ಟಚ್ ಸ್ಕ್ರೀನ್ ವೈಶಿಷ್ಟ್ಯದೊಂದಿಗೆ ಹ್ಯುಂಡೈ ಎಲೈಟ್ ಐ20 ಎಂಟ್ರಿ
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈನ ಎರಡು ಜನಪ್ರಿಯ ಮಾದರಿಗಳಾಗಿರುವ ಎಲೈಟ್ ಐ20 ಪ್ರೀಮಿಯಂ ಹ್ಯಾಚ್ ಬ್ಯಾಕ್ ಮತ್ತು ಐ20 ಆಕ್ಟಿವ್ ಕ್ರಾಸೋವರ್ ಕಾರುಗಳೀಗ ಮತ್ತಷ್ಟು ಶ್ರೀಮಂತವೆನಿಸಿಕೊಳ್ಳಲಿದೆ.
ಯಾಕೆಂದರೆ ದಕ್ಷಿಣ ಕೊರಿಯಾ ಮೂಲದ ಈ ಸಂಸ್ಥೆಯು ಈ ಎರಡು ಜನಪ್ರಿಯ ಮಾದರಿಗಳಲ್ಲಿ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ವ್ಯವಸ್ಥೆಯನ್ನು(Touchscreen Infotainment System) ನೀಡುತ್ತಿದೆ. ಇವೆರಡು ಪೆಟ್ರೋಲ್ ಹಾಗೂ ಡೀಸೆಲ್ ಟಾಪ್ ಎಂಡ್ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.
- ಹ್ಯುಂಡೈ ಎಲೈಟ್ ಐ20 ಆಸ್ಟಾ (ಐಚ್ಛಿಕ)
- ಹ್ಯುಂಡೈ ಐ20 ಆಕ್ಟಿವ್ ಎಸ್ ಎಕ್ಸ್

ಬೆಲೆ ಮಾಹಿತಿ
ಹ್ಯುಂಡೈ ಎಲೈಟ್ ಐ20 ಆಸ್ಟಾ (ಐಚ್ಛಿಕ)
- ಪೆಟ್ರೋಲ್: 7.16 ಲಕ್ಷ ರು.
- ಡೀಸೆಲ್: 8.28 ಲಕ್ಷ ರು.
ಹ್ಯುಂಡೈ ಐ20 ಆಕ್ಟಿವ್ ಎಸ್ ಎಕ್ಸ್:
- ಪೆಟ್ರೋಲ್: 7.92 ಲಕ್ಷ ರು.
- ಡೀಸೆಲ್: 9.16 ಲಕ್ಷ ರು.



Click it and Unblock the Notifications