ಫೋಕ್ಸ್‌ವ್ಯಾಗನ್ ಸೂಪರ್ ಕಾರಿನ ಮೈಲೇಜ್ 111 ಕೀ.ಮೀ.!

By Nagaraja

111 ಕೀ.ಮೀ. ಮೈಲೇಜ್ ನೀಡಲು ಶಕ್ತಿಯುಳ್ಳ ಅತಿ ವಿಶೇಷ ಹೈಬ್ರಿಡ್ ಕಾರಿಗೆ ಫೋಕ್ಸ್‌ವ್ಯಾಗನ್ ರೂಪುರೇಷೆ ನೀಡಿದೆ. ಇದರಂತೆ ಈ ಹೈಬ್ರಿಡ್ ಕಾರಿಗೆ ಮಿತಿ ಮೀರಿದ ಬೇಡಿಕೆ ಕಂಡುಬಂದಿದೆ.

ಭವಿಷ್ಯದ ಸಂಚಾರ ವ್ಯವಸ್ಥೆಗೆ ಪೂರಕವಾದ ರೀತಿಯಲ್ಲಿ ಎಕ್ಸ್‌ಎಲ್1 ಸೂಪರ್ ಕಾರನ್ನು ಫೋಕ್ಸ್‌ವ್ಯಾಗನ್ ಅಭಿವೃದ್ಧಿಪಡಿಸುತ್ತಿದೆ. ಆದರೆ ನಿಗದಿತ 200 ಯುನಿಟ್‌ಗಳನ್ನಷ್ಟೇ ಉತ್ಪಾದಿಸುವುದಾಗಿ ಕಂಪನಿ ಸ್ಪಷ್ಟಪಡಿಸಿತ್ತು.

ಇದು ಗ್ರಾಹಕರಲ್ಲಿ ಅತೀವ ಬೇಸರಕ್ಕೆ ಕಾರಣವಾಗಿದೆ. ಯಾಕೆಂದರೆ ಫೋಕ್ಸ್‌ವ್ಯಾಗನ್ ಎಕ್ಸ್‌ಎಲ್1 ನಿರ್ಮಾಣ ಮಿತಿ ಈಗಲೇ ಮೀರಿದ್ದು, ಗ್ರಾಹಕರಿಂದ ಕಂಡುಬರುತ್ತಿರುವ ಗಣನೀಯ ಬೇಡಿಕೆಗೆ ಫೋಕ್ಸ್‌ವ್ಯಾಗನ್ ಸೂಕ್ತ ರೀತಿಯಲ್ಲಿ ಸ್ಪಂದಿಸಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಬೆಲೆ

ಬೆಲೆ

ದುಡ್ಡಿದ್ದವರಿಗೆ ಕಾರಿನ ಬೆಲೆ ಒಂದು ಸಮಸ್ಯೆಯಾಗಲ್ಲ ಬಿಡಿ. ಅಲ್ಯೂಮಿನಿಯಂ ಹಾಗೂ ಸಿಆರ್‌ಎಫ್‌ಪಿ ಪರಿಕರಗಳಿಂದ ತಯಾರಿಸಲ್ಪಡುವ ನೂತನ ಸೂಪರ್ ಕಾರು ಒಂದು ಕೋಟಿಗಿಂತಲೂ ದುಬಾರಿಯಾಗಲಿದೆ.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ಫೋಕ್ಸ್‌ವ್ಯಾಗನ್ ಎಕ್ಸ್‌ಎಲ್1 ಸೂಪರ್ ಕಾರು 48 ಅಶ್ವಶಕ್ತಿ ಉತ್ಪಾದಿಸುವ 2 ಸಿಲಿಂಡರ್ 800ಸಿಸಿ ಟಿಡಿಐ ಡೀಸೆಲ್ ಎಂಜಿನ್ ಹಾಗೂ 27ಪಿಎಸ್ ಎಲೆಕ್ಟ್ರಿಕ್ ಮೋಟಾರ್ ಎಂಜಿನ್ ಹೊಂದಿರಲಿದೆ. ಹಾಗೆಯೇ 7 ಸ್ಪೀಡ್ ಡ್ಯುವಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆಯಲಿದೆ.

ಮೈಲೇಜ್

ಮೈಲೇಜ್

ಕಂಪನಿಯ ಪ್ರಕಾರ ಈ ಹೈಬ್ರಿಡ್ ಕಾರು 111 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಅಂದರೆ ಸೂಪರ್ ಕಾರುಗಳಲ್ಲಿ ನೂತನಅಧ್ಯಾಯ ತೆರೆದುಕೊಳ್ಳಲಿದೆ. ಅಲ್ಲದೆ ಕೇವಲ ಎಲೆಕ್ಟ್ರಿಕ್ ಮೋಡ್‌ನಲ್ಲಿ ಮಾತ್ರವಾಗಿ 50 ಕೀ.ಮೀ. ಸಂಚರಿಸುವ ಸಾಮರ್ಥ್ಯ ಹೊಂದಿದೆ.

ವೇಗವರ್ಧನೆ

ವೇಗವರ್ಧನೆ

ಕೇವಲ 12.7 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯವುಳ್ಳ ಫೋಕ್ಸ್‌ವ್ಯಾಗನ್ ಎಕ್ಸ್‌ಎಲ್1, ಗಂಟೆಗೆ ಗರಿಷ್ಠ 160 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಆಯಾಮ

ಆಯಾಮ

ಫೋಕ್ಸ್‌ವ್ಯಾಗನ್ ಎಕ್ಸ್‌ಎಲ್1 ಸೂಪರ್ ಕಾರು 3888 ಎಂಎಂ ಉದ್ದ, 1665 ಎಂಎಂ ಅಗಲ, 1153 ಎಂಎಂ ಎತ್ತರ ಹಾಗೂ 795 ಕೆ.ಜಿ. ಭಾರವಿರಲಿದೆ.

ಪರಸರ ಸ್ನೇಹಿ

ಪರಸರ ಸ್ನೇಹಿ

ಇನ್ನು ಫೋಕ್ಸ್‌ವ್ಯಾಗನ್ ಎಕ್ಸ್‌ಎಲ್1 ಹೈಬ್ರಿಡ್ ಕಾರು ಪ್ರತಿ ಕೀ.ಮೀ. ಕೇವಲ 21ಗ್ರಾಂ ಮಾತ್ರ ಕಾರ್ಬನ್ ಡೈ ಓಕ್ಸೈಡ್ (CO2) ಹೊಗೆಯನ್ನು ಹೊರಸೂಸಲಿದೆ. ಅಂದರೆ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

Most Read Articles

Kannada
English summary
It has emerged that Volkswagen has garnered so many orders for the VW XL1 that it fears that the proposed production volume for the upcoming supercar would be insufficient.
Story first published: Thursday, October 31, 2013, 17:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X