ವಾಹನ ಚಾಲಕರೇ ಇತ್ತ ಗಮನಿಸಿ- ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್..!

By Manoj B.k

ಕಳೆದ 2 ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ. ವಾಹನಗಳ ದತ್ತಾಂಶ ಶೇಖರಣೆ ಮತ್ತು ಸುರಕ್ಷೆಯ ಸಂಬಂಧ ಇದೀಗ ಮತ್ತೊಂದು ವಿನೂತನ ಯೋಜನೆಯೊಂದನ್ನು ಜಾರಿಗೆ ತರಲಾಗುತ್ತಿದ್ದು, ಈ ಹಿಂದೆಯೇ ಡ್ರೈವಿಂಗ್ ಲೈಸೆನ್ಸ್ ಮತ್ತು ನೋಂದಣಿ ಪ್ರಮಾಣಪತ್ರಗಳು ಏಕರೂಪದಲ್ಲಿ ವಿತರಣೆ ನಡೆಯಲಿದೆ ಎಂದು ಹೇಳಲಾಗಿತ್ತು.

ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಆದರೆ ಇದೀಗ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಕ್ಟೋಬರ್ 1, 2019 ರಿಂದ ದೇಶಾದ್ಯಂತ ಏಕರೂಪ ಡಿಎಲ್ ಮತ್ತು ಆರ್‌ಸಿ ವಿತರಣೆ ಕೈಗೊಳ್ಳಲಿದೆ ಎಂದು ಹೇಳಲಾಗಿದೆ. ಹಾಗಾದರೆ ಈ ಹೊಸ ಯೋಜನೆಯಿಂದ ವಾಹನ ಚಾಲಕರಿಗಾಗುವ ಲಾಭ ಏನ ಎಂಬುದನ್ನು ತಿಳಿಯಲು ಮುಂದಕ್ಕೆ ಓದಿರಿ.

ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಹೊಸ ಯೋಜನೆಯ ಪ್ರಕಾರ, ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಹಾಗೂ ವಾಹನ ನೋಂದಣಿ ಪ್ರಮಾಣಪತ್ರ (ಆರ್‌ಸಿ) ವಿತರಣೆಯು ಏಕರೂಪದಲ್ಲಿರಲಿದ್ದು, ಬಣ್ಣ, ವಿನ್ಯಾಸ, ಗಾತ್ರ, ಭದ್ರತಾ ವೈಶಿಷ್ಟ್ಯತೆ ಎಲ್ಲವೂ ಒಂದೇ ರೀತಿಯಾಗಿರುತ್ತದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಹೊಸ ಯೋಜನೆಯಿಂದ ಏನು ಲಾಭ?

ಏಕರೂಪದ ಡಿಎಲ್ ಮತ್ತು ಆರ್‌ಸಿ ಸೌಲಭ್ಯದಿಂದ ವಾಹನ ಸವಾರರಿಗೆ ಗರಿಷ್ಠ ಲಾಭಗಳಿದ್ದು, ಸ್ಮಾರ್ಟ್‌ ಕಾರ್ಡ್ ರೂಪದಲ್ಲಿರುವ ಬರಲಿರುವ ಹೊಸ ಡಿಎಲ್‌ ಮತ್ತು ಆರ್‌ಸಿಗಳಲ್ಲಿ ಮೈಕ್ರೋ ಚಿಪ್‌ಗಳನ್ನು ಅಳವಡಿಸಲಾಗಿರುತ್ತದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಕಾರ್ಡ್‌ನಲ್ಲಿರುವ ಕ್ಯೂ ಆರ್‌ ಕೋಡ್‌ಗಳು ವಾಹನ ಮಾಲೀಕರ ಸಂಪೂರ್ಣ ಡೇಟಾ ಹೊಂದಿರಲಿದ್ದು, ಎನ್‌ಎಫ್‌ಸಿ (ನಿಯರ್ ಫೀಲ್ಡ್‌ ಕಮ್ಯುನಿಕೇಶನ್‌) ವೈಶಿಷ್ಟ್ಯತೆ ಮೂಲಕ ಮೆಟ್ರೋ ಮತ್ತು ಎಟಿಎಂ ಕಾರ್ಡ್‌ಗಳ ರೀತಿಯಲ್ಲಿ ಬಳಸಬಹುದಾಗಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಇದರಿಂದ ಟ್ರಾಫಿಕ್‌ ಪೊಲೀಸರು ವಿಶೇಷ ಸಾಧನಗಳ ಮೂಲಕ (ಹ್ಯಾಂಡ್‌ಹೆಲ್ಡ್‌ ಡಿವೈಸಸ್‌) ಈ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಿ ಎಲ್ಲ ವಿವರ ಪಡೆಯಬಹುದಾಗಿದ್ದು, ನಕಲಿ ಡಿಎಲ್ ಮತ್ತು ಆರ್‌ಸಿ ಹಾವಳಿಗೂ ಇದರಿಂದ ಬ್ರೇಕ್ ಹಾಕಬಹುದಾಗಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಇದಲ್ಲದೇ ಹೊಸ ಯೋಜನೆಯಿಂದ ವಾಹನಗಳ ಡೇಟಾ ಸಂಗ್ರಹಣೆಗೂ ಸಹಕಾರಿಯಾಗಲಿದ್ದು, ವಾಹನ ಮಾದರಿ, ಎಂಜಿನ್ ವೈಶಿಷ್ಟ್ಯತೆ, ಮಾಲೀಕರ ವಿವರಣೆ ಮತ್ತು ಕಾರು ಬಳಕೆಯ ವಿಧಾನ(ವ್ಯಯಕ್ತಿಕ ಮತ್ತು ವಾಣಿಜ್ಯ) ಸೇರಿದಂತೆ ಹಲವು ಮಾಹಿತಿಗಳು ಒಂದೇ ಸೂರಿನಡಿ ಲಭ್ಯವಾಗುತ್ತೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಸವಾರರಿಗೆ ತಪ್ಪಲಿದೆ ಕಿರಿಕಿರಿ..!

ಸದ್ಯ ಟ್ರಾಫಿಕ್ ಪೊಲೀಸರು ನಿಮ್ಮ ವಾಹನಗಳನ್ನು ತಪಾಸಣೆ ಮಾಡುವಾಗ ವಾಹನದ ಪ್ರತಿಯೊಂದು ದಾಖಲೆಗಳನ್ನು ಕೇಳುವುದು ಕಾಮನ್. ಆದ್ರೆ ಏಕರೂಪದ ಡಿಎಲ್ ಮತ್ತು ಆರ್‌ಸಿ ಬಂದ ಮೇಲೆ ವಾಹನಗಳ ದಾಖಲೆಯನ್ನು ಇಟ್ಟುಕೊಂಡು ತಿರುಗುವುದು ತಪ್ಪಲಿದೆ.

MOST READ: ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಮಾಹಿತಿಯೆಂತೆ ದೇಶಾದ್ಯಂತ ಪ್ರತಿದಿನ ಸುಮಾರು 32,000 ಡಿಎಲ್‌ಗಳ ವಿತರಣೆ/ ನವೀಕರಣ ನಡೆಯುತ್ತಿದ್ದು, 43,000 ವಾಹನಗಳ ನೋಂದಣಿ ನಡೆಯುತ್ತದೆ. ಇನ್ನು ಮುಂದೆ ನವೀಕರಣಗೊಳ್ಳುವ ಎಲ್ಲ ಡಿಎಲ್‌ ಮತ್ತು ಆರ್‌ಸಿಗಳನ್ನು ಹೊಸ ನಿಯಮಕ್ಕೆ ಬದಲಾಯಿಸಲಾಗುತ್ತದೆ ಎಂದಿದ್ದಾರೆ.

MOST READ: ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಒಟ್ಟಿನಲ್ಲಿ ಎನ್‌ಎಫ್‌ಸಿ ವೈಶಿಷ್ಟ್ಯತೆಯ ಮೂಲಕ ಡಿಎಲ್‌ ಅಥವಾ ಆರ್‌ಸಿಯನ್ನು ಪೊಲೀಸರ ಬಳಿಯಿರುವ ಸಾಧನಕ್ಕೆ ಸ್ಪರ್ಶಿಸಿದ ಕೂಡಲೇ ವಾಹನದ ಪ್ರತಿಯೊಂದು ವಿವರಣೆ ದೊರೆಯುವಂತೆ ಹೊಸ ಸೌಲಭ್ಯವನ್ನು ಅಭಿವೃದ್ಧಿ ಪಡಿಸಲಾಗಿದೆ.

More from DriveSpark

Article Published On: Monday, March 11, 2019, 11:27 [IST]
English summary
New Driving License Registration Norms Coming In October 2019. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+