ಹ್ಯುಂಡೈ ಜೆನಿಸಿಸ್ ಚೊಚ್ಚಲ ಲಗ್ಷುರಿ ಕಾರು ಆಗಮನಕ್ಕೆ ರೆಡಿ
ದಕ್ಷಿಣ ಕೊರಿಯಾ ಮೂಲದ ಸಂಸ್ಥೆ ಹ್ಯುಂಡೈ ಇತ್ತೀಚೆಗಷ್ಟೇ ತನ್ನ ಐಷಾರಾಮಿ 'ಜೆನೆಸಿಸ್' ಬ್ರ್ಯಾಂಡ್ ಲೋಕಾರ್ಪಣೆ ಮಾಡಿತ್ತು. ಇದಾದ ಬೆನ್ನಲ್ಲೇ ಜೆನಿಸಿಸ್ ಬ್ರ್ಯಾಂಡ್‌ನ ಮೊದಲ ಲಗ್ಷುರಿ ಕಾರನ್ನು ಸಂಸ್ಥೆಯು ಅನಾವರಣಗೊಳಿಸಿದೆ.
ಹ್ಯುಂಡೈ ಜೆನಿಸಿಸ್ ಜಿ90 ಅಥವಾ ಇಕ್ಯೂ900 ಹ್ಯುಂಡೈನ ಮೊದಲ ಐಕಾನಿಕ್ ಸೆಡಾನ್ ಮಾದರಿಯಾಗಿರಲಿದೆ. ಇದು ಜಗತ್ತಿನ್ನೆಲ್ಲ ಮುಂಚೂಣಿಯ ಐಷಾರಾಮಿ ಬ್ರ್ಯಾಂಡ್ ಗಳ ಜೊತೆ ಪೈಪೋಟಿ ಒಡ್ಡಲಿದೆ.

2016 ವರ್ಷಾರಂಭದ ವೇಳೆ ಬಿಡುಗಡೆ ನಿರೀಕ್ಷೆ ಹೊಂದಿರುವ ಜೆನಿಸಿಸ್ ಜಿ90, 5205 ಎಂಎಂ ಉದ್ದ, 1915 ಎಂಎಂ ಅಗಲ, 1495 ಎಂಎಂ ಎತ್ತರ ಮತ್ತು 3160 ಎಂಎಂ ಚಕ್ರಾಂತರವನ್ನು ಪಡೆದುಕೊಂಡಿದೆ.
ಇದರಲ್ಲಿ 3.8 ಲೀಟರ್ ವಿ6 ಜಿಡಿಐ ಎಂಜಿನ್ ಆಳವಡಿಸುವ ಸಾಧ್ಯತೆಯಿದ್ದು 395 ಎನ್ಎಂ ತಿರುಗುಬಲದಲ್ಲಿ 310 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಮಗದೊಂದು 3.3. ಲೀಟರ್ ವಿ6 ಟರ್ಬೊ ಜಿಟಿಐ ಎಂಜಿನ್ 510 ಎನ್‌ಎಂ ತಿರುಗುಬಲದಲ್ಲಿ 365 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇವೆಲ್ಲದರ ಜೊತೆಗೆ ಹೆಚ್ಚು ಶಕ್ತಿಶಾಲಿ 5.0 ಲೀಟರ್ ವಿ8 ಜಿಡಿಐ ಎಂಜಿನ್ ಆಳವಡಿಸುವ ಸಾಧ್ಯತೆಯಿದ್ದು, 520 ಎನ್ಎಂ ತಿರುಗುಬಲದಲ್ಲಿ 419 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಈ ಎಲ್ಲ ಎಂಜಿನ್ ಗಳು ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.
ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಲೆಕ್ಸಿಕನ್ ಸೌಂಡ್ ಸಿಸ್ಟಂ, 12.3 ಇಂಚುಗಳ ಇನ್ಪೋಟೈನ್ಮೆಂಟ್ ಸಿಸ್ಟಂ, ವೈರ್ ಲೆಸ್ ಚಾರ್ಜಿಂಗ್ ಮತ್ತು ಮೂರು ವಿಧಗಳಲ್ಲಿ ಹೊಂದಾಣಿಸಬಹುದಾದ ತಾಪಮಾನ ವ್ಯವಸ್ಥೆಯೂ ಇರಲಿದೆ. ನೂತನ ಕಾರಿನ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, 10,000ಕ್ಕೂ ಹೆಚ್ಚು ಬುಕ್ಕಿಂಗ್ಸ್ ಗಳನ್ನು ದಾಖಲಿಸಿಕೊಂಡಿದೆ.


Click it and Unblock the Notifications