ಟೊಯೊಟಾ ಪ್ರಯಾಸ್ ಸಿ: 9.80 ಲಕ್ಷ ರು.ಗೆ ಹೈಬ್ರಿಡ್ ಕಾರು

ಟೊಯೊಟಾ ಕಂಪನಿ ಪ್ರಸಕ್ತ ವರ್ಷದ ಮಾರ್ಚ್ ತಿಂಗಳಲ್ಲಿ ಪ್ರಯಾಸ್ ಸಿ ಎಂಬ ಕಾರನ್ನು ಹೊರತರಲಿದೆ. ಇದು ಪ್ರಯಾಸ್ ಕಾರುಗಳಲ್ಲೇ ಅಗ್ಗದ ಕಾರಾಗಲಿದೆ. ಈ ಕಾರಿನ ದರ ಸುಮಾರು 9.80 ಲಕ್ಷ ರು. ಆಸುಪಾಸಿನಲ್ಲಿರಲಿದೆ.

Toyota Prius C Hybrid car

ಟೊಯೊಟಾ ಪ್ರಯಾಸ್ ಕುಟುಂಬಕ್ಕೆ ನೂತನ ಕಾರೊಂದು ಆಗಮಿಸಿದೆ. ಹೆಸರು ಪ್ರಯಾಸ್ ಸಿ. ಸಿ ಅಂದ್ರೆ ಸಿಟಿ. ಹೆಸರೇ ಹೇಳುವಂತೆ ಇದು ನಗರ ಸವಾರಿಗೆ ಸೂಕ್ತವಾಗಿರುವ ಕಾರು. ನಾಲ್ಕು ಡೋರಿನ ಈ ಹ್ಯಾಚ್ ಬ್ಯಾಕ್ ಕಾರನ್ನು ಟೊಯೊಟಾ ಕಂಪನಿಯು ಡೆಟ್ರೋಯಿಟ್ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿದೆ.

ನೂತನ ಪ್ರಯಾಸ್ ಸಿ ಹೈಬ್ರಿಡ್ ಕಾರು 2012ರ ಮಾರ್ಚ್ ತಿಂಗಳಲ್ಲಿ ಅಮೆರಿಕ ರಸ್ತೆಗಿಳಿಯಲಿದೆ. ಕೆಲವು ಸಮಯದ ನಂತರ ದೇಶದ ರಸ್ತೆಗೂ ಈ ಕಾರು ಆಗಮಿಸುವ ನಿರೀಕ್ಷೆಯಿದೆ. ಈ ಕಾರಿನ ಆರಂಭಿಕ ದರ ಸುಮಾರು 19 ಸಾವಿರ ಡಾಲರ್(ಸುಮಾರು 9.80 ಲಕ್ಷ ರು) ಇರಲಿದೆ.

ನೂತನ ಪ್ರಯಾಸ್ ಕಾರು ನಗರ ರಸ್ತೆಗಳಲ್ಲಿ ಸುಮಾರು 22.53 ಕಿ.ಮೀ. ಮೈಲೇಜ್ ಮತ್ತು ಹೆದ್ದಾರಿ ರಸ್ತೆಗಳಲ್ಲಿ ಸುಮಾರು 19.55 ಕಿ.ಮೀ. ಮೈಲೇಜ್ ನೀಡಲಿದೆಯಂತೆ. ಈ ಕಾರಿನಲ್ಲಿ ಆಟೋಮ್ಯಾಟಿಕ ಕ್ಲೈಮೇಟ್ ಕಂಟ್ರೋಲ್, ಬ್ಲೂಟೂಥ್ ಕನೆಕ್ಟಿವಿಟಿ, ರಿಮೋಟ್ ಕೀಲೆಸ್ ಎಂಟ್ರಿ, ಸ್ಟಿಯರಿಂಗ್ ವೀಲ್ ನಲ್ಲಿ ಆಡಿಯೋ ಕಂಟ್ರೋಲ್, 9 ಏರ್ ಬ್ಯಾಗ್ ಇತ್ಯಾದಿ ಹತ್ತು ಹಲವು ಸ್ಟಾಂಡರ್ಡ್ ಫೀಚರುಗಳು ಇರಲಿವೆ.

More from DriveSpark

Article Published On: Friday, January 13, 2012, 11:53 [IST]
English summary
Toyota showcased Prius C Hybrid car at Detroit Auto Show. Prius c hit showrooms in March 2012. New 2013 Prius C starting price of $19,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+