾದರೂ ಏನು? ಇದು ಭಾರತ ಮಾರುಕಟ್ಟೆಯನ್ನು ಪ್ರವೇಶಿಸುತ್ತಾ? ಮುಂತಾದ ಕುತೂಹಲಕಾರಿ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ.

To Follow DriveSpark On Facebook, Click The Like Button
ಟೊಕಿಯೊದಲ್ಲಿ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಅನಾವರಣ

ಜಪಾನ್‌ನಲ್ಲಿ ಸಾಗುತ್ತಿರುವ ಪ್ರತಿಷ್ಠಿತ ಟೊಕಿಯೋ ಮೋಟಾರ್ ಶೋದಲ್ಲಿ ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಕಾನ್ಸೆಪ್ಟ್ ಕಾರು ಅನಾವರಣಗೊಂಡಿದೆ.

ಟೊಕಿಯೊದಲ್ಲಿ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಅನಾವರಣ

ನಿಮ್ಮ ಮಾಹಿತಿಗಾಗಿ, ಫೋಕ್ಸ್‌ವ್ಯಾಗನ್ ತನ್ನ ನೂತನ ಟ್ವಿನ್ ಅಪ್ ಕಾರಿನಲ್ಲಿ ಹೈಬ್ರಿಡ್ ತಂತ್ರಜ್ಞಾನವನ್ನು ಆಳವಡಿಸಿಕೊಂಡಿದೆ.

ಟೊಕಿಯೊದಲ್ಲಿ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಅನಾವರಣ

ಇದರಲ್ಲಿ 0.8 ಲೀಟರ್ ಟು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಹಾಗೂ 27 kW ಎಲೆಕ್ಟ್ರಿಕ್ ಮೋಟಾರ್ ಹೊಂದಿರಲಿದೆ. ಅಲ್ಲದೆ ಡಿಎಸ್‌ಜಿ ಗೇರ್ ಬಾಕ್ಸ್ ಕೂಡಾ ಆಳವಡಿಸಲಾಗಿದೆ.

ಟೊಕಿಯೊದಲ್ಲಿ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಅನಾವರಣ

ಅಂದರೆ ನಾವು ಈ ಹಿಂದೆ ವರದಿ ಮಾಡಿರುವಂತೆಯೇ ಎಕ್ಸ್‌ಎಲ್1ರಲ್ಲಿ ಆಳವಡಿಸಿರುವುದಕ್ಕೆ ಸಮಾನವಾದ ತಂತ್ರಗಾರಿಕೆಯನ್ನು ಇಲ್ಲಿ ಅನುಸರಿಸಲಾಗಿದೆ.

ಟೊಕಿಯೊದಲ್ಲಿ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಅನಾವರಣ

ಈ ಎಲ್ಲ ತಂತ್ರಗಾರಿಕೆಯ ಮೂಲಕ ಗ್ರಾಹಕರ ನಿರೀಕ್ಷೆಗೂ ಮೀರಿದ ಅಂದರೆ ಪ್ರತಿ ಲೀಟರ್‌ಗೆ 90.91 ಕೀ.ಮೀ. (256.8 mpg) ಮೈಲೇಜ್ ಸಿಗಲಿದೆ.

ಟೊಕಿಯೊದಲ್ಲಿ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಅನಾವರಣ

ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್‌ನಲ್ಲಿ ಕೆಲವೊಂದು ಬದಲಾವಣೆ ತರಲಾಗಿದೆ. ಇದರ ಡೀಸೆಲ್ ಹಾಗೂ ಎಲೆಕ್ಟ್ರಿಕ್ ಮೋಟಾರ್ ಎಂಜಿನ್‌ಗಳು ಅನುಕ್ರಮವಾಗಿ 47 ಬಿಎಚ್‌ಪಿ ಮತ್ತು 35 kW ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಟೊಕಿಯೊದಲ್ಲಿ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಅನಾವರಣ

ಹಾಗೆಯೇ ಇದು 8.6 kWh ಲಿಥಿಯಂ ಇಯಾನ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡಲಿದೆ.

ಟೊಕಿಯೊದಲ್ಲಿ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಅನಾವರಣ

ಅಂತೆಯೇ 33 ಲೀಟರುಗಳ ಇಂಧನ ಟ್ಯಾಂಕ್ ಹಿಂದುಗಡೆ ಸೀಟು ಮತ್ತು ಲಗ್ಗೇಜ್ ಸ್ಪೇಸ್ ನಡುವೆ ಲಗತ್ತಿಸಲಾಗಿದೆ.

ಟೊಕಿಯೊದಲ್ಲಿ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಅನಾವರಣ

ಬ್ಯಾಟರಿಯಲ್ಲಿ ಸಂಪೂರ್ಣ ಚಾರ್ಜ್ ಇದ್ದಲ್ಲಿ ಚಾಲಕ ಇ ಮೋಡ್‌ಗೆ ಪರಿವರ್ತಿಸಬಹುದಾಗಿದ್ದು, ಇದು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

ಟೊಕಿಯೊದಲ್ಲಿ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಅನಾವರಣ

ಎಲೆಕ್ಟ್ರಿಕ್ ಪವರ್ ಮಾತ್ರವಾಗಿ ಗಂಟೆಗೆ 123 ಕೀ.ಮೀ.ಗಳಷ್ಟು ವೇಗವರ್ಧಿಸುವ ಸಾಮರ್ಥ್ಯವನ್ನು ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಪಡೆದುಕೊಂಡಿದೆ. ಹಾಗೆಯೇ ಕೇವಲ 8.8 ಸೆಕೆಂಡುಗಳಲ್ಲಿ ಗಂಟೆಗೆ 0ರಿಂದ 60 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಟೊಕಿಯೊದಲ್ಲಿ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಅನಾವರಣ

ಇನ್ನು ಡೀಸೆಲ್ ಮತ್ತು ಎಲೆಕ್ಟ್ರಿಕ್ ಮೋಟಾರು ಜತೆಯಾಗಿ ಬಳಸುವ ಮೂಲಕ 15.7 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸಬಹುದಾಗಿದೆ. ಇಲ್ಲೂ ಗಂಟೆಗೆ ಗರಿಷ್ಠ ವೇಗತೆ 140 ಕೀ.ಮೀ. ಆಗಿರಲಿದೆ.

ಟೊಕಿಯೊದಲ್ಲಿ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಅನಾವರಣ

ಜನರೇಟರ್ ತರಹನೇ ವರ್ತಿಸುವ ಇದರ ಎಲೆಕ್ಟ್ರಿಕ್ ಮೋಟಾರು, ಬ್ರೇಕ್ ಹಾಕುವಾಗ ಬ್ಯಾಟರಿ ಚಾರ್ಜ್ ಆಗಲು ನೆರವಾಗಲಿದೆ.

ಟೊಕಿಯೊದಲ್ಲಿ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಅನಾವರಣ

ಆಲ್ ಎಲೆಕ್ಟ್ರಿಕ್ ಇ-ಅಪ್‌ನಿಂದ ಸ್ಫೂರ್ತಿ ಪಡೆದು ಎಕ್ಸ್‌ಟೀರಿಯರ್ ವಿನ್ಯಾಸ ರಚಿಸಲಾಗಿದೆ.

ಟೊಕಿಯೊದಲ್ಲಿ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಅನಾವರಣ

ಹಾಗೆಯೇ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಡ್ರೈವಿಂಗ್ ಮೋಡ್, ಡಿಜಿಟಲ್ ಇನ್ಸ್ಟ್ರುಮೆಂಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಇತರ ಅನೇಕ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಟೊಕಿಯೊದಲ್ಲಿ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಅನಾವರಣ

ಅಂದ ಹಾಗೆ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಯಾವಾಗ ಅಂತರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸಲಿದೆ ಎಂಬುದರ ಬಗ್ಗೆ ಸದ್ಯ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

English summary
Volkswagen has unveiled a hybrid version of its up! city car at the Tokyo Motor Show. The twin up! concept car uses a 0.8-litre two-cylinder turbodiesel engine in series with a 27 kW electric motor and a seven-speed DSG gearbox – a version of the drivetrain found in the pioneering XL1 – and offers combined fuel consumption of 256.8 mpg.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark