ಜೆನಿಸಿಸ್ ಈಗ ಹ್ಯುಂಡೈನ ಲಗ್ಷುರಿ ಬ್ರಾಂಡ್
ಹೌದು, ಎಲ್ಲವೂ ಅಂತಿಮಗೊಂಡಿದ್ದು, ಇನ್ನು ಮೊದಲು ಜೆನಿಸಿಸ್ ದಕ್ಷಿಣ ಕೊರಿಯಾದ ಹ್ಯುಂಡೈ ಸಂಸ್ಥೆಯ ಐಷಾರಾಮಿ ಕಾರು ಬ್ರಾಂಡ್ ಆಗಿ ಗುರುತಿಸಿಕೊಳ್ಳಲಿದೆ. ಈ ಮೂಲಕ ಇದುವರೆಗೆ ಪ್ರೀಮಿಯಂ ಸೆಡಾನ್ ಎಂದೆನಿಸಿಕೊಂಡಿದ್ದ ಜೆನಿಸಿಸ್ ಮಗದೊಂದು ದರ್ಜೆಯನ್ನು ಮುಂದಿಟ್ಟಿದೆ.
ಹ್ಯುಂಡೈನ ಜಾಗತಿಕ ಲಗ್ಷುರಿ ಬ್ರಾಂಡ್ ಆಗಲಿರುವ ಜೆನಿಸಿಸ್, 2020ರ ವೇಳೆಯಾಗುವಾಗ ಆರು ನೂತನ ಮಾದರಿಗಳನ್ನು ಹೊರ ತರಲಿದೆ. ಅಲ್ಲದೆ ನಿರ್ವಹಣೆ, ವಿನ್ಯಾಸ ಹಾಗೂ ನಾವೀನ್ಯತೆಗೆ ಹೆಚ್ಚಿನ ಮಹತ್ವ ಕೊಡಲಾಗುತ್ತದೆ.

ಜೆನಿಸಿಸ್ ಈಗ ವಿಶಿಷ್ಟ ದರ್ಜೆಯನ್ನು ಪಡೆದುಕೊಂಡಿದ್ದು, ಐಷಾರಾಮಿ ಕಾರುಗಳಿಗೆ ತಕ್ಕಂತೆ ಹೊಸ ವಿನ್ಯಾಸ ನೀತಿಯನ್ನು ಅನುಸರಿಸಲಾಗುವುದು. ಅಂತೆಯೇ ಹೊಸತಾದ ರೆಕ್ಕೆ ಮಾದರಿಯ ಲಾಂಛನವನ್ನು ಇದು ಪಡೆದುಕೊಂಡಿದೆ.

ಜೆನೆಸಿಸ್ ಮಾದರಿಗಳು ಮೊದಲು ತವರೂರಾದ ಕೊರಿಯಾ, ಚೀನಾ, ಅಮೆರಿಕ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳನ್ನು ಪ್ರವೇಶಿಸಲಿದೆ. ಬಳಿಕ ಯುರೋಪ್ ಹಾಗೂ ಏಷ್ಯಾ ಮಾರುಕಟ್ಟೆಗಳಿಗೂ ವಿಸ್ತರಿಸಲಾಗುವುದು. ಇನ್ನು ಮುಂದಿನ ದಿನಗಳಲ್ಲಿ ಭಾರತಕ್ಕೂ ಬರುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.



Click it and Unblock the Notifications








