ದೇಶದಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಹ್ಯುಂಡೈ
ಭಾರತದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ ಮೋಟಾರ್ಸ್, ದೇಶದಲ್ಲಿ ನಾಲ್ಕು ದಶಲಕ್ಷ ಯುನಿಟ್ ಗಳ ಮಾರಾಟ ಮೈಲುಗಲ್ಲನ್ನು ತಲುಪಿದೆ. ಸರಿ ಸುಮಾರು 19 ವರ್ಷಗಳ ಹಿಂದೆ ಭಾರತದಲ್ಲಿ ತನ್ನ ಪಯಣವನ್ನು ಆರಂಭಿಸಿರುವ ಹ್ಯುಂಡೈ ಈ ಮಹತ್ತರ ಸಾಧನೆ ಮಾಡಿದೆ.
Also Read: ಢಿಕ್ಕಿ ಪರೀಕ್ಷೆಯಲ್ಲಿ ಹ್ಯುಂಡೈ ಗ್ರಾಂಡ್ ಐ10 ಡಮಾರ್
ಹ್ಯುಂಡೈ ದೇಶದಲ್ಲಿ ಬಿಡುಗಡೆ ಮಾಡಿದ ಮೊದಲ ಕಾರು ಸ್ಯಾಂಟ್ರೊ ಆಗಿದ್ದು, ವಾಹನ ಪ್ರೇಮಿಗಳಿಂದ ಅತ್ಯಂತ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿತ್ತು. ತದಾ ಬಳಿಕ ಗ್ರಾಂಡ್ ಐ10, ಎಲೈಟ್ ಐ20, ಕ್ರೆಟಾಗಳಂತಹ ಜನಪ್ರಿಯ ಮಾದರಿಗಳನ್ನು ಬಿಡುಗಡೆ ಮಾಡಿದ ಖ್ಯಾತಿಯೂ ಹ್ಯುಂಡೈಗೆ ಸಲ್ಲುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಇಯಾನ್ ನಿಂದ ತೊಡಗಿ ಸಾಂಟಾಫೆ ವೆರೆಗೆ ಹತ್ತು ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಈ ಮೂಲಕ ತನ್ನ ಬದ್ದತೆಯನ್ನು ಪ್ರದರ್ಶಿಸಿದೆ.

ಈ ನಡುವೆ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ (2014) ಮಾರುಕಟ್ಟೆ ಪ್ರವೇಶಿಸಿರುವ ಹ್ಯುಂಡೈ ಎಲೈಟ್ ಐ20 ಕೇವಲ 20 ತಿಂಗಳುಗಳ ಅವಧಿಯಲ್ಲೇ ಒಂದು ವರೆ ಲಕ್ಷ ಯುನಿಟ್ ಗಳ ಮಾರಾಟವನ್ನು ತಲುಪಿದೆ.

ಈ ಮೂಲಕ ಪ್ರೀಮಿಯಂ ಕಾಂಪಾಕ್ಟ್ ವಿಭಾಗದಲ್ಲಿ ಶೇಕಡಾ 66ರಷ್ಟು ಮಾರಾಟವನ್ನು ಹ್ಯುಂಡೈ ಎಲೈಟ್ ಐ20 ವಶಪಡಿಸಿಕೊಂಡಿದ್ದು, ತನ್ನ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಭಾರತದ ವರ್ಷದ ಕಾರೆಂಬ ಗೌರವಕ್ಕೂ ಪಾತ್ರವಾಗಿರುವ ಹ್ಯುಂಡೈ ಐ20, ಶೈಲಿಯಿಂದ ಹಿಡಿದು ಚಲನಶೀಲತೆ, ನಿರ್ವಹಣೆ ಹಾಗೂ ಸೌಲಭ್ಯಗಳಿಗಾಗಿ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಅತ್ಯುತ್ತಮ ಬೆಂಬಲ ವ್ಯಕ್ತವಾಗಿದೆ.

ಈ ಎಲ್ಲದರ ಮೂಲಕ ಗ್ರಾಹಕರಿಗೆ ಹತ್ತಿರುವಾಗಿರುವ ಹ್ಯುಂಡೈ ಸಂಸ್ಥೆಯು 2016 ಆಟೋ ಎಕ್ಸ್ ಪೋದಲ್ಲಿ ಮತ್ತಷ್ಟು ನೂತನ ಕಾನ್ಸೆಪ್ಟ್ ಹಾಗೂ ಹೊಸ ಮಾದರಿಗಳನ್ನು ಪರಿಚಯಿಸುವ ಇರಾದೆಯಲ್ಲಿದೆ.

ಹ್ಯುಂಡೈ ಕ್ರೆಟಾ ಈಗ ದೇಶದ ಅಗ್ರ ಕ್ರೀಡಾ ಬಳಕೆಯ ವಾಹನ


Click it and Unblock the Notifications