ಬದಲಾವಣೆಯೇ ಜಗತ್ತಿನ ನಿಯಮ; ಯಮಹಾ ಎಲೆಕ್ಟ್ರಿಕ್ ಬೈಕ್
ಭವಿಷ್ಯದ ಸಂಚಾರ ವಾಹಕ ಕೇವಲ ನಾಲ್ಕು ಚಕ್ರದ ವಾಹನಗಳಿಗಷ್ಟೇ ಸೀಮಿತವಾಗಿಲ್ಲ. ಪ್ರತಿಷ್ಠಿತ ಟೊಕಿಯೊ ಮೋಟಾರ್ ಶೋದಲ್ಲಿ ಇನ್ನೊಂದು ವಿದ್ಯುತ್ ಚಾಲಿತ ವಾಹನ ಸಹ ಭರ್ಜರಿ ಅನಾವರಣ ಕಂಡಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಹೌದು, ಜಪಾನ್ ಮೂಲದವರೇ ಆಗಿರುವ ಯಮಹಾ ತವರೂರಿನಲ್ಲಿ ನಡೆದ ಟೊಕಿಯೊ ಮೋಟಾರ್ ಶೋದಲ್ಲಿ ಪಿಇಎಸ್1 ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಕಾನ್ಸ್ಪೆಪ್ಟ್ ಪ್ರದರ್ಶಿಸಿದೆ. ಇದು ಸಂಪೂರ್ಣ ಪರಿಸರ ಸ್ನೇಹಿ ಎನಿಸಿಕೊಂಡಿರಲಿದೆ.

ಯಮಹಾ ಪಿಇಎಸ್1 ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಲಿಥಿಯಂ ಇಯಾನ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡಲಿದೆ. ಬದಲಾಯಿಸಬಹುದಾದ ಈ ಬ್ಯಾಟರಿ ಪ್ಯಾಕ್, ಯಮಹಾ ಸ್ಮಾರ್ಟ್ ಪವರ್ ಮೊಡ್ಯೂಲ್ ಎಂದು ಹೆಸರಿಸಲ್ಪಡಲಿದೆ.

ನೂತನ ಯಮಹಾ ಪಿಇಎಸ್1 ತನ್ನದೇ ಆದ ವಿಶಿಷ್ಟ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದು ಮೊನೊಕಾಕ್ ವಿನ್ಯಾಸ ಪಡೆದುಕೊಂಡಿದ್ದು, ಭಾರ ಕಡಿಮೆ ಮಾಡಲು ನೆರವಾಗಿದೆ.

ಈ ಮೊದಲೇ ಸೂಚಿಸಿರುವಂತೆಯೇ ಒಂದೇ ಫ್ರೇಮ್‌ನ ಮೊನೊಕಾಕ್ ವಿನ್ಯಾಸ ಚಾಲಕರಿಗೆ ಉತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡಲಿದೆ.

ಇದರ ಟ್ರಾನ್ಸ್‌ಮಿಷನ್ ಇನ್ನೊಂದು ಪ್ರಮುಖ ವೈಶಿಷ್ಯ್ಟವಾಗಿರಲಿದೆ. ಇತರ ಎಲೆಕ್ಟ್ರಿಕ್ ವಾಹನಗಳಿಗಿಂತಲೂ ವಿಭಿನ್ನವಾಗಿ ಇದು ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ತಂತ್ರಜ್ಞಾನ ಪಡೆದುಕೊಂಡಿದೆ.

ಇನ್ನೊಂದು ವೈಶಿಷ್ಟ್ಯವೆಂದರೆ ಇದರ ಮಾಹಿತಿ ಸಿಸ್ಟಂಗೆ ಸ್ಮಾರ್ಟ್ ಫೋನ್ ಸಂಪರ್ಕ ಸಾಧಿಸಬಹುದಾಗಿದೆ. ಹಾಗೆಯೇ ಮಾಹಿತಿ ಸಿಸ್ಟಂ ಪರದೆ ಮೇಲೆ ಮಾಹಿತಿಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.


Click it and Unblock the Notifications








