ಕಳೆಗುಂದಿದ ಮಾರಾಟ; ಹ್ಯುಂಡೈ ಸೊನಾಟಾ ಓಡಾಟ ನಿಲುಗಡೆ

By Nagaraja

ದೇಶದ ಜನಪ್ರಿಯ ಮಾದರಿಗಳಲ್ಲಿ ಒಂದಾಗಿರುವ ಹ್ಯುಂಡೈ ಸೊನಾಟಾ ಮಾರಾಟದಲ್ಲಿ ಭಾರಿ ಇಳಿಕೆ ಕಂಡಿರುವ ಹಿನ್ನೆಲೆಯಲ್ಲಿ ಮಾರಾಟವನ್ನು ಸ್ಥಗಿತಗೊಳಿಸಲು ದಕ್ಷಿಣ ಕೊರಿಯಾದ ಮೂಲದ ಸಂಸ್ಥೆಯು ನಿರ್ಧರಿಸಿದೆ.

ವರದಿಗಳ ಪ್ರಕಾರ ಪ್ರೀಮಿಯಂ ಸೆಡಾನ್ ಕಾರುಗಳ ವಿಭಾಗದಲ್ಲಿ ಗುರುತಿಸಿಕೊಂಡಿದ್ದ ಹಿಂದಿನ ಜನಾಂಗದ ಸೊನಾಟಾ, ಕಳೆದ ಆರು ತಿಂಗಳಲ್ಲಿ 10 ಯುನಿಟ್‍‌ಗಿಂತಲೂ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದೆ.

hyunai sonata

ದಶಕದ ಹಿಂದೆ 2001ರಲ್ಲಿ ಮೊದಲ ಬಾರಿಗೆ ಹ್ಯುಂಡೈ ಸೊನಾಟಾ ಕಾರನ್ನು ದೇಶಕ್ಕೆ ಪರಿಚಯಿಸಲಾಗಿತ್ತು. ಬಳಿಕ 2005ರಲ್ಲಿ ಸೊನಾಟಾ ಎಂಬೆರಾ, 2009ರಲ್ಲಿ ಸೊನಾಟಾ ಟ್ರಾನ್ಸ್‌ಫಾರ್ಮ್ ಹಾಗೂ 2012 ಹೊಸ ತಲೆಮಾರಿನ ಮಾದರಿಯು ಪರಿಚಯವಾಗಿತ್ತು.

ಈ ಪೈಕಿ ಟ್ರಾನ್ಸ್‌ಫಾರ್ಮ್ ಹಾಗೂ ಎಂಬೆರಾ ಹೊರತುಪಡಿಸಿ ಹ್ಯುಂಡೈ ಸೊನಾಟಾ ಪೆಟ್ರೋಲ್ ವೆರಿಯಂಟ್‌ನಲ್ಲಿ ಆಗಮನವಾಗಿತ್ತು. ಆದರೆ ಕಳಪೆ ಮಾರಾಟದ ಹಿನ್ನೆಲೆಯಲ್ಲಿ ಮಾರಾಟ ನಿಲುಗಡೆಗೊಳಿಸಲಾಗಿದೆ.

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಮುಂದಿನ ತಲೆಮಾರಿನ ಹ್ಯುಂಡೈ ಸೊನಾಟಾ ಕಾರನ್ನು ಕಳೆದ ವರ್ಷ ಜಾಗತಿಕವಾಗಿ ಪರಿಚಯಿಸಲಾಗಿತ್ತು. ಇದಾದ ಬೆನ್ನಲ್ಲೇ ದಕ್ಷಿಣ ಕೊರಿಯಾದಲ್ಲಿ ಅನಾವರಣಗೊಂಡಿದ್ದ ಹ್ಯುಂಡೈ ಸೊನಾಟಾ ಪ್ಲನ್ ಇನ್ ಹೈಬ್ರಿಡ್ ಮಾದರಿಯು ತರುವಾಯ ಡೆಟ್ರಾಯ್ಟ್ ಮೋಟಾರು ಶೋದಲ್ಲೂ ಪ್ರದರ್ಶನ ಕಂಡಿತ್ತು.

ಅಂದ ಹಾಗೆ ಈ ಬಹುನಿರೀಕ್ಷಿತ ಮಾದರಿ ಭಾರತದಲ್ಲಿ ಇದುವರೆಗೆ ಪರಿಚಯವಾಗಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಹೊಸ ವೈಶಿಷ್ಟ್ಯಗಳೊಂದಿಗೆ ಸೊನಾಟಾ ರಿ ಎಂಟ್ರಿ ಕೊಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಇನ್ನೊಂದೆಡೆ ಹೊಸತಾದ ಹ್ಯುಂಡೈ ಜೆನಿಸಿಸ್ ಮಾದರಿಯು ಸೊನಾಟಾ ಸ್ಥಾನ ತುಂಬಲಿದೆಯೇ ಎಂಬುದಕ್ಕೆ ಇನ್ನಷ್ಟೇ ದೊರಕಬೇಕಾಗಿದೆ.

More from DriveSpark

Article Published On: Friday, February 6, 2015, 12:50 [IST]
English summary
Now the South Korean manufacturer has decided to discontinue its premium sedan from the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+