'ವರ್ಷದ ಕಾರು ಪ್ರಶಸ್ತಿ' ಸಮರ್ಥಿಸಿಕೊಂಡ ಹ್ಯುಂಡೈ ಕ್ರೆಟಾ

By Nagaraja

ಈಗಷ್ಟೇ 'ಭಾರತದ ವರ್ಷದ ಕಾರು ಪ್ರಶಸ್ತಿ'ಗೆ ಭಾಜನವಾಗಿರುವ ಹ್ಯುಂಡೈ ಕ್ರೆಟಾ ಬಿಡುಗಡೆಯಾದ ಐದು ತಿಂಗಳಲ್ಲೇ 75,000ಕ್ಕೂ ಹೆಚ್ಚು ಬುಕ್ಕಿಂಗ್ಸ್ ದಾಖಲಿಸಿಕೊಳ್ಳುವ ಮೂಲಕ ತನ್ನ ನಂಬರ್ ವನ್ ಸ್ಥಾನವನ್ನು ಸಮರ್ಥಿಸಿಕೊಂಡಿದೆ.

ಭಾರತದಿಂದಲೇ ಜಾಗತಿಕ ಪಾದಾರ್ಪಣೆಗೈದಿರುವ ಹ್ಯುಂಡೈ ಕ್ರೆಟಾ ಅನೇಕ ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಅಲ್ಲದೆ 2015ನೇ ಸಾಲಿನ ಮಾರಾಟ ಏರಿಕೆಯಲ್ಲಿ ಕ್ರೆಟಾ ನಿರ್ಣಾಯಕ ಪಾತ್ರ ವಹಿಸಿದೆ.

'ವರ್ಷದ ಕಾರು ಪ್ರಶಸ್ತಿ' ಸಮರ್ಥಿಸಿಕೊಂಡ ಹ್ಯುಂಡೈ ಕ್ರೆಟಾ

ಪರಿಣಾಮಕಾರಿ ವಿನ್ಯಾಸ ಮೈಗೂಡಿಸಿರುವ ಬಂದಿರುವ ಹ್ಯುಂಡೈ ಕ್ರೆಟಾ, ಅದ್ಭುತ ರಸ್ತೆ ಸಾನಿಧ್ಯವನ್ನು ಹೊಂದಿರುವುದು ಕಾರಿಗೆ ದೃಢವಾದ ಆತ್ಮವಿಶ್ವಾಸ ತುಂಬುತ್ತಿದೆ.

'ವರ್ಷದ ಕಾರು ಪ್ರಶಸ್ತಿ' ಸಮರ್ಥಿಸಿಕೊಂಡ ಹ್ಯುಂಡೈ ಕ್ರೆಟಾ

ಹ್ಯುಂಡೈ ಫ್ಲೂಯಿಡಿಕ್ 2.0 ಡಿಸೈನ್ ತಂತ್ರಗಾರಿಕೆಯಿಂದ ಸ್ಪೂರ್ತಿ ಪಡೆದಿರುವ ಹ್ಯುಂಡೈ ಕ್ರೆಟಾ, ದೇಶದ ಅತ್ಯಂತ ಜನಪ್ರಿಯ ಐ20 ಹ್ಯಾಚ್ ಬ್ಯಾಕ್ ಕಾರಿನ ತಳಹದಿಯಲ್ಲಿ ನಿರ್ಮಾಣವಾಗಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

1.6 ಲೀಟರ್ ಪೆಟ್ರೋಲ್ : 123 ಅಶ್ವಶಕ್ತಿ, ಮ್ಯಾನುವಲ್ 1.6 ಲೀಟರ್ ಸಿಆರ್‌ಡಿಐ ವಿಜಿಟಿ ಡೀಸೆಲ್ ಎಂಜಿನ್ : 128 ಅಶ್ವಶಕ್ತಿ, ಮ್ಯಾನುವಲ್ ಆಟೋಮ್ಯಾಟಿಕ್ 1.4 ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ : 90 ಅಶ್ವಶಕ್ತಿ, ಮ್ಯಾನುವಲ್

ಸುರಕ್ಷತೆ

ಸುರಕ್ಷತೆ

ಡ್ಯುಯಲ್ ಏರ್ ಬ್ಯಾಗ್, ಬದಿ ಮತ್ತು ಕರ್ಟೈನ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ರಿ ವರ್ಸ್ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ (ಇಎಸ್‌ಸಿ), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್ (ವಿಎಸ್ಎಂ), ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಕಂಟ್ರೋಲ್ (ಎಚ್ಎಸಿ)

ವಿಶಿಷ್ಟತೆ, ಅನುಕೂಲತೆ

ವಿಶಿಷ್ಟತೆ, ಅನುಕೂಲತೆ

ಎಫ್‌ಎಟಿಸಿ (FATC) ಜೊತೆ ಕ್ಲಸ್ಟರ್ ಐಯನೈಜರ್ (Cluster ionizer), ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್, ಹಿಂದುಗಡೆಯೂ ಎಸಿ ವೆಂಟ್ಸ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಆಡಿಯೋ ವಿಡಿಯೋ ನೇವಿಗೇಷನ್ ಸಿಸ್ಟಂ (ಎವಿಎನ್), 5 ಇಂಚಿನ ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ, ಸೂಪರ್ ವಿಷನ್ ಕ್ಲಸ್ಟರ್, ಸ್ಮಾರ್ಟ್ ಕೀ ಜೊತೆ ಪುಶ್ ಬಟನ್ ಸ್ಟ್ಯಾರ್ಟ್, 17 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಲ್‌ಇಡಿ ಸ್ಥಾನಿಕ ಲ್ಯಾಂಪ್, ಲೆಥರ್ ಸೀಟು,

ಮೈಲೇಜ್:

ಮೈಲೇಜ್:

ಕ್ರೆಟಾ ಪೆಟ್ರೋಲ್ 1.6: 15.29 km/l

ಕ್ರೆಟಾ ಡೀಸೆಲ್ 1.4: 21.38 km/l

ಕ್ರೆಟಾ ಡೀಸೆಲ್ 1.6 ಮ್ಯಾನುವಲ್: 19.67 km/l

ಕ್ರೆಟಾ ಡೀಸೆಲ್ 1.6 ಆಟೋಮ್ಯಾಟಿಕ್: 17.01 km/l

Article Published On: Monday, December 28, 2015, 13:49 [IST]
English summary
Hyundai Creta Registers 75,000 Bookings In India Within 5 Months
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+