ಟೊಯೊಟಾದಿಂದ ಹೈಡ್ರಜನ್ ಸೇರಿದಂತೆ 5 ಗಾಡಿಗಳು
ಭವಿಷ್ಯದ ಸಂಚಾರ ವಾಹಕದ ಬಗ್ಗೆ ಸ್ಪಷ್ಟ ಗುರಿಯನ್ನು ಹೊಂದಿರುವ ಜಗತ್ತನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಟೊಯೊಟಾ ಬಹುನಿರೀಕ್ಷಿತ 2013 ಟೊಕಿಯೊ ಮೋಟಾರ್ ಶೋದಲ್ಲಿ ಹೈಡ್ರಜನ್, ತ್ರಿಚಕ್ರ ಸೇರಿದಂತೆ ಐದು ನೂತನ ಕಾನ್ಸೆಪ್ಟ್ ವಾಹನಗಳನ್ನು ಪರಿಚಯಿಸಲಿದೆ.
ಈ ಸಂಬಂಧ ಈಗಾಗಲೇ ಚಿತ್ರಗಳನ್ನು ಬಿಡುಡಗೆ ಮಾಡಿರುವ ಟೊಯೊಟಾ, ಈ ಎಲ್ಲ ಕಾರುಗಳು 'ಫನ್ ಟು ಡ್ರೈವ್' ಸಿದ್ಧಾಂತಗಳಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿಸಿದೆ.
ಇದರಲ್ಲಿ ಪ್ರಮುಖವಾಗಿ ಫ್ಯೂಯಲ್ ಸೆಲ್ ಹೈಡ್ರಜನ್ ಕಾರು, ಮುಂದಿನ ತಲೆಮಾರಿನ ಮಿನಿವ್ಯಾನ್, ಜೆಪಿಎನ್ ಟ್ಯಾಕ್ಸಿ ಕಾನ್ಸೆಪ್ಟ್ ಹಾಗೂ ತಿಚಕ್ರ ವಾಹನಗಳು ಸೇರಿವೆ. ಅಂದ ಹಾಗೆ ಟೊಕಿಯೋ ಮೋಟಾರ್ ಶೋ ನವೆಂಬರ್ 20ರಂದು ಆರಂಭವಾಗಲಿದ್ದು, ಡಿಸೆಂಬರ್ 1ರ ವರೆಗೆ ಸಾಗಲಿದೆ.

ಸ್ಟೀರಿಂಗ್ ವೀಲ್ ರಹಿತ ತ್ರಿಚಕ್ರ ವಾಹನ ಎಫ್‌ವಿ2
ಸ್ಟೀರಿಂಗ್ ವೀಲ್ ಇಲ್ಲದಿರುವುದೇ ಈ ಎಫ್‌ವಿ2 ಭವಿಷ್ಯದ ವಾಹನದ ಪ್ರಮುಖ ವಿಶೇಷತೆಯಾಗಿದೆ. ಇಲ್ಲಿ ಸ್ಟೀರಿಂಗ್ ಬದಲು ಶರೀರವನ್ನು ಹಿಂದು ಮುಂದು ಮಾಡುವ ಮೂಲಕ ವಾಹನವನ್ನು ನಿಯಂತ್ರಿಸಬಹುದಾಗಿದೆ. ಇದರ ಪ್ರಮುಖ ವಿಶೇಷತೆಯಂದರೆ ಇದರ ಮುಂದುಗಡೆಯಿರುವ ದೊಡ್ಡದಾದ ವಿಂಡ್‌ಶೀಲ್ಡ್ ಸುರಕ್ಷತೆಯ ಪ್ರತಿಬಿಂಬವಾಗಿದ್ದು, ಬ್ಲೈಂಡ್ ಸ್ಪಾಟ್ಸ್ ಎದುರಾದ್ದಲ್ಲಿ ಚಾಲಕರನ್ನು ಎಚ್ಚರಿಸಲಿದೆ. ಹಾಗೆಯೇ ಇದರ ಎಕ್ಸ್‌ಟೀರಿಯರ್ ಭಾಗಗಳನ್ನು ಇಷ್ಟಕ್ಕಾನುಸಾರವಾಗಿ ವ್ಯಯಕ್ತಿಕರಣಗೊಳಿಸಬಹುದಾಗಿದೆ.

ಹೈಡ್ರಜನ್ ಕಾರು
ಫ್ಯೂಯಲ್ ಸೆಲ್ ವಾಹನಗಳ (ಎಫ್‌ಸಿವಿ) ಬಗ್ಗೆ ಟೊಯೊಟಾ ಈ ಹಿಂದೆಯೇ ಮಾಹಿತಿ ರವಾನಿಸಿತ್ತು. ಪ್ರಸ್ತುತ ಕಂಪನಿಯು 500 ಕೀ.ಮೀ. ರೇಂಜ್ ವರೆಗೂ ಡ್ರೈವಿಂಗ್ ರೇಂಜ್ ನೀಡಬಲ್ಲ ಹಾಗೆಯೇ ಮೂರು ನಿಮಿಷಗಳಲ್ಲೇ ಇಂಧನ ಮರು ತುಂಬಿಸಬಹುದಾದ ಹೈಡ್ರಜನ್ ಕಾರುಗಳ ತಯಾರಿಕೆಯಲ್ಲಿದೆ. ಇದು ನಾಲ್ಕು ಜನರ ಆಸನ ವ್ಯವಸ್ಥೆ ಹೊಂದಿದೆ.

ವೋಕ್ಸಿ ಹಾಗೂ ನೋವಾ
ಸದ್ಯ ಕಾನ್ಸೆಪ್ಟ್ ಹಂತದಲ್ಲಿರುವ ವೋಕ್ಸಿ ಹಾಗೂ ನೋವಾ (voxy & Noah) ವಾಹನಗಳು ಜಪಾನ್ ಮಾರುಕಟ್ಟೆಯನ್ನು ಮುಂದಿನ ವರ್ಷ ಪ್ರವೇಶಿಸುವ ಸಾಧ್ಯತೆಗಳಿವೆ.

ಇದರಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೈಡ್ರಜನ್ ಟ್ಯಾಂಕ್ ಲಗತ್ತಿಸಿರಲಿದೆ. ಹಾಗೆಯೇ ಹೊರಮೈಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು 4860 ಎಂಎಂ ಉದ್ದ, 1810 ಎಂಎಂ ಅಗಲ, 1535 ಎಂಎಂ ಎತ್ತರ ಮತ್ತು 2780ಎಂಎಂ ಎತ್ತರವಿರಲಿದೆ.

ಜೆಪಿಎನ್ ಟ್ಯಾಕ್ಸಿ
ಇನ್ನು ಮೇಲಿನ ಕಾನ್ಸೆಪ್ಟ್ ಕಾರುಗಳಿಗೆ ಸಮಾನ ಸಿದ್ಧಾಂತವನ್ನು ಹೊಂದಿರುವ ಜೆಪಿಎನ್ ಟ್ಯಾಕ್ಸಿ ಕಾರಿನ ಬಗ್ಗೆ ಹೆಚ್ಚಿ ಮಾಹಿತಿ ಟೊಕಿಯೋ ಮೋಟಾರ್ ಶೋದಲ್ಲಿ ಲಭ್ಯವಾಗಲಿದೆ.


Click it and Unblock the Notifications








