ಢಿಕ್ಕಿ ಪರೀಕ್ಷೆಯಲ್ಲಿ ಹ್ಯುಂಡೈ ಗ್ರಾಂಡ್ ಐ10 ಡಮಾರ್!

Written By:

ಭಾರತೀಯ ಪ್ರಯಾಣಿಕ ಕಾರುಗಳ ಸುರಕ್ಷಾ ಗುಣಮಟ್ಟದ ಗುಣಮಟ್ಟದ ಬಗ್ಗೆ ನಿರಂತರವಾಗಿ ಭೀತಿ ಹುಟ್ಟುತ್ತಲೇ ಇದೆ. ಇದಕ್ಕಿರುವ ಪ್ರಮುಖ ಕಾರಣ ವಿದೇಶ ಭದ್ರತಾ ಗುಣಮಟ್ಟತೆಯನ್ನು ಕಾಯ್ದುಕೊಳ್ಳಲು ಭಾರತೀಯ ವಾಹನಗಳು ವಿಫಲವಾಗುತ್ತಿರುವುದು.

ಇದಕ್ಕೊಂದು ಹೊಸ ಸೇರ್ಪಡೆ ಹ್ಯುಂಡೈ ಗ್ರಾಂಡ್ ಐ10. ಲ್ಯಾಟಿನ್ ಎನ್‌ಸಿಎಪಿ ನಡೆಸಿರುವ ಢಿಕ್ಕಿ ಪರೀಕ್ಷೆಯಲ್ಲಿ ಮೇಡ್ ಇನ್ ಇಂಡಿಯಾ ಗ್ರಾಂಡ್ ಐ10 ಮಕಾಡೆ ಮಲಗಿರುವುದು ಮತ್ತಷ್ಟು ಆತಂಕಗಳಿಗೆ ಕಾರಣವಾಗಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಹ್ಯುಂಡೈ ಗ್ರಾಂಡ್ ಐ10 ಡಮಾರ್!

ಫ್ಲೂಯಿಡಿಕ್ 2.0 ಡಿಸೈನ್ ತತ್ವಶಾಸ್ತ್ರದೊಂದಿಗೆ ನಿರ್ಮಾಣವಾಗಿರುವ ಹ್ಯುಂಡೈ ಗ್ರಾಂಡ್ ಐ10 ಭಾರತದಲ್ಲಿ ಅತ್ಯುತ್ತಮ ಮಾರಾಟವನ್ನು ಗಿಟ್ಟಿಸಿಕೊಳ್ಳುತ್ತದೆ. ಪ್ರಸ್ತುತ ಮೇಡ್ ಇನ್ ಇಂಡಿಯಾ ಗ್ರಾಂಡ್ ಐ10 ಚಿಲಿ ಸೇರಿದಂತೆ ಅನೇಕ ಲ್ಯಾಟಿನ್ ಅಮೆರಿಕ ರಾಷ್ಟ್ರಗಳಿಗೂ ರವಾನೆಯಾಗುತ್ತಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಹ್ಯುಂಡೈ ಗ್ರಾಂಡ್ ಐ10 ಡಮಾರ್!

ಈ ನಡುವೆ ಲ್ಯಾಟಿನ್ ಎನ್‌ಸಿಎಪಿ ನಡೆಸಿರುವ ಢಿಕ್ಕಿ ಪರೀಕ್ಷೆಯಲ್ಲಿ ಹ್ಯುಂಡೈ ಗ್ರಾಂಡ್ ಐ10 ಬೇಸ್ ವೆರಿಯಂಟ್ ಶೂನ್ಯ ಅಂಕ ಸಂಪಾದಿಸಿರುವುದು ಹಿನ್ನಡೆಗೆ ಕಾರಣವಾಗಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಹ್ಯುಂಡೈ ಗ್ರಾಂಡ್ ಐ10 ಡಮಾರ್!

ಎಬಿಎಸ್ ಭದ್ರತೆ ಇಲ್ಲದಿರುವುದು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅಥವಾ ಸ್ಟ್ಯಾಂಡರ್ಡ್ ಏರ್ ಬ್ಯಾಗ್ ಸಹ ಇಲ್ಲದಿರುವುದು ಹ್ಯುಂಡೈ ಗ್ರಾಂಡ್ ಐ10 ವೈಫಲ್ಯ ಅನುಭವಿಸಲು ಪ್ರಮುಖ ಕಾರಣವಾಗಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಹ್ಯುಂಡೈ ಗ್ರಾಂಡ್ ಐ10 ಡಮಾರ್!

ಭಾರತೀಯ ಸರಕಾರವು ಸುರಕ್ಷಾ ಮಾನದಂಡಗಳನ್ನು ಕಡ್ಡಾಯವಾಗಿಸಲು ಹೊರಟಿರುವುದು ಒಳ್ಳೆಯ ವಿಷಯ. ಆದರೆ ಈ ಹೊಸ ನೀತಿ ಯಾವಾಗ ಜಾರಿಗೆ ಬರಲಿದೆ ಎಂಬುದು ಅಶ್ವ ಪ್ರಶ್ನೆಯಾಗಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಹ್ಯುಂಡೈ ಗ್ರಾಂಡ್ ಐ10 ಡಮಾರ್!

ಒಟ್ಟಿನಲ್ಲಿ ಭಾರತ ನಿರ್ಮಿತ ಮಾದರಿಗಳು ಪದೇ ಪದೇ ವಿದೇಶ ಢಿಕ್ಕಿ ಪರೀಕ್ಷೆಯಲ್ಲಿ ವೈಫಲ್ಯ ಅನುಭವಿಸುತ್ತಿರುವುದು ದೇಶದ ವಾಹನ ಸಂಸ್ಥೆಗಳಿಗೂ ಹಿನ್ನೆಡೆಯಾಗಿ ಪರಿಣಮಿಸುವ ಭೀತಿ ಕಾಡುತ್ತಿದೆ.

English summary
Hyundai Grand i10 Made In India Scores Zero At Latin NCAP
Story first published: Saturday, September 12, 2015, 16:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark