ಕಾರು ಪ್ರದರ್ಶನದಲ್ಲಿ ಅರೆಬೆತ್ತಲು ಹೆಣ್ಯಾಕೆ ಇರಬೇಕು?

By * ಶ್ರೀಮತಿ

ದೆಹಲಿಯಲ್ಲಿ ನಡೆಯುತ್ತಿರುವ ವಾಹನ ಪ್ರದರ್ಶನದಲ್ಲಿ ಅರೆ ಬೆತ್ತಲೆ ರೂಪದರ್ಶಿಯರನ್ನು ನೋಡಿದ ಬೆಂಗಳೂರಿನ ಶ್ರೀಮತಿ ಎಂಬವರು ಬರೆದು ಕಳುಹಿಸಿದ ಲೇಖನ ಇಲ್ಲಿದೆ. ಅವರ ಅಭಿಪ್ರಾಯಕ್ಕೆ ಸಹಮತ ಅಥವ ವಿರೋಧವಿದ್ದರೆ ಕಮೆಂಟಿಸಲು ಮರೆಯಬೇಡಿ

Girls and Cars Delhi Auto Show 2012

ಅತ್ಯಧಿಕ ಜನ ಸೇರುವ ವಾಹನ ಪ್ರದರ್ಶನಗಳಲ್ಲಿ ಎರಡನೇ ಸ್ಥಾನ ಪಡೆದಿರುವ ದೆಹಲಿ ವಾಹನ ಪ್ರದರ್ಶನ ಚೆನ್ನಾಗಿಯೇ ನಡೆಯುತ್ತಿದೆ. ಅಲ್ಲಿ ಹೊಸ ಕಾರು, ಬೈಕುಗಳು ರಾರಾಜಿಸುತ್ತಿವೆ. ಹೆಚ್ಚಿನ ಅಂತಹ ವಾಹನಗಳ ಮುಂದೆ ರೂಪದರ್ಶಿಯರು ನಗುಚೆಲ್ಲುತ್ತಿದ್ದಾರೆ. ಚಪಲ ಚೆನ್ನಿಗರು ಉಗುಳು ನುಂಗುತ್ತಾರೆ!

ವಾಹನ ಪ್ರದರ್ಶನದಲ್ಲಿ ಹೆಣ್ಣನ್ನು ಪ್ರದರ್ಶನದ ಗೊಂಬೆಯಾಗಿಸುವ ವಿದೇಶಿ ಸಂಸ್ಕೃತಿ ದೇಶಕ್ಕೂ ಬಂದಿದೆ. ಜಿನಿವಾ ವಾಹನ ಪ್ರದರ್ಶನ, ಡೆಟ್ರೋಯಾಟ್ ಪ್ರದರ್ಶನ, ಏಷ್ಯಾ ವಾಹನ ಪ್ರದರ್ಶನ ಮುಂತಾದ ಜಾಗತಿಕ ವಾಹನ ಪ್ರದರ್ಶನದಲ್ಲಿ ಹೆಣ್ಣು ಅತ್ಯಂತ ಸೆಕ್ಸಿಯಾಗಿ ಕಾಣಿಸಿಕೊಳ್ಳುತ್ತಾಳೆ.

ವಿದೇಶಿ ವಾಹನ ಪ್ರದರ್ಶನಗಳಲ್ಲಿ ಮಹಿಳಾ ರೂಪದರ್ಶಿಯನ್ನು ಇನ್ನಷ್ಟು ಕೆಟ್ಟದಾಗಿ ತೋರಿಸಲಾಗುತ್ತದೆ. ಆಕೆ ಅರೆ ಬೆತ್ತಲೆಯಾಗಿ ಸೂಪರ್ ಕಾರುಗಳ ಮೇಲೆ ಅಂಗಾಂತ, ಕಾಮಭಂಗಿಗಳಲ್ಲಿರುವಂತೆ ಪೋಸ್ ಕೊಡಲಾಗುತ್ತದೆ. ದೆಹಲಿ ವಾಹನ ಪ್ರದರ್ಶನದಲ್ಲಿ ಇಷ್ಟೊಂದು ಪೋಸ್ ಇರದಿದ್ದರೂ ಕರ್ಚಿಪ್ ಕಟ್ಟಿಕೊಂಡ ರೂಪದರ್ಶಿಯರಿದ್ದರು ಅನ್ನೋದು ನಿಜ.

ವಾಹನ ಪ್ರದರ್ಶನದಲ್ಲಿ ಹೆಣ್ಣನ್ನು ಬಳಸಿಕೊಳ್ಳುವುದ್ಯಾಕೆ ಅನ್ನೋದು ನನ್ನ ಮೊದಲ ಪ್ರಶ್ನೆ. ಬಳಸಿಕೊಂಡರೂ ಅರೆಬೆತ್ತಲೆ ಪೋಸ್ ಕೊಡುವುದು ಎಷ್ಟು ಸರಿ? ಹೆಣ್ಣು ಪುರುಷರ ಗಮನ ಸೆಳೆಯುತ್ತಾಳೆ ಅನ್ನೋ ಕಾರಣವಿಡಿದು ಆಕೆಯನ್ನು ಪ್ರದರ್ಶನದ ಗೊಂಬೆಯಾಗಿಸುವುದು ಎಷ್ಟು ಸರಿ?

ಬಣ್ಣ ತಾರತಮ್ಯ ಇಂದು ನಿನ್ನೆಯದ್ದಲ್ಲ. ವಾಹನ ಪ್ರದರ್ಶನದಲ್ಲೂ ಆಕರ್ಷಕ ರೂಪದ, ಬಿಳಿಬಣ್ಣದ ಬೆಡಗಿಯರಿಗೆ ಆದ್ಯತೆ. ಇಲ್ಲಿ ಕಪ್ಪು ಹುಡುಗಿಯರು ಕಾಣೋದು ಅಪರೂಪ. ವ್ಯಾಪಾರ, ಮಾರುಕಟ್ಟೆ ಜಗತ್ತಿನಲ್ಲಿ ಸದ್ದಿಲ್ಲದೇ ನಡೆಯುವ ಈ ತಾರತಮ್ಯಕ್ಕೆ ಕೊನೆಯೆಂದು?

ದೆಹಲಿ ವಾಹನ ಪ್ರದರ್ಶನ ಜಾಗತಿಕ ಜನರ ಗಮನ ಸೆಳೆಯುತ್ತದೆ. ಅದಕ್ಕೆ ಎಲ್ಲ ಜಾಗತಿಕ ವಾಹನ ಪ್ರದರ್ಶನಗಳಂತೆ ಇಲ್ಲೂ ವಿದೇಶಿ ರೂಪದರ್ಶಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ಮಾರುತ್ತರ ನೀಡಬಹುದು.

ಅರೆಬೆತ್ತಲೆ ಹೆಣ್ಣನ್ನು ಕಾರು, ಬೈಕುಗಳ ಮುಂದೆ ನಿಲ್ಲಿಸುವುದು ನಮ್ಮ ದೇಶದ ಸಂಸ್ಕೃತಿಗೆ ಸರಿಹೊಂದುವುದೇ? ಮಹಿಳೆಯರನ್ನು ಗೌರವಿಸುವ ನಾಡಿನಲ್ಲೂ ಇದು ನಡೆಯಬೇಕೆ?

ಜಾಗತಿಕವಾಗಿ ದೇಶವನ್ನು ಪರಿಚಯಿಸುವ ಇಂತಹ ಬೃಹತ್ ಪ್ರದರ್ಶನದಲ್ಲಿ ಅರೆ ಬೆತ್ತಲೆ ವಿದೇಶಿ ರೂಪದರ್ಶಿಯರಿಗಿಂತ ದೇಶದ ಸಾರಿಯುಟ್ಟ ನಾರಿಯರನ್ನು ಸ್ವಾಗತಕಾರಣಿಯರಂತೆ ಪರಿಚಯಿಸಿಕೊಂಡಿದ್ದರೆ ನಮ್ಮ ದೇಶದ ಸಂಸ್ಕೃತಿ ಜಗತ್ತಿಗೆ ತಿಳಿಯುತ್ತಿತ್ತು ಅಲ್ಲವೇ?

Most Read Articles

Kannada
English summary
Why are Girls being used in Delhi Auto Expo 2012? They attract mens
 attention and that will surely help the car companies getting noticed.
Story first published: Saturday, January 7, 2012, 13:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X