ಹೊಸ ವರ್ಷದಲ್ಲಿ ಹ್ಯುಂಡೈ ಕಾರುಗಳಿಗೆ ಬೆಲೆ ಏರಿಕೆ ಬಿಸಿ

Written By:

ಹೊಸ ವರ್ಷ ಆಗಮನವಾಗುತ್ತಿರುವಂತೆಯೇ ಸ್ವಲ್ಪನೂ ತಡ ಮಾಡದಿರುವ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿದೆ.

ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು ದೇಶದಲ್ಲಿರುವ ತನ್ನೆಲ್ಲ ಶ್ರೇಣಿಯ ಕಾರುಗಳಿಗೆ 30,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಿದೆ. ನೂತನ ದರ ನೀತಿಯು 2016 ಜನವರಿ ತಿಂಗಳಿಂದಲೇ ಜಾರಿಗೆ ಬರಲಿದೆ.

ಹ್ಯುಂಡೈ

ಈ ಬಗ್ಗೆ ಪ್ರತಿಕ್ರಿಯಿಸಿರುವ ಹ್ಯುಂಡೈ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಹಿರಿಯ ಉಪಧ್ಯಕ್ಷರಾಗಿರುವ ರಾಕೇಶ್ ಶ್ರೀವಾಸ್ತವಾ, ರುಪಾಯಿ ಮೌಲ್ಯ ಇಳಿಕೆಯಾಗಿರುವುದು ಹಾಗೂ ನಿರ್ಮಾಣ ವೆಚ್ಚ ಏರಿಕೆಯಾಗಿರುವುದರಿಂದ ಬೆಲೆ ಏರಿಕೆ ಅನಿವಾರ್ಯವೆನಿಸಿದೆ ಎಂದಿದ್ದಾರೆ.

ಯಾವ ಯಾವ ಮಾದರಿಗೆ ಎಷ್ಟೆಷ್ಟು ಬೆಲೆ ಏರಿಕೆಯಾಗಿದೆ ಎಂಬುದು ತಿಳಿದು ಬಂದಿಲ್ಲ. ಹಾಗಿದ್ದರೂ ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ನೂತನ ಹ್ಯುಂಡೈ ಕ್ರೆಟಾ ಮಾದರಿಗೂ ದರ ನೀತಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಕಡಿಮೆಯಾಗಿದೆ.

English summary
Hyundai India Confirms Model Price Hike By Rs. 30,000
Story first published: Thursday, December 10, 2015, 14:36 [IST]
Please Wait while comments are loading...

Latest Photos