ಪಳಪಳನೆ ಹೊಳೆಯುವ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್
ಪ್ರಖ್ಯಾತ 65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋ ಸಾಗುತ್ತಿರುವಂತೆಯೇ ಪಳಪಳನೆ ಹೊಳೆಯುತ್ತಿರುವ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ವರ್ಷನ್ ಭರ್ಜರಿ ಅನಾವರಣ ಕಂಡಿದೆ.
ಮಾರುತಿ ಸುಜುಕಿ ಮಾತೃಸಂಸ್ಥೆಯಾಗಿರುವ ಜಪಾನ್ ಮೂಲದ ಸುಜುಕಿ, ಯುರೋಪ್ ವರ್ಷನ್ ಸ್ವಿಫ್ಟ್ ಮಾದರಿಯನ್ನು ಪ್ರದರ್ಶಿಸಿದೆ. ಭಾರತದಲ್ಲಿ ಅತ್ಯಂತ ಹೆಚ್ಚಿನ ಯಶಸ್ಸು ಕಂಡಿರುವ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದಾಗಿರುವ ಸ್ವಿಫ್ಟ್ ಮುಂಬರುವ ದಿನಗಳಲ್ಲಿ ಫೇಸ್‌ಲಿಫ್ಟ್ ವರ್ಷನ್ ಪರಿಚಯಿಸಿದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ.
ಈಗಾಗಲೇ ಗ್ರಾಂಡ್ ಐ10ಗಳಂತಹ ಪ್ರತಿಸ್ಪರ್ಧಿಗಳು ಮಾರುಕಟ್ಟೆಯಲ್ಲಿ ತಲೆಯೆತ್ತಿರುವ ಹಿನ್ನಲೆಯಲ್ಲಿ ಮಾರುತಿ ನೂತನ ಮಾರಾಟ ತಂತ್ರ ಅನುಸರಿಸುವ ಸಾಧ್ಯತೆಯಿದೆ. ನಿಮ್ಮ ಮಾಹಿತಿಗಾಗಿ, ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ವರ್ಷನ್ ಚಿತ್ರಗಳು ಕಳೆದ ತಿಂಗಳಲ್ಲೇ ಲೀಕ್ ಆಗಿದ್ದವು. ಇದೀಗ 2013 ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ.

ಡೇ ಟೈಮ್ ರನ್ನಿಂಗ್ ಹೆಡ್‌ಲೈಟ್
ನೂತನ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ವರ್ಷನ್‌ನಲ್ಲಿ ಡೇ ಟೈಮ್ ರನ್ನಿಂಗ್ ಹೆಡ್‌ಲೈಟ್ ಎಲ್‌ಇಡಿ ವ್ಯವಸ್ಥೆಯು ಕಾರಿನ ಅಂದತೆಯನ್ನು ಹೆಚ್ಚಿಸಲಿದೆ. ಇದು ಫಾಗ್ ಲೈಟ್ ಹೌಸಿಂಗನ್ನು ಸುತ್ತುವರಿಯಲಿದ್ದು, ಸಮಾನ ವಿನ್ಯಾಸ ಪಡೆದುಕೊಂಡಿರುವ ಹ್ಯುಂಡೈ ಐ20 ಮಾದರಿಗೆ ಸ್ಪರ್ಧೆ ಒಡ್ಡುವಲ್ಲಿ ನೆರವಾಗಲಿದೆ. ಹಾಗೆಯೇ ಕಾರಿನ ಹಿಂಭಾಗದಲ್ಲಿ ಎಲ್‌ಇಡಿ ಸ್ಟಾಪ್ ಲೈಡ್ ಕೂಡಾ ಲಗತ್ತಿಸಲಾಗಿದೆ.

ಇಂಟಿರಿಯರ್
ಇನ್ನು ಕಾರಿನ ಒಳಗಡೆ ಪವರ್ ಫೋಲ್ಡಿಂಗ್ ಔಟ್ ಸೈಡ್ ಮಿರರ್, ಆಟೋ ಮ್ಯಾಟಿಕ್ ಹೆಡ್ ಲೈಟ್, ಡ್ರೈವರ್ ಸೈಡ್‌ನಲ್ಲಿ 'ಆಟೋ ಅಪ್' ಪವರ್ ವಿಂಡೋ ಹಾಗೆಯೇ ನೀಲಿ ಹಾಗೂ ಬೂದು ಬಣ್ಣಗಳಲ್ಲಿ ಹೊಸತಾಗಿ ವಿನ್ಯಾಸಗೊಳಿಸಲಾದ ಸೀಟುಗಳನ್ನು ಜೋಡಣೆ ಮಾಡಲಾಗಿದೆ.

ಎಂಜಿನ್
ನೂತನ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ವರ್ಷನ್, 1.2 ಲೀಟರ್ ಕೆ ಸಿರಿಸ್ ಪೆಟ್ರೋಲ್ ಎಂಜಿನ್ ಹಾಗೂ ಫಿಯೆಟ್‌ನಿಂದ ಆಮದು ಮಾಡಲಾದ 1.3 ಲೀಟರ್ ಡಿಡಿಐಎಸ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಮೈಲೇಜ್
ಪ್ರಸ್ತುತ ಡೀಸೆಲ್ ಎಂಜಿನ್ ಶೇಕಡಾ 7ರಷ್ಟು ಅಧಿಕ ಮೈಲೇಜ್ ನೀಡಲಿದ್ದು, ಪ್ರತಿ ಲೀಟರ್‌ಗೆ 25.63 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಕಡಿಮೆ ಹೊಗೆ ಹೊರಸೂಸಲಿದೆ.

ಬೂಸ್ಟ್ ಬ್ಲೂ
ಇದರ ಜತೆ 'ಬೂಸ್ಟ್ ಬ್ಲೂ' ಕಲರ್ ವೆರಿಯಂಟ್ ಆಯ್ಕೆ ಕೂಡಾ ನೀಡಲಾಗಿದೆ. ಹಾಗೆಯೇ ಮುಂಭಾಗದ ಬಂಪರ್ ಕೆಳಗಡೆ ಬೆಳ್ಳಿಯ ರೇಖೆ ಹಾದು ಹೋಗುತ್ತಿದ್ದು, ಇನ್ನಷ್ಟು ಸೊಗಸಾಗಿ ಕಾಣುವಂತೆ ಮಾಡಿದೆ.

30 Jahre
ಯುರೋಪ್ ಎಡಿಷನ್ ಇನ್ನಷ್ಟು ಆಸಕ್ತಿಗೊಳಿಸುವ ನಿಟ್ಟಿನಲ್ಲಿ ನೂತನ ಸ್ವಿಫ್ಟ್ '30 ಜಹ್ರೆ' (30 jahre) ಎಂಬ ಸ್ಪೆಷಲ್ ಎಡಿಷನ್ ಕೂಡಾ ಲಾಂಚ್ ಮಾಡಲಾಗಿದೆ. ಇದು ಜರ್ಮನಿಯಲ್ಲಿ 30 ವರ್ಷ ಸಂಕೇತ ನೀಡುತ್ತದೆ.

ಮೂರು ಡೋರ್
ಸ್ವಿಫ್ಟ್ 30 ಜಹ್ರೆ ಮೂರು ಡೋರ್‌ಗಳ ಕಾರಾಗಿದ್ದು, ಸ್ಟೈಲಿಷ್ ರೂಫ್, ಫ್ಲೋರ್ ಮ್ಯಾಟ್ ಹಾಗೂ ವಿಶೇಷ ರಿಯರ್ ವ್ಯೂ ಮಿರರ್ ಬಣ್ಣಗಳನ್ನು ಪಡೆಯಲಿದೆ.


Click it and Unblock the Notifications








