ಫ್ರಾಂಕ್‌ಫರ್ಟ್‌ನಲ್ಲಿ ಸುಜುಕಿ iV-4 ಜಾಗತಿಕ ಪ್ರದರ್ಶನ
ವಾಹನ ಪ್ರಿಯರು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದ್ದ 65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋಗೆ ಜರ್ಮನಿಯಲ್ಲಿ ಅದ್ಧೂರಿ ಚಾಲನೆ ದೊರಕಿದೆ. ಇದರಂತೆ ಬಹುನಿರೀಕ್ಷಿತ ಸುಜುಕಿಯ 'iV-4' ಕಾನ್ಸೆಪ್ಟ್ ಎಸ್‌ಯುವಿ ಭರ್ಜರಿ ಪ್ರದರ್ಶನ ಕಂಡಿದೆ.
ಮಾರುತಿ ಸುಜುಕಿ ಮಾತೃಸಂಸ್ಥೆಯಾಗಿರುವ ಸುಜುಕಿ iV-4 ಕಾನ್ಸೆಪ್ಟ್ ಜಾಗತಿಕ ಪ್ರದರ್ಶನದ ಅಂಗವಾಗಿ ಫ್ರಾಂಕ್‌ಫರ್ಟ್‌ನಲ್ಲಿ ಅವಾರಣಗೊಂಡಿದೆ. 1970ರಲ್ಲಿ ಎಲ್‌ಜೆ ಸಿರಿಸ್ ಲಾಂಚ್ ಮಾಡಿದ್ದ ಸುಜುಕಿ, ಬಳಿಕ 1988ರಲ್ಲಿ ವಿಟರಾ, 1998ರಲ್ಲಿ ಜಿಮ್ನಿ ಹಾಗೂ 2005ರಲ್ಲಿ ಗ್ರಾಂಡ್ ವಿಟರಾ ಪರಿಚಯಿಸುವ ಮೂಲಕ ತನ್ನ ಎಸ್‌ಯುವಿ ಸಿರೀಸ್ ಕಾರುಗಳನ್ನು ಪರಿಚಯಿಸಿತ್ತು.
iV-4 ಅಂದರೇನು...?
- "i" ಅಂದರೆ "ವೈಯಕ್ತಿಕತೆ"
- "v" ಅಂದರೆ "ವಾಹನ"
- "4" ಅಂದರೆ "ಫೋರ್ ವೀಲ್ ಡ್ರೈವ್"

ಅಭಿವೃದ್ಧಿ ಹಂತ
ಸದ್ಯ ಅಭಿವೃದ್ಧಿ ಹಂತದಲ್ಲಿರುವ iV-4 ಕಾನ್ಸೆಪ್ಟ್ ಎಸ್‌ಯುವಿ, 'ಗ್ರಾಬ್ ಯುವರ್ ಫೀಲ್ಡ್' ಥೀಮ್‌ನಡಿಯಲ್ಲಿ ನಿರ್ಮಾಣಗೊಳ್ಳಲಿದೆ.

ಪವರ್‌ಫುಲ್ ವಿನ್ಯಾಸ
ಇದು ತನ್ನ ಪವರ್‌ಫುಲ್ ಎಕ್ಸ್‌ಟೀರಿಯರ್ ವಿನ್ಯಾಸದ ಜತೆ ಸಾಂಪ್ರದಾಯಿಕ ಸುಜುಕಿ ವಿನ್ಯಾಸ ಕಾಪಾಡಿಕೊಂಡಿದೆ.

ಆಯಾಮ
- ಉದ್ದ 4,215 (mm)
- ಅಗಲ 1,850 (mm)
- ಎತ್ತರ 1,665 (mm)
- ವೀಲ್ ಬೇಸ್ 2,500 (mm)
- ಟೈರ್ ಗಾತ್ರ 235/55R20

ಉತ್ಪಾದನಾ ವರ್ಷನ್
ಅಂದ ಹಾಗೆ ಸುಜುಕಿ iV-4 ಉತ್ಪಾದನಾ ವರ್ಷನ್ 2015ರಲ್ಲಿ ಯುರೋಪ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಪರಿಸರ ಸ್ನೇಹಿ
ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಂಡಿರುವ iV-4 ಕಡಿಮೆ ಹೊಗೆ ಹೊರಸೂಸಲಿದೆ.

4WD ಟೆಕ್ನಾಲಜಿ
ಇದು ನೆಕ್ಸ್ಟ್ ಜನರೇಷನ್ 4WD ತಂತ್ರಗಾರಿಕೆಯಲ್ಲಿ ಆಗಮನವಾಗಲಿದ್ದು, ಆಫ್ ರೋಡ್‌ನಲ್ಲೂ ಉತ್ತಮ ನಿರ್ವಹಣೆ ನೀಡಿಲಿದೆ.

ಎಸ್‌ಯುವಿ ಮಾರುಕಟ್ಟೆ
ಖಂಡಿತವಾಗಿಯೂ ಸುಜುಕಿಯಿಂದ ಆಗಮನವಾಗಲಿರುವ ಹೊಸತಾದ iV-4 ಎಸ್‌ಯುವಿ ಭವಿಷ್ಯದಲ್ಲಿ ಹೆಚ್ಚು ಬದಲಾವಣೆ ತರಲು ನೆರವಾಗಲಿದೆ.

ಭಾರತ ಎಂಟ್ರಿ..?
ಇನ್ನು ಸುಜುಕಿ ಅಂಗಸಂಸ್ಥೆಯಾಗಿರುವ ಮಾರುತಿ ಭಾರತಕ್ಕೆ iV-4 ಎಸ್‌ಯುವಿ ಪರಿಚಯಿಸುವ ಯೋಜನೆ ಹೊಂದಿದೆ. ಆದರೆ ಯಾವಾಗ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ ಎಂಬುದನ್ನು ಸ್ಪಷ್ಟ ಉತ್ತರ ಬಂದಿಲ್ಲ.

ಪೈಪೋಟಿ
ಒಂದು ವೇಳೆ ಭಾರತ ಮಾರುಕಟ್ಟೆ ಪ್ರವೇಶಿಸಿದ್ದಲ್ಲಿ ಇದು ಫೋರ್ಡ್ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್‌ಗಳಂತಹ ಎಸ್‌ಯುವಿಗಳಿಗೆ ನಿಕಟ ಪೈಪೋಟಿ ನೀಡಲಿದೆ.

ಕಾಂಪಾಕ್ಟ್ ಎಸ್‌ಯುವಿ
ಸದ್ಯ ಬೆಳೆದು ಬರುತ್ತಿರುವ ಭಾರತದಂತಹ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಅತಿ ಹೆಚ್ಚು ಬೇಡಿಕೆಯಿದೆ. ಇದನ್ನೇ ಗಮನದಲ್ಲಿಸಿರುವ ಮಾರುತಿ ಭಾರತಕ್ಕೆ ಸುಜುಕಿ iV-4 ಮಿನಿ ಎಸ್‌ಯುವಿ ಪರಿಚಯಿಸುವ ಸಾಧ್ಯತೆಯಿದೆ.

ದೆಹಲಿ ಆಟೋ ಎಕ್ಸ್‌ಪೋ
ಬಲ್ಲ ಮೂಲಗಳ ಪ್ರಕಾರ ಸುಜುಕಿ iV-4 ದೆಹಲಿ ಆಟೋ ಎಕ್ಸ್ ಪೋದಲ್ಲೂ ಪ್ರದರ್ಶನ ಕಾಣಲಿದೆ ಎಂದು ತಿಳಿದು ಬಂದಿದೆ.


Click it and Unblock the Notifications








