ನಿನ್ನೆ ಬಿಡುಗಡೆಯಾಗಿರುವ ಹೊಸ ಪವರ್‌ಫುಲ್ 7-ಸೀಟರ್ ಕಾರಿನ ವಿಶೇಷತೆಗಳಿವು: ಬೆಲೆಯೆಷ್ಟು?
ಜನಪ್ರಿಯ ಕಾರು ತಯಾರಕ ಕಂಪನಿಯಾಗಿರುವ ಫೋಕ್ಸ್‌ವ್ಯಾಗನ್, ನಿನ್ನೆಯಷ್ಟೆ ತನ್ನ ಬಹುನಿರೀಕ್ಷಿತ 7-ಸೀಟರ್ ಎಸ್‌ಯುವಿಯಾಗಿರುವ ಟೇರಾನ್ ಆರ್-ಲೈನ್ (Volkswagen Tayron R-Line) ಅನ್ನು ಬಿಡುಗಡೆ ಮಾಡಿದೆ. ಈ ಪ್ರೀಮಿಯಂ 7-ಆಸನಗಳ ಎಸ್‌ಯುವಿ ಗ್ರಾಹಕರ ನಿರೀಕ್ಷೆಗಳನ್ನು ಮೀರಿ ಇರದಲಿದೆ, ಬೆಲೆ ವಿಷಯಕ್ಕೆ ಬಂದರೆ ಈ ಕಾರನ್ನು ರೂ. 46.99 ರೂ. (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಸ್ಪೋರ್ಟಿ ಡಿಸೈನ್, ಪವರ್‌ಫುಲ್-ಪರ್ಫಾಮೆನ್ಸ್, ಹೈ-ಟೆಕ್ ತಂತ್ರಜ್ಞಾನ ಮತ್ತು ಅಸಾಧಾರಣ ಸೌಕರ್ಯವನ್ನು ನೀಡುತ್ತದೆ. ಈ ಕಾರಿನ ಪ್ರಮುಖಾಂಶಗಳನ್ನು ವಿವರವಾಗಿ ತಿಳಿಯೋಣ.
ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್ ವಿಶೇಷತೆಗಳು
ಇಂಟೀರಿಯರ್ ವಿಷಯಕ್ಕೆ ಬಂದರೆ ವಿಸ್ತಾರವಾದ ಕ್ಯಾಬಿನ್ ಹೊಂದಿದ್ದು, ಡ್ಯಾಶ್‌ಬೋರ್ಡ್‌ನಲ್ಲಿ ಪ್ರಕಾಶಿತ R ಇನ್ಸರ್ಟ್‌ನೊಂದಿಗೆ 30 ಬಣ್ಣಗಳ ಆಂಬಿಯಂಟ್ ಲೈಟಿಂಗ್ ನೀಡಲಾಗಿದೆ. ಮುಂಭಾಗದಲ್ಲಿ ಮೆಮೊರಿಯೊಂದಿಗೆ 12-ವೇ ಎಲೆಕ್ಟ್ರಿಕ್, ವೇಂಟಿಲೇಟೆಡ್, 8-ಮೋಡ್ ಮಸಾಜ್ ಫಂಕ್ಷನ್ ಸೀಟ್‌ಗಳನ್ನು ಒದಿಸಲಾಗಿದೆ. ಹಿಂಭಾಗದ ಸೀಟುಗಳಲ್ಲಿ ಒರಗುವ ಮತ್ತು ರಿಕ್ಲೈನ್ ಫಂಕ್ಷನ್ ನೀಡಲಾಗಿದೆ.

ಫೀಚರ್ಸ್ ವಿಷಯಕ್ಕೆ ಬಂದರೆ, ಪನೋರಮಿಕ್ ಸನ್‌ರೂಫ್, ದೊಡ್ಡ 38.1 CM ಇನ್ಫೋಟೈನ್ಮೆಂಟ್ ಸ್ಕ್ರೀನ್, 26.03 CM ಡಿಜಿಟಲ್ ಡ್ರೈವರ್ ಡಿಸ್ಪ್ಲೆ ಹಾಗೂ ವರ್ಧಿತ ರಿಯಾಲಿಟಿ (AR) ಹೆಡ್-ಅಪ್ ಡಿಸ್ಪ್ಲೇ ನೀಡಲಾಗಿದೆ. ಎರಡು ಹೊಂದಾಣಿಕೆಯ ಮೊಬೈಲ್ ಫೋನ್‌ಗಳಿಗೆ ಡ್ಯುಯಲ್ ಹೈ-ಪವರ್ USB-C (45W) ಮತ್ತು ವೈರ್‌ಲೆಸ್ ಚಾರ್ಜಿಂಗ್, 3-ಝೋನ್ ಕ್ಲೈಮೇಟ್ ಕಂಟ್ರೋಲ್, ಪವರ್ಡ್ ಗೆಸ್ಚರ್-ಕಂಟ್ರೋಲ್ ಟೈಲ್‌ಗೇಟ್, ಹಾರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್‌ನೊಂದಿಗೆ 11 ಸ್ಪೀಕರ್ ನೀಡಲಾಗಿದೆ.
ಎಂಜಿನ್ ವಿಷಯಕ್ಕೆ ಬಂದರೆ ಹೊಸ ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್, ಡ್ರೈವರ್‌ಗೆ ಆರು ಮೋಡ್‌ಗಳೊಂದಿಗೆ ಡ್ರೈವ್ ಪ್ರೊಫೈಲ್ ಆಯ್ಕೆ ಮಾಡಬಹುದಾಗಿದೆ. 204 PS ಪವರ್ ಮತ್ತು 320 Nm ಟಾರ್ಕ್ ಹೊರಹಾಕುವ 2.0-ಲೀಟರ್ TSI EA888 evo4 ಎಂಜಿನ್ ಹೊಂದಿದೆ. ಇದು 7-ಸ್ಪೀಡ್ DSG, 4MOTION ಆಲ್-ವೀಲ್ ಡ್ರೈವ್ (AWD) ಜೊತೆಗೆ ಬರುತ್ತದೆ.

ಸೇಫ್ಟಿ ವಿಷಯಕ್ಕೆ ಬಂದರೆ ಫೋಕ್ಸ್ ವ್ಯಾಗನ್ ಟೇರಾನ್ ಆರ್ - ಲೈನ್ ಎಸ್‌ಯುವಿನಲ್ಲಿ ಒಂಬತ್ತು ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲೈಸೇಶನ್ ಕಂಟ್ರೋಲ್, ಹಿಲ್ ಅಸೆಂಟ್ ಮತ್ತು ಡಿಸೆಂಟ್ ಸೇರಿದಂತೆ ಇನ್ನೂ ಹಲವನ್ನು ಒಳಗೊಂಡಿದೆ. ಇವು ಪ್ರಯಾಣಿಕರಿಗೆ ಲಾಂಗ್‌ಡ್ರೈವ್‌ನಲ್ಲಿ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣಕ್ಕೆ ಅನುಕೂಲಕರವಾಗಿಸುತ್ತವೆ. ಈ ಕಾರು ಕೇವಲ 7.3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪಬಲ್ಲದು. 224 ಕಿ.ಮೀ ಟಾಪ್ ಸ್ಪೀಡ್ ಹೋಗಬಲ್ಲದು.
ಡಿಸೈನ್ ವಿಷಯಕ್ಕೆ ಬಂದರೆ ಬಂಪರ್ ಮತ್ತು ಮುಂಭಾಗದ ಬಾಗಿಲಿನ ಮೇಲೆ R-ಲೈನ್ ಅಂಶಗಳು, 19 - ಇಂಚಿನ ಕವೆಂಟ್ರಿ ಅಲಾಯ್ ವೀಲ್‌ಗಳು, HD ಮ್ಯಾಟ್ರಿಕ್ಸ್ LED ಹೆಡ್‌ಲ್ಯಾಂಪ್‌ಗಳೊಂದಿಗೆ IQ ಲೈಟ್, ಪ್ರಕಾಶಿತ ಮುಂಭಾಗ ಮತ್ತು ಹಿಂಭಾಗದ ಲೋಗೋ, ಮೊದಲ ನೋಟದಲ್ಲಿ SUV- ನೋಟ ಮತ್ತು ಪ್ರೀಮಿಯಂ ಜರ್ಮನ್ ವಾಹನದ ಪ್ರೀಮಿಯಂ ಸ್ಪೋರ್ಟಿ ಲುಕ್ ನೀಡುತ್ತದೆ.

ಇದೇ ತಿಂಗಳ ಆರಂಭದಲ್ಲಿ ಫೋಕ್ಸ್‌ವ್ಯಾಗನ್ ಈ ಹೊಸ ಟೇರಾನ್ ಆರ್-ಲೈನ್ 7 - ಸೀಟರ್ ಎಸ್‌ಯುವಿಗಾಗಿ ಪ್ರೀ-ಬುಕಿಂಗ್ ತೆರೆದಿತ್ತು, ಗ್ರಾಹಕರು ದೇಶಾದ್ಯಂತ ಅಧಿಕೃತ ಫೋಕ್ಸ್‌ವ್ಯಾಗನ್ ಡೀಲರ್‌ಶಿಪ್‌ಗಳಲ್ಲಿ ಮತ್ತು ಬ್ರ್ಯಾಂಡ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ರೂ. 51,000 ಪಾವತಿಸಿ ಟೇರಾನ್ ಆರ್-ಲೈನ್ ಅನ್ನು ಬುಕ್ ಮಾಡಬಹುದು.
ಹೊಸ ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್ ಎಸ್‌ಯುವಿಯು ಡಾಲ್ಫಿನ್ ಗ್ರೇ ಮೆಟಾಲಿಕ್, ಆಯ್ಸ್ಟರ್ ಸಿಲ್ವರ್ ಮೆಟಾಲಿಕ್, ಅಲ್ಟ್ರಾವೈಲೆಟ್ ಮೆಟಾಲಿಕ್, ಸಿಪ್ರೆಸ್ಸಿನೊ-ಗ್ರೀನ್ ಮೆಟಾಲಿಕ್, ನೈಟ್‌ಶೇಡ್ ಬ್ಲೂ ಮೆಟಾಲಿಕ್, ಗ್ರೆನಡಿಲ್ಲಾ ಬ್ಲ್ಯಾಕ್ ಮೆಟಾಲಿಕ್, ಓರಿಕ್ಸ್ ವೈಟ್ ಮದರ್- ಆಫ್ -ಪರ್ಲ್ ಎಫೆಕ್ಟ್ ಎಂಬ 7 ಬಣ್ಣ ಆಯ್ಕೆಗಳನ್ನು ಹೊಂದಿದೆ.


Click it and Unblock the Notifications








