ನೂತನ ಪ್ರಯಾಸ್ ಹೊರತಂದ ಟೊಯೊಟಾ, ದರವೆಷ್ಟು?
ಜಪಾನಿನ ಟೊಯೊಟಾ ದೇಶದ ರಸ್ತೆಗೆ ಹೈಬ್ರಿಡ್ ಸೆಡಾನ್ ಪ್ರಯಾಸ್ ನ ನೂತನ ಆವೃತ್ತಿಯನ್ನು ಹೊರತಂದಿದೆ. ಇದರ ದೆಹಲಿ ಎಕ್ಸ್ ಶೋರೂಂ ದರ 27.39 ಲಕ್ಷ ರು.ನಿಂದ 29.41 ಲಕ್ಷ ರು.ವರೆಗಿದೆ.

ಜಪಾನಿನ ಟೊಯೊಟಾ ಕಂಪನಿಯು ದೇಶದಲ್ಲಿ ಕಿರ್ಲೊಸ್ಕರ್ ಗ್ರೂಪ್ ಜೊತೆ ಜಂಟಿ ಉದ್ಯಮ ಹೊಂದಿದೆ. ಕಂಪನಿಯು 2010ರಲ್ಲಿ ವಿಶ್ವದ ಅತ್ಯಧಿಕ ಮಾರಾಟದ ಹೈಬ್ರಿಡ್ ಕಾರು ಪ್ರೀಯೂಸನ್ನು ಪರಿಚಯಿಸಿತ್ತು.
"ನೂತನ ಪ್ರಯಾಸ್ ಕಾರು ಅಡ್ವಾನ್ಸ್ ಡ್ ಹೈಬ್ರಿಡ್ ತಂತ್ರಜ್ಞಾನ ಹೊಂದಿದ್ದು, ದೇಶದಲ್ಲೂ ಇಂತಹ ಕಾರುಗಳಿಗೆ ಬೇಡಿಕೆ ಹೆಚ್ಚಿಸುವುದು ನಮ್ಮ ಆದ್ಯತೆಯಾಗಿದೆ" ಎಂದು ಟೊಯೊಟಾ ಕಿರ್ಲೊಸ್ಕರ್ ಮೋಟರ್(ಟಿಕೆಎಂ) ವಾಣಿಜ್ಯ ವಿಭಾಗದ ಎಂಡಿ ವಿಶ್ವನಾಥನ್ ಹೇಳಿದ್ದಾರೆ.
ನೂತನ ಪ್ರಯಾಸ್ ಹಳೆಯ ಬ್ಯಾಟರಿ ತಂತ್ರಜ್ಞಾನಕ್ಕೆ ಬದಲಾಗಿ ಸೌರಚಾಲಿತ ವೆಂಟಿಲೇಷನ್ ಸಿಸ್ಟಮ್ ಹೊಂದಿದೆ ಎಂದು ಅವರು ಹೇಳಿದ್ದಾರೆ. ಕಂಪನಿಯು ದೇಶದಲ್ಲಿ ಸುಮಾರು 150 ಪ್ರಯಾಸ್ ಕಾರುಗಳನ್ನು ಮಾರಾಟ ಮಾಡಿದೆ. ನೂತನ ಪ್ರಯಾಸ್ ಮಾರಾಟ ಕಾರ್ಯತಂತ್ರಗಳ ಕುರಿತು ವಿಶ್ವನಾಥನ್ ಮಾಹಿತಿ ನೀಡಿಲ್ಲ.


Click it and Unblock the Notifications








