ಬಿಎಂಡಬ್ಲ್ಯು ಎಂ5: ದೇಶಿ ರಸ್ತೆಯಲ್ಲಿ ಲಕ್ಷುರಿ ಮೆರವಣಿಗೆ
ಜರ್ಮನಿ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯು, ನೂತನ ಸೂಪರ್ ಸಲೂನ್ ಎಂ5 ಕಾರನ್ನು ದೇಶದ ರಸ್ತೆಗೆ ಪರಿಚಯಿಸಿದೆ. ಇದರ ದೆಹಲಿ ಎಕ್ಸ್ ಶೋರೂಂ ದರ ಸುಮಾರು 95.9 ಲಕ್ಷ ರುಪಾಯಿ ಇದೆ.

ನೂತನ ಎಂ5 ಕಾರನ್ನು ಸಿಬಿಯು ಯುನಿಟ್ ಮೂಲಕ ದೇಶದ ರಸ್ತೆಗೆ ಬಿಎಂಡಬ್ಲ್ಯು ತರಲಿದೆ. "ಇಲ್ಲಿನ ಗ್ರಾಹಕರ ಐಷಾರಾಮಿ ಕಾರು ಸವಾರಿ ಬಯಕೆಗೆ ತಕ್ಕಂತೆ ಎಂ5 ಹೊರತರಲಾಗಿದೆ" ಎಂದು ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷರಾದ ಆಂಡ್ರಿಯಸ್ ಸ್ಕಾಫ್ ಹೇಳಿದ್ದಾರೆ.
ಕಂಪನಿಯು ಎಂ5 ಮಾತ್ರವಲ್ಲದೇ ನೂತನ 7 ಸೀರಿಸ್ ಕಾರು 750ಲಿ ಲಿಮಿಟೆಡ್ ಅಡಿಷನ್ ಕಾರನ್ನು ಕೂಡ ಹೊರತಂದಿದೆ. ಈ ಕಾರನ್ನು ಕೂಡ ಬಿಎಂಡಬ್ಲ್ಯು ಡೀಲರುಗಳು ಸಿಬಿಯು ಯುನಿಟ್ ಮೂಲಕ ಆಮದು ಮಾಡಿಕೊಳ್ಳಲಿದ್ದಾರೆ. ಒಟ್ಟಾರೆ ದೇಶಿ ರಸ್ತೆಯಲ್ಲಿ ಮೆರವಣಿಗೆ ಹೊರಡಲು ಹೊಸತು ಹೊಸತು ಬಿಎಂಡಬ್ಲ್ಯು ಕಾರುಗಳು ಬಂದಿವೆ. (ಚಿತ್ರಲೋಕಕ್ಕೆ ಸಾಗುವಿರ, ಸುಸ್ವಾಗತ)


Click it and Unblock the Notifications








