ದುಬೈ ಪೊಲೀಸ್ ಶಕ್ತಿ ಪ್ರದರ್ಶನ

By Nagaraja

ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಝ್, ಷೆವರ್ಲೆ, ಟೊಯೊಟಾ, ಹಮ್ಮರ್, ಲಂಬೊರ್ಗಿನಿ ಹಾಗೂ ಫೆರಾರಿಗಳಂತಹ ದುಬಾರಿ ವಾಹನಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿರುವ ದುಬೈ ಪೊಲೀಸ್ ಇದೀಗ ಇನ್ನಷ್ಟು ಐಷಾರಾಮಿ ಕಾರುಗಳನ್ನು ಈ ಪಟ್ಟಿಗೆ ಸೇರಿಸಿಕೊಂಡಿದೆ.

ಪ್ರಸ್ತುತ ದುಬೈನಲ್ಲಿ ಸಾಗುತ್ತಿರುವ ಆಟೋ ಶೋದಲ್ಲಿ ದುಬೈ ಪೊಲೀಸ್ ಕಾರು ಕ್ರೇಜ್ ಮುಂದುವರಿದಿದೆ. ಜಗತ್ತಿನ ಅತಿ ಶ್ರೀಮಂತ ರಕ್ಷಣಾ ವ್ಯವಸ್ಥೆಯನ್ನು ಹೊಂದಿರುವ ದುಬೈ ಪೊಲೀಸ್, ಈ ಎಲ್ಲ ವಾಹನಗಳನ್ನು ಗಸ್ತು ಗಾಡಿಗಳಾಗಿ (patrolling) ಬಳಕೆ ಮಾಡಲಿದೆ. ಹಾಗಿದ್ದರೆ ಬನ್ನಿ ಹೊಸದಾಗಿ ದುಬೈ ಪೊಲೀಸ್ ಪಡೆಗೆ ಸೇರ್ಪಡೆಯಾಗಿರುವ ಕಾರುಗಳ ಬಗ್ಗೆ ಮಾಹಿತಿ ಪಡೆಯೋಣವೇ...

ದುಬೈ ಪೊಲೀಸ್ ಶಕ್ತಿ ಪ್ರದರ್ಶನ

ಜರ್ಮನಿಯ ಐಷಾರಾಮಿ ಕಂಪನಿಯಾದ ಆಡಿ ಆರ್8 ಸೂಪರ್ ಕಾರು ಹಾಗೂ ಮರ್ಸಿಡಿಸ್ ಬೆಂಝ್‌ ಜಿ ಕ್ಲಾಸ್ ಬ್ರಾಬಸ್ ಮತ್ತು ನಿಸ್ಸಾನ್ ಜಿಟಿಆರ್ ಕಾರುಗಳನ್ನು ದುಬೈ ಪೊಲೀಸ್ ವಶಪಡಿಸಿಕೊಂಡಿದೆ.

ದುಬೈ ಪೊಲೀಸ್ ಶಕ್ತಿ ಪ್ರದರ್ಶನ

ಈ ಎಲ್ಲ ಕಾರುಗಳನ್ನು ದುಬೈ ಪೊಲೀಸ್ ವಿಶಿಷ್ಟ ಶೈಲಿಯಲ್ಲಿ ವಿನ್ಯಾಸಗೊಳಿಸಿದೆ. ಇದು ಕಾರಿನ ಅಂದತೆಯನ್ನು ಇನ್ನಷ್ಟು ಹೆಚ್ಚಿಸಿದೆ.

ದುಬೈ ಪೊಲೀಸ್ ಶಕ್ತಿ ಪ್ರದರ್ಶನ

ಇದರೊಂದಿಗೆ ದುಬೈ ಪೊಲೀಸ್ ಬಳಿಯಿರುವ ದುಬಾರಿ ಸ್ಪೋರ್ಟ್ಸ್ ಕಾರುಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ದುಬೈ ಪೊಲೀಸ್ ಶಕ್ತಿ ಪ್ರದರ್ಶನ

ಈ ಬಗ್ಗೆ ಪ್ರತಿಕ್ರಿಯಿಸಿರುವ ದುಬೈ ಪೊಲೀಸ್, ಮೊದಲ ಬಾರಿಗೆ ವರ್ಷಾರಂಭದಲ್ಲಿ ಲಂಬೋರ್ಗಿನಿ ಪರಿಚಯಿಸಿದಾಗ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಈ ಮೂಲಕ ದುಬೈ ಚಿತ್ರಣವನ್ನು ವಿಶ್ವಕ್ಕೆ ಪಸರಿಸಲು ಸಾಧ್ಯವಾಗಿದೆ ಎಂದಿದೆ.

ದುಬೈ ಪೊಲೀಸ್ ಶಕ್ತಿ ಪ್ರದರ್ಶನ

ಈ ಎಲ್ಲ ವಾಹನಗಳು ಸೂಪರ್ ಕಾರುಗಳೇ ಆಗಿದ್ದರೂ ನಮ್ಮ ಪೊಲೀಸರು ವೇಗ ಮಿತಿಯನ್ನು ಎಂದೂ ಉಲ್ಲಂಘಿಸಿಲ್ಲ ಎಂದು ದುಬೈ ಪೊಲೀಸ್ ಸ್ಪಷ್ಟಪಡಿಸಿದೆ.

ದುಬೈ ಪೊಲೀಸ್ ಶಕ್ತಿ ಪ್ರದರ್ಶನ

ದುಬೈ ಪೊಲೀಸ್ ಬಳಿಯಲ್ಲಿರುವ ಇತರ ಕಾರುಗಳೆಂದರೆ ಬುಕಾಟಿ ವೆರೋನ್, ಆಸ್ಟನ್ ಮಾರ್ಟಿನ್ ಒನ್ 77, ಬಿಎಂಡಬ್ಲ್ಯು 5 ಸಿರೀಸ್, ಮರ್ಸಿಡಿಸ್ ಇ ಕ್ಲಾಸ್, ಷೆವರ್ಲೆ ಕ್ಯಾಮರೊ, ಟೊಯೊಟೊ ಪ್ರಾಡೊ, ಟೊಯೊಟಾ ಫಾರ್ಚುನರ್, ಹಮ್ಮರ್ ಎಚ್1, ಲಂಬೊರ್ಗಿನಿ ಅವೆಂಟಡೊರ್ ಮತ್ತು ಫೆರಾರಿ ಎಫ್‌ಎಫ್ ಕಾರುಗಳಿವೆ.

ದುಬೈ ಪೊಲೀಸ್ ಶಕ್ತಿ ಪ್ರದರ್ಶನ

ದುಬೈ ಪೊಲೀಸ್‌ಗೆ ಸೇರ್ಪಡೆಯಾಗಿರುವ ಬ್ರಾಬಸ್ ಜಿ63 ಎಎಂಜಿ ಕಾರು ಕೇವಲ 4.9 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 146 ಮೈಲ್ ವೇಗದಲ್ಲಿ ಸಂಚರಿಸಲಿದೆ.

ದುಬೈ ಪೊಲೀಸ್ ಶಕ್ತಿ ಪ್ರದರ್ಶನ

ಆಫ್ ರೋಡ್ ಸಾಮರ್ಥ್ಯವನ್ನು ಹೊಂದಿರುವ ಬ್ರಾಬಸ್ ಜಿ63 ಎಎಂಜಿ, ದುಬೈ ಮರುಭೂಮಿಯಲ್ಲೂ ಉತ್ತಮ ರೈಡಿಂಗ್ ಅನುಭವ ನೀಡಲಿದೆ.

ದುಬೈ ಪೊಲೀಸ್ ಶಕ್ತಿ ಪ್ರದರ್ಶನ

ಬ್ರಾಬಸ್ ಜಿ63 ಎಎಂಜಿ 5.5 ಲೀಟರ್ ಬೈಟರ್ಬೊ ವಿ8 ಎಂಜಿನ್ ಪಡೆದುಕೊಂಡಿದೆ.

More from DriveSpark

Article Published On: Friday, November 8, 2013, 20:04 [IST]
English summary
Dubai Police unveils new Audi R8, a Mercedes SL 63, a Mercedes G-class Brabus and a Nissan GTR 'patrol supercars' at Dubai International Motor Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+