ಪೋರ್ಷೆಯಿಂದ ಸಣ್ಣ ಎಸ್‌ಯುವಿ ಲಾಂಚ್
ಪ್ರತಿಷ್ಠಿತ ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಸಣ್ಣ ಕಾಂಪಾಕ್ಟ್ ಎಸ್‌ಯುವಿ ಬಿಡುಗಡೆಗೊಳಿಸಿರುವ ಜಗತ್ತಿನ ಐಷಾರಾಮಿ ಕಾರು ಕಂಪನಿಗಳಲ್ಲಿ ಒಂದಾಗಿರುವ ಪೋರ್ಷೆ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಎಂಟ್ರಿ ಲೆವೆಲ್ ಎಸ್‌ಯುವಿಗಳಲ್ಲಿ ಗುರುತಿಸಿಕೊಳ್ಳಲಿರುವ ಪೋರ್ಷೆ ಮಾಷನ್ (macan) ಅತ್ಯುತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಪೋರ್ಷೆ ಮಾಷನ್ ಆಡಿ ಕ್ಯೂ5 ಜತೆ ಫ್ಲ್ಯಾಟ್ ಫಾರ್ಮ್ ಹಂಚಿಕೊಂಡಿದೆ. ಇದು ಟ್ವಿನ್ ವಿ6 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಇನ್ನು ಭಾರತ ಸೇರಿದಂತೆ ಕೆಲವೊಂದು ನಿರ್ದಿಷ್ಟ ಮಾರುಕಟ್ಟೆಗಳಲ್ಲಿ ಮಾತ್ರ ವಿ6 ಎಂಜಿನ್ ಲಭ್ಯವಾಗಲಿದೆ. ಇದು ಕೇವಲ 5.2 ಸೆಕೆಂಡುಗಳಲ್ಲಿ 0-60 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗರಿಷ್ಠ 265 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.
ಎಲ್ಲ ಪೋರ್ಷೆ ಮಾಷನ್ ಎಸ್‌ಯುವಿಗಳಲ್ಲಿ ಸ್ಪೋರ್ಟ್ ಬಟನ್ ಇರಲಿದೆ. ಇದು ಹೆಚ್ಚು ನಿರ್ವಹಣೆ ನೀಡಲು ಸಹಕಾರಿಯಾಗಲಿದೆ. ಅಂದ ಹಾಗೆ 2014 ಲಾಂಚ್ ಆಗಲಿರುವ ಪೋರ್ಷೆ ಮಾಷನ್ 50 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.



Click it and Unblock the Notifications








