ಮಾರುತಿ ಸುಜುಕಿ ಸಂಸ್ಥೆಯಲ್ಲಿ ಇದೀಗ ಆರು ಬಿಎಸ್-6 ಎಂಜಿನ್ ವಾಹನಗಳಿವೆ

ದೇಶಾದ್ಯಂತ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಹೊಸ ವಾಹನಗಳ ಎಂಜಿನ್‌ ತಂತ್ರಜ್ಞಾನದಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಕೆಲವು ಕಡ್ಡಾಯ ನಿಯಮಗಳನ್ನು ಜಾರಿ ತರುತ್ತಿದ್ದು, 2020ರ ಏಪ್ರಿಲ್ 1ಕ್ಕೆ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮವು ಹೊಸ ಸಂಚಲನಕ್ಕೆ ಕಾರಣವಾಗಿದೆ.

ಮಾರುತಿ ಸುಜುಕಿಯಲ್ಲಿ ಇದೀಗ ಆರು ಬಿಎಸ್-6 ಪೆಟ್ರೋಲ್ ಎಂಜಿನ್ ಹೊಂದಿರುವ ವಾಹನಗಳಿವೆ

ಹೌದು, ಭಾರತದಲ್ಲಿ ಸದ್ಯ ಬಿಎಸ್-4(ಭಾರತ್ ಸ್ಟೇಜ್) ವೈಶಿಷ್ಟ್ಯತೆಯುಳ್ಳ ವಾಹನಗಳು ಮಾತ್ರ ಮಾರಾಟಗೊಳ್ಳುತ್ತಿದ್ದು, ಇದು ಕೂಡಾ ಮುಂಬರುವ 2020ರ ಏಪ್ರಿಲ್ 1ರಿಂದ ನಿಷೇಧಗೊಂಡು ಬಿಎಸ್-6 ನಿಯಮವು ಜಾರಿಗೆ ಬರಲಿದೆ. ಹೀಗಾಗಿ ಕೇಂದ್ರ ಸರ್ಕಾರದ ಹೊಸ ನಿಯಮದಂತೆ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಜನಪ್ರಿಯ ವಾಹನಗಳಿಗೆ ಬಿಎಸ್-6 ಎಂಜಿನ್‍‍ನೊಂದಿಗೆ ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡಲಾಗಿದೆ. ಮಾರುತಿ ಸುಜುಕಿ ಬಿಡುಗಡೆ ಮಾಡಲಾದ ಆ ಆರು ಬಿಎಸ್-6 ಎಂಜಿನ್ ಆಧಾರಿತ ವಾಹನಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಮಾರುತಿ ಸುಜುಕಿಯಲ್ಲಿ ಇದೀಗ ಆರು ಬಿಎಸ್-6 ಪೆಟ್ರೋಲ್ ಎಂಜಿನ್ ಹೊಂದಿರುವ ವಾಹನಗಳಿವೆ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್ಐಎಲ್) ತನ್ನ ಬಿಎಸ್ 6 ಪೋರ್ಟ್‍‍‍ಫೋಲಿಯೋವನ್ನು ದೇಶಿಯ ಮಾರುಕಟ್ಟೆಯಲ್ಲಿ ವೇಗವಾಗಿ ವಿಸ್ತರಿಸುತ್ತಿದ್ದು, ತಾವು ಹೊಸದಾಗಿ ನವೀಕರಿಸಿದ 1.5-ಲೀಟರ್ ಎಸ್‌ಎಚ್‌ವಿಎಸ್ ಪೆಟ್ರೋಲ್ ಎಂಜಿನ್ ಅನ್ನು ಎರ್ಟಿಗಾ ಎಂಪಿವಿಯಲ್ಲಿ ಹೊಸದಾಗಿ ಬಿಡುಗಡೆ ಮಾಡಿದೆ.

ಮಾರುತಿ ಸುಜುಕಿಯಲ್ಲಿ ಇದೀಗ ಆರು ಬಿಎಸ್-6 ಪೆಟ್ರೋಲ್ ಎಂಜಿನ್ ಹೊಂದಿರುವ ವಾಹನಗಳಿವೆ

ಮಾರುತಿ ಸುಜುಕಿ ಎರ್ಟಿಗಾ ಬಿಎಸ್-6 ಎಂಜಿನ್ ಪಡೆದ ಆರನೆಯ ಕಾರಾಗಿದ್ದು, ಈ ಕಾರು ಸಂಸ್ಥೆಯು ಬಿಎಸ್-6 ಎಂಜಿನ್ ಅನ್ನು ಅಭಿವೃದ್ಧಿಗೊಳಿಸಿದ ಮೂರು ತಿಂಗಳ ನಂತರ ಎಂಜಿನ್ ಅನ್ನು ಪಡೆದುಕೊಂಡಿದೆ. ಏಕೆಂದರೆ ಮಾರುತಿ ಸುಜುಕಿ ತನ್ನ ಮಾದರಿಗಳನ್ನು ಬಿಎಸ್ 6 ಅನ್ನು ಮಾರ್ಚ್ 31, 2020ಕ್ಕಿಂತಲೂ ಮುಂಚೆಯೇ ಪರಿಚಯಿಸಲು ಮುಂದಾಗಿದೆ. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯು ಹೊಸ 1.2-ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಏಪ್ರಿಲ್ 2019 ರಲ್ಲಿ ಎರಡು ರೂಪಾಂತರಗಳಲ್ಲಿ ಬಲೆನೊದಲ್ಲಿ ಬಿಡುಗಡೆ ಮಾಡಿತು.

ಮಾರುತಿ ಸುಜುಕಿಯಲ್ಲಿ ಇದೀಗ ಆರು ಬಿಎಸ್-6 ಪೆಟ್ರೋಲ್ ಎಂಜಿನ್ ಹೊಂದಿರುವ ವಾಹನಗಳಿವೆ

ಬಿಎಸ್ 6 ಕಂಪ್ಲೈಂಟ್ ವಿವಿಟಿ ಎಂಜಿನ್ 23.87 ಕಿ.ಮೀ.ನಷ್ಟು ಇಂಧನ ಆರ್ಥಿಕತೆಯೊಂದಿಗೆ ರೂ. 7.25 ಲಕ್ಷದ ಬೆಲೆಯನ್ನು ಹೊಂದಿದ್ದರೆ, ಸಾಮಾನ್ಯ 1.2-ಲೀಟರ್ ಕೆ-ಸೀರಿಸ್ ಮೋಟರ್ ಅನ್ನು ಸಹ ಬಲೆನೊ ಕಾರಿನಲ್ಲಿ ನವೀಕರಿಸಲಾಗಿದೆ. ಇದರ ಬೆನ್ನಲ್ಲೇ ಬಿಎಸ್‌-6 ಎಂಜಿನ್ ಆಧಾರಿತ ಆಲ್ಟೊ 800 ಎಸ್‌ಟಿಡಿ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 2.93 ಲಕ್ಷ, ಆಲ್ಟೋ ಎಲ್‌ಎಕ್ಸ್‌ಐಗೆ ರೂ. 3.50 ಲಕ್ಷ ಮತ್ತು ರೂ. ವಿಎಕ್ಸ್‌ಐ ವೇರಿಯೆಂಟ್‍ಗೆ ರೂ. 3.50 ಲಕ್ಷ ನಿಗದಿ ಮಾಡಲಾಗಿದೆ.

ಮಾರುತಿ ಸುಜುಕಿಯಲ್ಲಿ ಇದೀಗ ಆರು ಬಿಎಸ್-6 ಪೆಟ್ರೋಲ್ ಎಂಜಿನ್ ಹೊಂದಿರುವ ವಾಹನಗಳಿವೆ

ಸ್ವಿಫ್ಟ್, ಡಿಜೈರ್ ಮತ್ತು ವ್ಯಾಗನ್ ಆರ್ ಬಲೆನೊದಂತೆಯೇ 1.2-ಲೀಟರ್ ಕೆ12 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿವೆ. ಜೂನ್ 2019ರಲ್ಲಿ, ಈ ಮೂರು ಕಾರುಗಳು ಬಿಎಸ್6 ಎಂಜಿನ್ ಅನ್ನು ಪಡೆದವು. ಡಿಜೈರ್ ಎಕ್ಸ್ ಶೋರುಂ ಪ್ರಕಾರ ರೂ. 5.83 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಮಾರುತಿ ಸುಜುಕಿಯಲ್ಲಿ ಇದೀಗ ಆರು ಬಿಎಸ್-6 ಪೆಟ್ರೋಲ್ ಎಂಜಿನ್ ಹೊಂದಿರುವ ವಾಹನಗಳಿವೆ

ಈ ಕಾರುಗಳಲ್ಲಿ ಬಳಸಲಾದ ಹೊಸ ಬಿಎಸ್-6 ಎಂಜಿನ್ 84 ಬಿಹೆಚ್‍ಪಿ ಮತ್ತು 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಲ್ಲಾ ಮಾಡಲ್‍‍ಗಳಲ್ಲಿ ಬಳಸಲಾದ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್ ಅಥವಾ ಎಜಿಎಸ್ ಟ್ರಾನ್ಸ್ ಮಿಷನ್‍ನೊಂದಿಗೆ ಜೋಡಿಸಲಾಗಿದೆ

1.2-ಲೀಟರ್ ಬಿಎಸ್-6 ಎಂಜಿನ್ ಆಧಾರಿತ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 5.10 ಲಕ್ಷ ಮತ್ತು ರೂ. 5.91 ಲಕ್ಷದ ಬೆಲೆಯನ್ನು ಪಡೆದುಕೊಂಡಿದ್ದು, ಇನ್ನು ನವೀಕರಣಗೊಂಡ ಸ್ವಿಫ್ಟ್ ರೂ. 5.14 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಮಾರುತಿ ಸುಜುಕಿಯಲ್ಲಿ ಇದೀಗ ಆರು ಬಿಎಸ್-6 ಪೆಟ್ರೋಲ್ ಎಂಜಿನ್ ಹೊಂದಿರುವ ವಾಹನಗಳಿವೆ

ಹಾಗೆಯೇ ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ, 1.5-ಲೀಟರ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 104.7 ಬಿಹೆಚ್‍ಪಿ ಮತ್ತು 138 ಎನ್‌ಎಂ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ. ಈ ಎಂಜಿನ್ ಅನ್ನು ಈ ಮೊದಲೇ 2018 ರ ಆಗಸ್ಟ್‌ನಲ್ಲಿ ಬಿಡುಗಡೆಗೊಂಡ ಸಿಯಾಝ್ ಫೇಸ್‌ಲಿಫ್ಟ್ ಕಾರಿನಲ್ಲಿ ನೀಡಲಾಗಿತ್ತು.

MOST READ: ವ್ಯವಸಾಯಕ್ಕಾಗಿ ರೂ.50 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರನ್ನು ಬಳಸಿದ ರೈತ

ಮಾರುತಿ ಸುಜುಕಿಯಲ್ಲಿ ಇದೀಗ ಆರು ಬಿಎಸ್-6 ಪೆಟ್ರೋಲ್ ಎಂಜಿನ್ ಹೊಂದಿರುವ ವಾಹನಗಳಿವೆ

ಹಾಗಾದರೆ ಫಿಯಾಟ್ ಮೂಲದ 1.3-ಲೀಟರ್ ಡಿಡಿಎಸ್ ಡೀಸೆಲ್ ಘಟಕದೊಂದಿಗೆ ಮಾತ್ರ ನೀಡಲಾಗುವ ಸಿಯಾಜ್ ಮತ್ತು ಎಸ್-ಕ್ರಾಸ್, ಬಿಎಸ್6 ಅನುಸರಣೆಯೊಂದಿಗೆ ಅದೇ ಎಂಜಿನ್ ಅನ್ನು ಪಡೆಯಲಿದೆ. ಫೇಸ್‌ಲಿಫ್ಟೆಡ್ ವಿಟಾರಾ ಬ್ರೆಝ ಕಾರು ಕೂಡಾ ಅದೇ 1.5-ಲೀಟರ್ ಎಂಜಿನ್ ಪಡೆಯುವ ನಿರೀಕ್ಷೆಯಿದೆ ಆದರೆ ಈ ಹಬ್ಬದ ಋತುವಿನಲ್ಲಿ ರಿಫ್ರೆಶ್ಡ್ ಇಗ್ನಿಸ್ ಬಿಡುಗಡೆಗೊಳ್ಳಲು ಸಜ್ಜುಗೊಳ್ಳುತ್ತಿದ್ದು, ಬಿಡುಗಡೆಯಾಗಲಿರುವ ಹೊಸ ಎಸ್-ಪ್ರೆಸ್ಸೊ ಮೈಕ್ರೊ ಎಸ್‌ಯುವಿ ಸಹ ಬಿಎಸ್-6 ನಿಯಮಗಳನ್ನು ಪಾಲಿಸುತ್ತದೆ ಎಂದು ಹೇಳಲಾಗುತ್ತಿದೆ.

Most Read Articles

Kannada
English summary
Maruti Suzuki Has Six BS6 Cars In Their Portfolio. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X