2015 ನಿಸ್ಸಾನ್ ಜಿಟಿ-ಆರ್ ಫೇಸ್‌ಲಿಫ್ಟ್ ಅನಾವರಣ
ವಾಹನ ತಯಾರಕರ ಪಾಲಿಗೆ ಪ್ರತಿಯೊಂದು ಆಟೋ ಶೋ ಮಹತ್ವದೆನಿಸುತ್ತದೆ. ಇಲ್ಲಿ ತಮ್ಮ ನೂತನ ಅವತರಣಿಕೆಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿರುತ್ತದೆ. ಇದರಂತೆ ಟೊಕಿಯೋದಲ್ಲಿ ನಡೆಯುತ್ತಿರುವ 2013ನೇ ಮೋಟಾರ್ ಶೋದಲ್ಲಿ ಜಪಾನ್ ಮೂಲದವರೇ ಆಗಿರುವ ನಿಸ್ಸಾನ್ ನೂತನ ಕಾರೊಂದನ್ನು ಅನಾವರಣಗೊಳಿಸಿದೆ.
ಅದುವೇ 2015 ನಿಸ್ಸಾನ್ ಜಿಟಿ-ಆರ್ ಫೇಸ್‌ಲಿಫ್ಟ್ ವರ್ಷನ್. ಹೆಸರಲ್ಲೇ ಸೂಚಿಸಿರುವಂತೆಯೇ ಫೇಸ್‌ಲಿಫ್ಟ್ ಅಂದರೆ ಕಾರಿನ ಅಂದಚಂದವನ್ನು ಅಥವಾ ಸ್ವರೂಪವನ್ನು ಸುಂದರಗೊಳಿಸುವ ಪ್ರಯತ್ನ ಮಾಡಲಾಗಿದೆ.
ಇವೆಲ್ಲವೂ 2015 ನಿಸ್ಸಾನ್ ಜಿಟಿಆರ್ ಫೇಸ್‌ಲಿಫ್ಟ್ ವರ್ಷನ್‌ನಲ್ಲಿ ಕಂಡುಬರಲಿದೆ. ಇಲ್ಲಿ ಪ್ರಮುಖವಾಗಿಯೂ ಜಿಟಿಆರ್ ನಿರ್ವಹಣೆ ಹೆಚ್ಚಿಸಲು ಪ್ರಯತ್ನ ಮಾಡಲಾಗಿದೆ. ಇದು ಹೆಚ್ಚು ಆರಾಮದಾಯಕ ಪಯಣವನ್ನು ಖಾತ್ರಿಪಡಿಸಲಿದೆ.

ತಾಂತ್ರಿಕವಾಗಿಯೂ ಯಾವುದೇ ಬದಲಾವಣೆಗೆ ನಿಸ್ಸಾನ್ ಮುಂದಾಗಿಲ್ಲ. ಹಾಗಿದ್ದರೂ ಹಿಂದಿನಗಿಂತಲೂ ಹೆಚ್ಚು ನಿರ್ವಹಣೆಯ ನೀಡುವಲ್ಲಿ ನೂತನ ಜಿಟಿಆರ್ ಯಶಸ್ಸು ಕಾಣಲಿದೆ.

ಇದರ ಅಪ್‌ಗ್ರೇಡ್ ಪ್ಯಾಕೇಜ್ ಅಂಗವಾಗಿ ಕಾರಿನ ಹೊರ ಸ್ವರೂಪದ ವಿನ್ಯಾಸದಲ್ಲಿ ಕೆಲವೊಂದು ಬದಲಾವಣೆ ಕಂಡುಬರಲಿದೆ.

ಅದೇ ರೀತಿ ನಗರ ಪ್ರದೇಶದ ಸೀಮಿತ ವೇಗದಲ್ಲಿನ ಚಾಲನೆಯಲ್ಲೂ ಉತ್ತಮ ಚಾಲನಾ ಅನುಭವ ನೀಡಲಿದೆ.

ಎಲ್‌ಇಡಿ ಹೆಡ್‌ಲೈಟ್ ಇನ್ನೊಂದು ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ನಾಲ್ಕು ವೃತ್ತಗಳನ್ನು ಒಳಗೊಂಡಿರುವ ಆಕಾರದ ಟೈಲ್ ಲ್ಯಾಂಪ್ ಸಹ ಆಕರ್ಷಕವೆನಿಸಲಿದೆ. ಇದು ಸುಲಭವಾಗಿ 2015 ನಿಸ್ಸಾನ್ ಜಿಟಿ-ಆರ್ ಗುರುತಿಸಿಕೊಳ್ಳುವಲ್ಲಿ ನೆರವಾಗಲಿದೆ.

ಇನ್ನು ಕಾರಿನ ಒಳಮೈಯಲ್ಲಿ ಮೂರು ವಿಧಧ ವರ್ಣಗಳಿರಲಿದೆ. ಇದು ಲೆಥರ್ ಸ್ಟೀರಿಂಗ್, ಲೆಥರ್ ಸೀಟು ಮುಂತಾದ ಫೀಚರುಗಳನ್ನು ಪಡೆದಿರಲಿದೆ.

ಹಾಗೆಯೇ ಗರಿಷ್ಠ ವೇಗದಲ್ಲೂ ಕ್ಯಾಬಿನ್ ಶಬ್ದ ಕಡಿಮೆ ಮಾಡುವ ಪ್ರಯತ್ನವನ್ನು ಮಾಡಲಾಗಿದೆ.

ಅಂದ ಹಾಗೆ 2015 ನಿಸ್ಸಾನ್ ಜಿಟಿಆರ್ ಜಪಾನ್‌ನಲ್ಲಿ ಡಿಸೆಂಬರ್‌ನಿಂದ ಮಾರಾಟಕ್ಕೆ ಲಭ್ಯವಿರಲಿದೆ. ಹಾಗಿದ್ದರೂ ಜಗತ್ತಿನ ಉಳಿದ ದೇಶಗಳು ಮುಂದಿನ ವರ್ಷವಷ್ಟೇ ಇದನ್ನು ಗಿಟ್ಟಿಸುವ ಅವಕಾಶ ಪಡೆಯಲಿದೆ.


Click it and Unblock the Notifications








