ಸದ್ಯದಲ್ಲೇ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಕಾರು ಭಾರತ ಎಂಟ್ರಿ

Posted By:

ಭವಿಷ್ಯದ ಸಂಚಾರ ವಾಹನ ತಯಾರಿಸುವುದರಲ್ಲಿ ಕಾರ್ಯ ಮಗ್ನವಾಗಿರುವ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆ ಬಿಎಂಡಬ್ಲ್ಯು, ತನ್ನ ಬಹುನಿರೀಕ್ಷಿತ ಎಲೆಕ್ಟ್ರಿಕ್ ಐ3 (i3) ಕಾರನ್ನು ಮೂರು ಖಂಡಗಳಲ್ಲಿ ಅನಾವರಣಗೊಳಿಸಿದೆ. ಬಲ್ಲ ಮೂಲಗಳ ಪ್ರಕಾರ ನಿಕಟ ಭವಿಷ್ಯದಲ್ಲೇ ಬಿಎಂಡಬ್ಲ್ಯು ವಿದ್ಯುತ್ ಚಾಲಿತ ಕಾರು ಭಾರತ ಪ್ರವೇಶ ಪಡೆಯಲಿದೆ.

ಬಿಎಂಡಬ್ಲ್ಯು ಐ3 ಎಲೆಕ್ಟ್ರಿಕ್ ಕಾರಿನ ಮೊದಲ ಉತ್ಪಾದನಾ ವರ್ಷನ್ ಚೀನಾದ ಬೀಜಿಂಗ್, ಬ್ರಿಟನ್‌ನ ಲಂಡನ್ ಹಾಗೂ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಪ್ರದರ್ಶನ ಕಂಡಿದೆ. ಕಂಪನಿಯ ಪ್ರಕಾರ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಸಮರ್ಥ ಭವಿಷ್ಯವಿದ್ದು ಮೂಲಸೌಕರ್ಯಗಳ ವೃದ್ಧಿಯಾಗಬೇಕಿದೆ ಎಂದಿದೆ.

3 ಖಂಡಗಳಲ್ಲಿ ಅನಾವರಣ

3 ಖಂಡಗಳಲ್ಲಿ ಅನಾವರಣ

ಪ್ರಸಕ್ತ ಸಾಲಿನ ವರ್ಷಾಂತ್ಯದಲ್ಲಿ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಕಾರು ಲಂಡನ್‌ ಮಾರುಕಟ್ಟೆ ಪ್ರವೇಶಿಸಲಿದ್ದು, ಬೀಜಿಂಗ್ ಹಾಗೂ ನ್ಯೂಯಾರ್ಕ್‌ಗಳಲ್ಲಿ 2014 ವರ್ಷಾರಂಭದಲ್ಲಿ ಲಭ್ಯವಾಗಲಿದೆ.

ದರ ಮಾಹಿತಿ

ದರ ಮಾಹಿತಿ

ಯುರೋಪ್‌ನಲ್ಲಿ ಇದರ ದರ 35,000 ಯುರೋ ಹಾಗೂ ಅಮೆರಿಕದಲ್ಲಿ 41,350 ಯುಎಸ್ ಡಾಲರ್ ನಿಗದಿಯಾಗಿದೆ. ಅಂದರೆ ಭಾರತೀಯ ರುಪಾಯಿ ಪ್ರಕಾರ ಅನುಕ್ರಮವಾಗಿ 28 ಹಾಗೂ 25 ಲಕ್ಷ ರು.ಗಳಾಗಿದೆ. ಚೀನಾದಲ್ಲಿ ದರ ಇನ್ನೂ ನಿಗದಿಯಾಗಿಲ್ಲ.

ಭಾರತ ಲಾಂಚ್ ಯಾವಾಗ?

ಭಾರತ ಲಾಂಚ್ ಯಾವಾಗ?

ಅಂದ ಹಾಗೆ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಲಾಂಚ್ ಮಾಡುವ ಉದ್ದೇಶವಿದೆಯೇ ಎಂಬ ಪ್ರಶ್ನೆಗೆ, ಇದಕ್ಕೆ ಸಂಬಂಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆದಿದ್ದು, ಭಾರತ ಒಂದು ಸಮರ್ಥ ರಾಷ್ಟ್ರವಾಗಿದೆ. ಆದರೆ ಸದ್ಯ ಐ3 ಬಿಡುಗಡೆ ಬಗ್ಗೆ ಏನು ಹೇಳುವಾಗಿಲ್ಲ ಎಂದು ಕಂಪನಿ ತಿಳಿಸಿದೆ.

ಮೂಲಸೌಕರ್ಯ

ಮೂಲಸೌಕರ್ಯ

ಭಾರತದಲ್ಲಿ ಮೊದಲು ವಿದ್ಯುತ್ ಚಾಲಿತ ಕಾರುಗಳಿಗೆ ಲಭ್ಯವಾಗಬೇಕಾಗಿರುವ ಮೂಲಸೌಕರ್ಯ ವೃದ್ಧಿಯಾಗಬೇಕಾಗಿದೆ ಎಂಬುದನ್ನು ಕಂಪನಿ ಉಲ್ಲೇಖಿಸಿದೆ.

ನಾಲ್ಕು ಸೀಟು

ನಾಲ್ಕು ಸೀಟು

ಪ್ರಮುಖವಾಗಿಯೂ ನಗರ ಪ್ರದೇಶದ ಬಳಕೆಗೆ ಅಭಿವೃದ್ಧಿಪಡಿಸಲಾಗಿರುವ ನಾಲ್ಕು ಸೀಟಿನ ಬಿಎಂಡಬ್ಲ್ಯು ಐ3, ಸಂಪೂರ್ಣ ಎಲೆಕ್ಟ್ರಿಕ್ ನಿಯಂತ್ರಿತ ಎಂಜಿನ್ ಹೊಂದಿದೆ.

ಪರಿಸರ ಸ್ನೇಹಿ

ಪರಿಸರ ಸ್ನೇಹಿ

ಇದು ಜೀರೋ ಎಮಿಷನ್ ಹೊಗೆ ಹೊರಸೂಸುವುದರಿಂದ ಸಂಪೂರ್ಣ ಪರಿಸರ ಸ್ನೇಹಿ ಎನಿಸಿಕೊಂಡಿದೆ. ಅಲ್ಲದೆ 130ರಿಂದ 300 ಕೀ.ಮೀ. ರೇಂಜ್ ವರೆಗೂ ಚಲಿಸುವ ಸಾಮರ್ಥ್ಯ ಹೊಂದಿದೆ.

ಬಿಎಂಡಬ್ಲ್ಯು ಮೈಲುಗಲ್ಲು

ಬಿಎಂಡಬ್ಲ್ಯು ಮೈಲುಗಲ್ಲು

ಈ ಮೂಲಕ ಆಟೋ ಜಗತ್ತಿನಲ್ಲಿ ಬಿಎಂಡಬ್ಲ್ಯು ಹೊಸ ಮೈಲುಗಲ್ಲನಿಟ್ಟಿದೆ. ಬಿಎಂಡಬ್ಲ್ಯು ಭವಿಷ್ಯದಲ್ಲಿ ಉಳಿಯಬಲ್ಲ ಸಂಚಾರ ವಾಹಕಗಳಲ್ಲಿ ಹೊಸ ಕ್ರಾಂತಿಕಾರಿ ಬದಲಾವಣೆಯನ್ನುಂಟು ಮಾಡಿದೆ.

ಹಗುರ ಭಾರ

ಹಗುರ ಭಾರ

ಇನ್ನು ಕಾರಿನ ಭಾರವನ್ನು ತಗ್ಗಿಸುವ ನಿಟ್ಟಿನಲ್ಲಿ ಹಗುರ ಭಾರದ ಅಲ್ಯೂಮಿನಿಯಂ ಚಾಸೀಸ್, ಬಲವರ್ಧಿತ ಪ್ಲಾಸ್ಟಿಕ್ ಹಾಗೂ ಕಾರ್ಬರ್ ಫೈಬರ್‌ಗಳಂತಹ ಪರಿಕರಗಳನ್ನು ಬಳಸಲಾಗಿದೆ.

ಕಾರ್ಬನ್ ಫೈಬರ್

ಕಾರ್ಬನ್ ಫೈಬರ್

ಅಂದ ಹಾಗೆ ಬಿಎಂಡಬ್ಲ್ಯು ಕಾರು ಉತ್ಪಾದನೆಯಲ್ಲಿ ಇದೇ ಮೊದಲ ಬಾರಿಗೆ ಕಾರ್ಬನ್ ಫೈಬರ್ ಬಳಸಲಾಗುತ್ತಿದೆ. ಇದು ಸ್ಟೀಲ್‌ಗಿಂತ ಶೇಕಡಾ 50ರಷ್ಟು ಹಗುರ ಭಾರವನ್ನು ಹೊಂದಿದೆ.

ಒಟ್ಟು ಭಾರ

ಒಟ್ಟು ಭಾರ

ಅಂದರೆ ಕಾರು 1,200 ಕೆ.ಜಿ ತೂಕವಿದ್ದು, ಬ್ಯಾಟರಿ 230 ಕೆ.ಜಿ ಭಾರವಿದೆ.

ಮರುಬಳಕೆ

ಮರುಬಳಕೆ

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಕಾರಿನ 80ರಷ್ಟು ಭಾಗವನ್ನು ಮರುಬಳಕೆ ಮಾಡಬಹುದಾಗಿದೆ. ಇದನ್ನು ಮನೆ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ಚಾರ್ಜ್ ಮಾಡಿಸಬಹುದಾಗಿದ್ದು, ಕೇವಲ ಆರು ಗಂಟೆ ಅವಧಿಯಲ್ಲಿ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲಿದೆ.

'ಐ ಬ್ರಾಂಡ್'

'ಐ ಬ್ರಾಂಡ್'

ಈ ಮೂಲಕ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗಳಿಗಾಗಿ ಬಿಎಂಡಬ್ಲ್ಯು ಹೊಸತಾದ 'ಐ' ಬ್ರಾಂಡ್ ಸೃಷ್ಟಿ ಮಾಡಿದೆ. ಹಾಗೆಯೇ ಬಿಎಂಡಬ್ಲ್ಯು ಐ3 ಅಭಿವೃದ್ಧಿಗಾಗಿ ಒಂದು ಬಿಲಿಯನ್ ಯುರೋಗಿಂತಲೂ ಹೆಚ್ಚು ವ್ಯಯ ಮಾಡಲಾಗಿದೆ.

ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಏತನ್ಮಧ್ಯೆ ಬಿಎಂಡಬ್ಲ್ಯು ಐ8 (i8) ಹೈಬ್ರಿಡ್ ಸ್ಪೋರ್ಟ್ಸ್ ಕಾರು ಮುಂದಿನ ವರ್ಷ ಅನಾವರಣಗೊಳ್ಳಲಿದೆ.

English summary
BMW Group on Monday launched the first production series of its all-electric ‘i3’ city car simultaneously in three continents. The company said it sees huge potential in India for the BMW i3 and is in talks with the government on the issue of sustainable mobility.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more