ರೇಂಜ್ ರೋವರ್ ಸ್ಪೆಷಲ್ ಅಡಿಷನ್ ಲಾಂಚ್
ಕಾರು ಪ್ರಿಯರ ಗಮನವೀಗ ಬ್ರೂಸೆಲ್ಸ್ ಮೋಟಾರ್ ಶೋದ ಮೇಲೆ ಕೇಂದ್ರಿಕೃತವಾಗಿದ್ದು, ರೇಂಜ್ ರೋವರ್ ಇವೋಕ್ ಸ್ಪೆಷಲ್ ಅಡಿಷನ್ ಅನ್ನು ಬರಮಾಡಿಕೊಂಡಿದ್ದಾರೆ.
ಸ್ಪೆಷಲ್ ಅಡಿಷನ್ ರೇಂಜ್ ರೋವರ್ ಕೆಲವು ವೈಶಿಷ್ಟ್ಯಗಳನ್ನು ಪಡೆದಿದೆ. ಈ ಕಾರು ತ್ರಿ ಹಾಗೂ ಫೈ ಡೋರ್ ಆಯ್ಕೆಯಲ್ಲಿ ಲಭ್ಯವಿರಲಿದೆ. ಇದರ ಕಣ್ಮನ ಸೆಳೆಯುವಂತಹ ಕಲರ್ ವೆರಿಯಂಟ್ ಎಂತವರನ್ನು ಒಮ್ಮೆ ಇದರತ್ತ ಸೆಳೆಯುವಂತಿದೆ.
ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ ಮೇ ತಿಂಗಳ ಬಳಿಕ ರೇಂಜ್ ರೋವರ್ ಸ್ಪೆಷಲ್ ಅಡಿಷನ್ ಮಾರಾಟಕ್ಕೆ ಲಭ್ಯವಿರಲಿದೆ. ಆದರೆ ಇಲ್ಲಿ ಉದ್ಭವಿಸಿರುವ ಪ್ರಮುಖ ಪ್ರಶ್ನೆ ಏನೆಂದರೆ ಭಾರತೀಯ ಗ್ರಾಹಕರು ಇದರ ರೈಡಿಂಗ್ ಮಜಾ ಸವಿಯುವ ಕಾಲ ಯಾವಾಗ ಸನ್ನಿಹತವಾಗಲಿದೆ ಎಂಬುದಾಗಿದೆ. ಅಂದ ಹಾಗೆ ಸ್ಪೆಷಲ್ ಅಡಿಷನ್ ರೇಂಜ್ ರೋವರ್ ದರ 40 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ರೇಂಜ್ ರೋವರ್ ಇವೋಕ್ ಸ್ಪೆಷಲ್ ಅಡಿಷನ್
ಸ್ಪೆಷಲ್ ಅಡಿಷನ್ ರೇಂಜ್ ರೋವರ್ ಇವೋಕ್ ತ್ರಿ ಹಾಗೂ ಫೈವ್ ಡೋರ್ ವರ್ಷನ್‌ಗಳಲ್ಲಿ ಲಭ್ಯವಿರಲಿದೆ. ಇನ್ನು ಗಮನವಿಟ್ಟು ನೋಡಿದರೆ ಇದರ ಹಳದಿ ರೂಫ್ (scilian yellow roof) ಹಾಗೂ Santorini Black ವಿಶೇಷ ಗಮನ ಸೆಳೆಯುತ್ತಿದೆ.

ರೇಂಜ್ ರೋವರ್ ಇವೋಕ್ ಸ್ಪೆಷಲ್ ಅಡಿಷನ್
ವಿನ್ಯಾಸಕಾರರು ರೇಂಜ್ ರೋವರ್ ಸ್ಪೆಷಲ್ ಅಡಿಷನ್ ಕಾರಿನ ಇಂಟಿರಿಯರ್ ಹಾಗೂ ಎಕ್ಸ್‌ಟೀರಿಯರ್ ಭಾಗಗಳಿಗೆ ಉತ್ತಮ ಕಲರ್ ವೆರಿಯಂಟ್‌ಗಳನ್ನು ನೀಡಿದ್ದಾರೆ. ಇಂಟಿರಿಯರ್ ಭಾಗಗಳಲ್ಲಿ ಬ್ಲ್ಯಾಕ್ ಲೆಥರ್ ಹಾಗೂ ಸೆಂಟ್ರಲ್ ಸ್ಟೋರೆಜ್, ಸೆಂಟ್ರಲ್ ಫಾಸ್ಕಿಯಾ, ಡೋರ್ ಟ್ರಿಮ್ ಹಾಗೂ ಸೀಟ್‌ಗಳಲ್ಲಿ ಹಳದಿ ಸ್ಟಿಚಿಂಗ್ ಬಳಸಲಾಗಿದೆ.

ರೇಂಜ್ ರೋವರ್ ಇವೋಕ್ ಸ್ಪೆಷಲ್ ಅಡಿಷನ್
ಇದರ 20 ಇಂಚು black forged alloys ರೇಂಜ್ ರೋವರ್ ಸ್ಪೆಷಲ್ ಅಡಿಷನ್ ಕಾರಿನ ಪ್ರಮುಖ ಫೀಚರ್ ಆಗಿದೆ.

ರೇಂಜ್ ರೋವರ್ ಇವೋಕ್ ಸ್ಪೆಷಲ್ ಅಡಿಷನ್
ಸ್ಪೆಷಲ್ ಅಡಿಷನ್ ರೇಂಜ್ ರೋವರ್ ಇವೋಕ್‌ನ 2.2 ಡೀಸೆಲ್ ಎಂಜಿನ್ ಎಸ್‌ಡಿ4ರಲ್ಲಿ 190 ಹಾಗೂ ಇಡಿ4ರಲ್ಲಿ 150 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಎಸ್‌ಡಿ4 ವರ್ಷನ್ ಆರು ಸ್ಪಿಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಹೊಂದಿದೆ.

ರೇಂಜ್ ರೋವರ್ ಇವೋಕ್ ಸ್ಪೆಷಲ್ ಅಡಿಷನ್
ಅದೇ ರೀತಿ ಸ್ಪೆಷಲ್ ಅಡಿಷನ್ ರೇಂಜ್ ರೋವರ್ ಇವೋಕ್ ಪೆಟ್ರೋಲ್ ಆವೃತ್ತಿಯ 2.2 ಲೀಟರ್ ಡೀಸೆಲ್ ಎಂಜಿನ್‌ನ ಎಸ್‌ಡಿ 4ರಲ್ಲಿ 190 ಹಾಗೂ ಇಡಿ4 ಆವೃತ್ತಿಯಲ್ಲಿ 150 ಹಾರ್ಸ್ ಪವರ್ ಉತ್ಪಾದಿಸಲಿದೆ. ಎಸ್‌ಡಿ4 ಆರು ಸ್ಪೀಡ್ ಮ್ಯಾನುವಲ್ ಅಥವಾ ಆಟೋ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ರೇಂಜ್ ರೋವರ್ ಇವೋಕ್ ಸ್ಪೆಷಲ್ ಅಡಿಷನ್
ಪುರುಷರು ಸೇರಿದಂತೆ ಮಹಿಳೆಯರಿಗೂ ರೇಂಜ್ ರೋವರ್ ಸ್ಪೆಷಲ್ ಅಡಿಷನ್ ಫೇವರಿಟ್ ಎನಿಸಿಕೊಳ್ಳಲಿದೆ.


Click it and Unblock the Notifications








