ಹ್ಯುಂಡೈ ಮಿನಿ ಎಸ್‌‍ಯುವಿಗೆ ನಾಮಕರಣವಾಯ್ತು!

By Nagaraja

ನಿಮಗೆಲ್ಲರಿಗೂ ಹ್ಯುಂಡೈ ಮಿನಿ ಎಸ್‌ಯುವಿ ಭಾರತಕ್ಕೆ ಕಾಲಿಡುವ ವಿಷಯ ಗೊತ್ತೇ ಇದೆ. ಪ್ರಸ್ತುತ ಕಾರಿನ ಅಭಿವೃದ್ಧಿ ಹಂತದಲ್ಲಿ ಇದು ಐಎಕ್ಸ್25 ಎಂದೇ ಗುರುತಿಸಿಕೊಂಡಿತ್ತು. ಪ್ರಸ್ತುತ ಸಂಸ್ಥೆಯು ದೇಶದಲ್ಲಿ ಮಾರಾಟ ಮಾಡಲಿರುವ ತನ್ನ ಕಾಂಪಾಕ್ಟ್ ಎಸ್‌ಯುವಿ ಕಾರಿನ ಹೆಸರನ್ನು ಬಹಿರಂಗಗೊಳಿಸಿದೆ.

ಅದುವೇ ಹ್ಯುಂಡೈ 'ಕ್ರೆಟಾ' (Creta). ಈಗಾಗಲೇ ಭಾರತೀಯ ಮಾರುಕಟ್ಟೆಗೆ ವಿಶ್ವಾಸಾರ್ಹ ಮಾದರಿಗಳನ್ನು ಪರಿಚಯಿಸಿರುವ ಹ್ಯುಂಡೈ, ದೇಶದಲ್ಲಿ ಅತಿ ಹೆಚ್ಚು ಬೇಡಿಕೆಯ ಕಾಂಪಾಕ್ಟ್ ಎಸ್‌ಯುವಿ ವಿಭಾಗದಲ್ಲೂ ಮೋಡಿ ಮಾಡುವ ನಿರೀಕ್ಷೆಯಲ್ಲಿದೆ.

ಹ್ಯುಂಡೈ ಕ್ರೆಟಾ

ಭಾರತ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಹೆಸರು ಬಳಕೆಯಾಗಲಿದೆ. ಇನ್ನು ವಿಶೇಷವೆಂದರೆ ಐ20 ಆಕ್ಟಿವ್ ಹಾಗೂ ಎಲೈಟ್ ಐ20 ತರಹನೇ ಹ್ಯುಂಡೈ ಕ್ರೆಟಾ ಸಹ ಭಾರತದಲ್ಲೇ ಜಾಗತಿಕ ಪಾದಾರ್ಪಣೆಗೈಯಲಿದೆ.

ಪ್ರತಿಸ್ಪರ್ಧಿಗಳು...
ಭಾರತೀಯ ವಾಹನ ಮಾರುಕಟ್ಟೆಯಲ್ಲಿ ನೂತನ ಹ್ಯುಂಡೈ ಕ್ರೆಟಾ ಮಾದರಿಯು ಈಗಾಗಲೇ ನೆಲೆಯೂರಿರುವ ರೆನೊ ಡಸ್ಟರ್, ನಿಸ್ಸಾನ್ ಟೆರನೊ, ಫೋರ್ಡ್ ಇಕೊಸ್ಪೋರ್ಟ್ ಹಾಗೂ ಇನ್ನಷ್ಟೇ ಬಿಡುಗಡೆಯಾಗಲಿರುವ ಟಾಟಾ ಮೋಟಾರ್ಸ್ ಹಾಗೂ ಮಾರುತಿ ಸುಜುಕಿ ಎಸ್ ಯುವಿ ಸವಾಲುಗಳನ್ನು ಎದುರಿಸಲಿದೆ.

ನೂತನ ಹ್ಯುಂಡೈ ಕ್ರೆಟಾ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಮಾದರಿಗಳಲ್ಲಿ ದೊರಕಲಿದ್ದು, ಅನೇಕ ಆಧುನಿಕ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ. ಇದು ಫ್ರಂಟ್ ವೀಲ್ ಜೊತೆಗೆ ಫೋರ್ ವೀಲ್ ಡ್ರೈವ್‌ನಲ್ಲೂ ಲಭ್ಯವಾಗಲಿದೆ. ಇನ್ನು ಮ್ಯಾನುವಲ್ ಜೊತೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುವ ಸಾಧ್ಯತೆಯಿದೆ. ಇವೆಲ್ಲದರ ನಿರಂತರ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

Article Published On: Wednesday, June 3, 2015, 8:01 [IST]
English summary
Hyundai India has showcased its ix25 compact SUV on several occasions at various motor shows. They have now decided to provide its offering with a name and have christened it ‘Creta'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+