ಜು.21ರಂದು ನೂತನ ಹ್ಯುಂಡೈ ಕ್ರೆಟಾ ಬಿಡುಗಡೆ

By Nagaraja

ಎಲ್ಲ ಹೊಸತನದಿಂದ ಕೂಡಿರುವ ಹ್ಯುಂಡೈ ಕ್ರೆಟಾ ಇದೇ ಮುಂಬರುವ ಜುಲೈ 21ರಂದು ಬಿಡುಗಡೆಯಾಗಲಿದೆ. ದಕ್ಷಿಣ ಕೊರಿಯಾ ವಾಹನ ತಯಾರಿಕ ಸಂಸ್ಥೆಯು ಇದರಲ್ಲಿ ಫ್ಲೂಯಿಡಿಕ್ ತತ್ವಶಾಸ್ತ್ರವನ್ನು ಅನುಸರಿಸಿದೆ.

ಈ ಹಿಂದೆ ಐಎಕ್ಸ್25 ಎಂದು ಗುರುತಿಸಲ್ಪಟ್ಟಿದ್ದ ಹ್ಯುಂಡೈ ಮಿನಿ ಕ್ರೀಡಾ ಬಳಕೆಯ ವಾಹನಕ್ಕೆ ಇತ್ತೀಚೆಗಷ್ಟೇ ಕ್ರೆಟಾ ಎಂಬ ಹೆಸರನ್ನಿಡಲಾಗಿತ್ತು. ಇದು ಪ್ರಮುಖವಾಗಿಯೂ ರೆನೊ ಡಸ್ಟರ್ ಹಾಗೂ ಮಾರುತಿ ಎಸ್ ಕ್ರಾಸ್ ಸವಾಲನ್ನು ಎದುರಿಸಲಿದೆ.

ಹ್ಯುಂಡೈ ಕ್ರೆಟಾ

ಎಸ್ ಯುವಿ ಜನಪ್ರಿಯತೆಯೊಂದಿಗೆ ದೇಶದ ಮಾರುಕಟ್ಟೆಯಲ್ಲಿ ತನ್ನ ಸಾನಿಧ್ಯವನ್ನು ಮತ್ತಷ್ಟು ಬಲಪಡಿಸುವುದು ಸಂಸ್ಥೆಯ ಇರಾದೆಯಾಗಿದೆ. ಈ ಸಂಬಂಧ ನೂತನ ಕ್ರೆಟಾ ಕಾರಿನ ರೇಖಾ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ಹೆಕ್ಸಾಗನಲ್ ಗ್ರಿಲ್, ಬಾಡಿ ಕ್ಲಾಡಿಂಗ್, ಸ್ಕಫ್ ಪ್ಲೇಟ್, ಹೆಡ್ ಲ್ಯಾಂಡ್, ಎಲ್ ಇಡಿ ಸಾನಿಧ್ಯ, ಟ್ವಿನ್ ಪ್ರೊಜೆಕ್ಟರ್, ರಿಯರ್ ಬಂಪರ್, 17 ಅಥವಾ 18 ಅಲಾಯ್ ವೀಲ್, ಟೈಲ್ ಲ್ಯಾಂಪ್ ಹಾಗೂ 200 ಎಂಎಂ ಗ್ರೌಂಡ್ ಕ್ಲಿಯರನ್ಸ್ ಆಕರ್ಷಣೆಗೆ ಕಾರಣವಾಗಿದೆ.

ಹ್ಯುಂಡೈ ಕ್ರೆಟಾ

ಇನ್ನು ಒಳಮೈಯಲ್ಲಿ ಬಣ್ಣ ಹೊಂದಿಕೆಯಾಗುವ ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್, ಸೆಂಟ್ರಲ್ ಕನ್ಸೋಲ್, ಮೀಡಿಯಾ ಸಿಸ್ಟಂ, ಕ್ಲೈಮೇಟ್ ಕಂಟ್ರೋಲ್, ಬಹು ಕ್ರಿಯಾತ್ಮಕ ಸ್ಟೀರಿಂಗ ವೀಲ್, ಸೆಂಟ್ರಲ್ ಆರ್ಮ್ ರೆಸ್ಟ್, ಏರ್ ಕಾನ್ ವೆಂಟ್ಸ್, ಬ್ಲೂಟೂತ್ ನಿಯಂತ್ರಣ, ಪುಶ್ ಬಟನ್ ಸ್ಟ್ಯಾರ್ಟ್ ಮತ್ತು ಸುರಕ್ಷತೆಗಾಗಿ ಎಬಿಎಸ್ ಹಾಗೂ ಡ್ಯುಯಲ್ ಏರ್ ಬ್ಯಾಗ್ ಸೌಲಭ್ಯಗಳು ಇರಲಿದೆ.

ಅಂತಿಮವಾಗಿ ಕಾರಿನಡಿಯಲ್ಲಿ 1.6 ಲೀಟರ್ ಡೀಸೆಲ್ ಎಂಜಿನ್ ಲಗತ್ತಿಸುವ ಸಾಧ್ಯತೆಯಿದ್ದು, 126 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಸಿಕ್ಸ್ ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡಲಿದೆ. ಅಂತೆಯೇ ಭವಿಷ್ಯದಲ್ಲಿ 1.6 ಲೀಟರ್ ಪೆಟ್ರೋಲ್ ಎಂಜಿನ್ (121 ಅಶ್ವಶಕ್ತಿ) ಆಳವಡಿಕೆಯಾಗುವ ಸಾಧ್ಯತೆಯಿದೆ. ಏತನ್ಮಧ್ಯೆ ಸದ್ಯ ಬೆಲೆಯ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.

Most Read Articles

Kannada
English summary
Hyundai has promised to launch its very first compact SUV in India. We recently got to know that the concept name ix25 will be replaced by Hyundai ‘Creta'.
Story first published: Tuesday, June 9, 2015, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X