ಬ್ರೆಜಿಲ್‌ಗೆ 2016 ಹ್ಯುಂಡೈ ಐ20 ಆಕ್ಟಿವ್; ದೇಶಕ್ಕೆ ಬರುತ್ತಾ?

Written By:

ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್ ಕಾರು ಬ್ರೆಜಿಲ್ ನಲ್ಲಿ ಎಚ್‌ಬಿ20ಎಕ್ಸ್ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ. ದಕ್ಷಿಣ ಕೊರಿಯಾ ಮೂಲದ ಈ ಸಂಸ್ಥೆಯು ಪ್ರಸ್ತುತ ಕಾರಿಗೀಗ ಹೊಸ ವಿನ್ಯಾಸವನ್ನು ತುಂಬುತ್ತಿದೆ.

ಬ್ರೆಜಿಲ್‌ಗೆ ಎಂಟ್ರಿ ಕೊಟ್ಟಿರುವ ಹೊಸ ಎಚ್‌ಬಿ20ಎಕ್ಸ್ ಮಾದರಿಯ ಬೇಸ್ ಬಿಆರ್‌ಎಲ್ ವೆರಿಯಂಟ್ ಭಾರತೀಯ ರುಪಾಯಿ ಮೌಲ್ಯದ ಪ್ರಕಾರ 9.35 ಲಕ್ಷ ರು.ಗಳಷ್ಟು ಹಾಗೂ ಟಾಪ್ ಎಂಡ್ ಬಿಆರ್‌ಎಲ್ 11.23 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಪರಿಷ್ಕೃತ ಹೆಡ್ ಲೈಟ್, ಪ್ರೊಜೆಕ್ಟರ್ ಹೆಡ್ ಲೈಟ್, ಬ್ಲೂ ಡೇಟೈಮ್ ರನ್ನಿಂಗ್ಸ್ ಲೈಟ್ಸ್ ಪ್ರಮುಖ ಆಕರ್ಷಣೆಯಾಗಿದೆ. ಹೊಸತಾದ ಆಕ್ರಮಣಕಾರಿ ಗ್ರಿಲ್ ಕೂಡಾ ನೀಡಲಾಗಿದೆ. ಇನ್ನು ಕ್ರಾಸೋವರ್ ನೋಟಕ್ಕಾಗಿ ಸ್ಕಿಡ್ ಪ್ಲೇಟ್ ಮತ್ತು ಕಪ್ಪು ವರ್ಣದ ಪ್ಲಾಸ್ಟಿಕ್ ರೇಖೆಗಳು ಕಾರಿನ ದೇಹದಲ್ಲಿ ಕಂಡುಬರಲಿದೆ. ಇನ್ನುಳಿದಂತೆ ಬ್ಲೂ ಮೀಡಿಯಾ ಏಳು ಇಂಚುಗಳ ಟಚ್ ಸ್ಕ್ರೀನ್, ಆಪಲ್ ಕಾರ್ ಪ್ಲೇ ಮುಂತಾದ ಸೌಲಭ್ಯಗಳು ಲಭ್ಯವಾಗಲಿದೆ.

ಸದ್ಯ ಭಾರತದಲ್ಲಿರುವ ಆಕ್ಟಿವ್ ಐ20 ಕಾರಿನಲ್ಲೂ ಇದಕ್ಕೆ ಸಮಾನವಾದ ಬದಲಾವಣೆಗಳನ್ನು ಮುಂದಿನ ದಿನಗಳಲ್ಲಿ ನಿರೀಕ್ಷೆ ಮಾಡಬಹುದಾಗಿದೆ. ಬಲ್ಲ ಮೂಲಗಳ ಪ್ರಕಾರ 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡರೂ ಅಚ್ಚರಿ ಪಡಬೇಕಾಗಿಲ್ಲ.

ಕಾರು ಹೋಲಿಸಿ

ಹ್ಯುಂಡೈ ಇಯಾನ್
ಹ್ಯುಂಡೈ ಇಯಾನ್ ಮಾದರಿ ಆಯ್ಕೆ ಮಾಡಿ
-- ಹೋಲಿಕೆಗಾಗಿ ಆಯ್ಕೆ ಮಾಡು --
English summary
Hyundai i20 Active Gets A 2016 Facelift For Brazilian Market
Story first published: Thursday, November 5, 2015, 8:29 [IST]
Please Wait while comments are loading...

Latest Photos