ನಿಸ್ಸಾನ್‌ನಿಂದ ಪ್ರೀಮಿಯಂ ಎಸ್‌ಯುವಿ ಎಕ್ಸ್-ಟ್ರೇಲ್ ಅನಾವರಣ

By Nagaraja

ಸದ್ಯ ಇಡೀ ಜಗತ್ತಿನ ವಾಹನೋದ್ಯಮವು ಫ್ರಾಂಕ್‌ಫರ್ಟ್‌ನತ್ತ ಗಮನ ಕೇಂದ್ರಿತವಾಗಿದ್ದು, ನೂತನ ಕಾರುಗಳನ್ನು ಬರಮಾಡಿಕೊಳ್ಳುವುದರಲ್ಲಿ ಕಾತರದಿಂದ ಕಾಯುತ್ತಿದ್ದಾರೆ.

ಇದೀಗಷ್ಟೇ 65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಸುಜುಕಿ iV-4 ಅನಾವರಣಗೊಂಡಿರುವ ಬಗ್ಗೆ ಮಾಹಿತಿ ಕೊಟ್ಟಿದ್ದೆವು. ಇದರ ಬೆನ್ನಲ್ಲೇ ಇನ್ನೊಂದು ಬಿಸಿ ಬಿಸಿ ಸುದ್ದಿ ಹೊರಬಂದಿದ್ದು, ನಿಸ್ಸಾನ್ ಎಕ್ಸ್‌-ಟ್ರೇಲ್ ಜಾಗತಿಕ ಪ್ರದರ್ಶನ ಕಂಡಿದೆ.

ಈ ಮೂಲಕ ಮತ್ತೊಂದು ಜಪಾನ್ ಕಂಪನಿಯು ಫ್ರಾಂಕ್‌ಫರ್ಟ್‌ನಲ್ಲಿ ಹೆಚ್ಚಿನ ಗಮನ ಸೆಳೆಯುತ್ತಿದೆ. ನಿಸ್ಸಾನ್ ಅಧ್ಯಕ್ಷ ಹಾಗೂ ಸಿಇಒ ಕಾರ್ಲೊಸ್ ಘೋಸ್ನ್ ಈ ಪ್ರೀಮಿಯಂ ಎಸ್‌ಯುವಿ ಬಿಡುಗಡೆಗೊಳಿಸಿದ್ದಾರೆ.

ನಿಸ್ಸಾನ್ ಬದ್ಧತೆ

ನಿಸ್ಸಾನ್ ಬದ್ಧತೆ

ಆಟೋ ಜಗತ್ತಿನಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿರುವ ನಿಸ್ಸಾನ್, ಎಕ್ಸ್-ಟ್ರೇಲ್ ಮುಖಾಂತರ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.

ವಿನ್ಯಾಸ

ವಿನ್ಯಾಸ

ನೂತನ ಸಂಶೋಧನೆಯ ಭಾಗವಾಗಿ ಅತ್ಯಧಿಕ ನಿರ್ವಹಣೆ ನೀಡುವ ಪ್ರೀಮಿಯಂ ವಿನ್ಯಾಸದ ಎಕ್ಸ್-ಟ್ರೇಲ್ ಬಿಡುಗಡೆ ಮಾಡಲಾಗಿದೆ.

ನಿಸ್ಸಾನ್‌ನಿಂದ ಪ್ರೀಮಿಯಂ ಎಸ್‌ಯುವಿ ಎಕ್ಸ್-ಟ್ರೇಲ್ ಅನಾವರಣ

ಎಕ್ಸ್-ಟ್ರೇಲ್ ಮುಖಾಂತರ ತನ್ನದೇ ಆದ ವಿಶಿಷ್ಟ ಹಾಗೂ ಆಕ್ರಣಮಣಕಾರಿ ವಿನ್ಯಾಸವನ್ನು ಕಾಪಾಡಿಕೊಳ್ಳುವಲ್ಲಿ ನಿಸ್ಸಾನ್ ಯಶಸ್ವಿಯಾಗಿದೆ ಎಂದು ಆಟೋ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ನಿಸ್ಸಾನ್‌ನಿಂದ ಪ್ರೀಮಿಯಂ ಎಸ್‌ಯುವಿ ಎಕ್ಸ್-ಟ್ರೇಲ್ ಅನಾವರಣ

ಇದರ ಫ್ರಂಟ್ ಗ್ರಿಲ್ ಜೊತೆಗೆ ಎಲ್‌ಇಡಿ ಹೆಡ್‌ಲೈಟ್‌ಗಳು ಪ್ರಮುಖ ಆಕರ್ಷಣೆಯಾಗಿದೆ.

ನಿಸ್ಸಾನ್‌ನಿಂದ ಪ್ರೀಮಿಯಂ ಎಸ್‌ಯುವಿ ಎಕ್ಸ್-ಟ್ರೇಲ್ ಅನಾವರಣ

ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ನೂತನ ಎಕ್ಸ್-ಟ್ರೇಲ್ ಹೆಚ್ಚು ಐಷಾರಾಮಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ನಿಸ್ಸಾನ್‌ನಿಂದ ಪ್ರೀಮಿಯಂ ಎಸ್‌ಯುವಿ ಎಕ್ಸ್-ಟ್ರೇಲ್ ಅನಾವರಣ

ಇನ್ನು ಕಾರಿನ ಆಂತರಿಕ ಭಾಗಗಳಲ್ಲೂ ಹೆಚ್ಚಿನ ಸ್ಥಳಾವಕಾಶ ಒದಗಿಸಲಾಗಿದೆ. ಹಾಗೆಯೇ ಥಿಯೇಟರ್ ಶೈಲಿಯ ಸಿಟ್ಟಿಂಗ್ ವ್ಯವಸ್ಥೆ ಹೊಂದಿದೆ.

ನಿಸ್ಸಾನ್‌ನಿಂದ ಪ್ರೀಮಿಯಂ ಎಸ್‌ಯುವಿ ಎಕ್ಸ್-ಟ್ರೇಲ್ ಅನಾವರಣ

ನಿಸ್ಸಾನ್‌ನ ಮುಂದುವರಿದ ಫೋರ್ ವೀಲ್ ಡ್ರೈವಿಂಗ್ ವ್ಯವಸ್ಥೆಯಾದ ಆಲ್ ಮೋಡ್ 4x4i ವ್ಯವಸ್ಥೆಯನ್ನು ಇದರಲ್ಲಿ ಆಳವಡಿಸಲಾಗಿದೆ.

ನಿಸ್ಸಾನ್‌ನಿಂದ ಪ್ರೀಮಿಯಂ ಎಸ್‌ಯುವಿ ಎಕ್ಸ್-ಟ್ರೇಲ್ ಅನಾವರಣ

ಇದರಲ್ಲಿ ನೇವಿಗೇಷನ್, ಮಾಹಿತಿ ಹಾಗೂ ಮನರಂಜನಾ ಸಿಸ್ಟಂಗಳನ್ನು ಲಗತ್ತಿಸಲಾಗಿದೆ. ಹಾಗೆಯೇ ಸ್ಮಾರ್ಟ್ ಫೋನ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಕೂಡಾ ಕೊಡಲಾಗಿದೆ.

More from DriveSpark

Article Published On: Wednesday, September 11, 2013, 14:12 [IST]
English summary
The New Nissan X-Trail has been unveiled by President and CEO, Carlos Ghosn at the Frankfurt Motor Show. Nissan is on a constant stride to deliver innovation and the new X-Trail is another step forward to this commitment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+