ಟೊಕಿಯೋದಲ್ಲಿ ಜಾಗ್ವಾರ್ ಎಫ್-ಟೈಪ್ ಕೂಪೆ ಅನಾವರಣ

Written By:

ಕಳೆದ ವರ್ಷ ಬ್ರಿಟನ್ ವಾಹನ ತಯಾರಕ ಸಂಸ್ಥೆಯಾಗಿರುವ ಜಾಗ್ವಾರ್, ಎಫ್-ಟೈಪ್ ಕನ್ವರ್ಟಿಬಲ್ ಅನಾವರಣಗೊಳಿಸಿತ್ತು. ಇದೀಗ ಪ್ರತಿಷ್ಠಿತ ಟೊಕಿಯೋ ಮೋಟಾರ್ ಶೋದಲ್ಲಿ ಎಫ್ ಟೈಪ್ ಕೂಪೆ ಕಾರನ್ನು ಅನಾವರಣಗೊಳಿಸಿದೆ.

ಜಾಗ್ವಾರ್ ಎಫ್‌-ಟೈಪ್, 2011ನೇ ಫ್ರಾಂಕ್‌ಫರ್ಟ್ ಆಟೋ ಶೋದಲ್ಲಿ ಪ್ರದರ್ಶನ ಕಂಡಿದ್ದ ಸಿ-ಎಕ್ಸ್16 ಕಾನ್ಸೆಪ್ಟ್ ಕಾರಿನ ಉತ್ಪಾದಕಾ ವರ್ಷನ್ ಆಗಿರಲಿದೆ. ಹಾಗೆಯೇ ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.

To Follow DriveSpark On Facebook, Click The Like Button

ದರ ಮಾಹಿತಿ

ಎಫ್ ಟೈಪ್ ಕೂಪೆ $65,000

ಎಫ್ ಟೈಪ್ ಎಸ್ ಕೂಪೆ $77,000

ಎಫ್ ಟೈಪ್ ಆರ್ ಕೂಪೆ $99,000

Jaguar F Type Coupe

ಇದು 380 ಅಶ್ವಶಕ್ತಿ ಉತ್ಪಾದಿಸುವ 3.0 ಲೀಟರ್ ಸೂಪರ್ ಚಾರ್ಜ್ಡ್ ವಿ6 ಎಂಜಿನ್ ನಿಯಂತ್ರಿಸಲ್ಪಡಲಿದೆ. ಹಾಗೆಯೇ 4.8 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಇದರ ಗರಿಷ್ಠ ಗಂಟೆಗೆ 275 ಕೀ.ಮೀ. ಆಗಿರಲಿದೆ.

ಇನ್ನು ಎಫ್-ಟೈಪ್ ಆರ್ ಕೂಪೆ ಟಾಪ್ ಎಂಡ್ ವೆರಿಯಂಟ್ 5.0 ವೀಟರ್ ಸೂಪರ್ ಚಾರ್ಜ್ಡ್ ವಿ8 ಎಂಜಿನ್ ಹೊಂದಿರಲಿದೆ. ಇದು 550 ಅಶ್ವಶಕ್ತಿ ಉತ್ಪಾದಿಸಲಿದ್ದು, ಕೇವಲ ನಾಲ್ಕು ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸಲಿದೆ. ಹಾಗೆಯೇ ಗಂಟೆಗೆ ಗರಿಷ್ಠ 300 ಕೀ.ಮೀ. ವೇಗವನ್ನು ಹೊಂದಿರಲಿದೆ.

English summary
One of the most beautiful car of our times has just got a permanent roof. Its the Jaguar F-Type Coupe that we have all been waiting for ever since the British automaker revealed the F-Type convertible last year. And its looks like everything we had hoped for.
Story first published: Thursday, November 21, 2013, 12:58 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark