ಎಂಜಿನ್ ವೈಫಲ್ಯ; 4.7 ಲಕ್ಷ ಹ್ಯುಂಡೈ ಸೊನಾಟಾ ಕಾರುಗಳಿಗೆ ರಿಕಾಲ್ ಬಿಸಿ
ಗಮನಾರ್ಹ ಬೆಳವಣಿಯೊಂದರಲ್ಲಿ ಹ್ಯುಂಡೈ ಸೊನಾಟಾ ಕಾರಿನ ಎಂಜಿನ್ ನಲ್ಲಿ ಸಂಭವನೀಯ ವೈಫಲ್ಯವನ್ನು ತಪ್ಪಿಸುವ ನಿಟ್ಟಿನಲ್ಲಿ ಬರೋಬ್ಬರಿ 4.70 ಲಕ್ಷ ಕಾರುಗಳಿಗೆ ಹಿಂದಕ್ಕೆ ಕರೆ ನೀಡಲಾಗಿದೆ.
ಪ್ರಸ್ತುತ ಎಂಜಿನ್ ವೈಫಲ್ಯವು ಎಂಜಿನ್ ಕಾರ್ಯ ನಿರ್ವಹಣೆಯೇ ನಿಂತು ಹೋಗುವ ಭೀತಿಯಿದ್ದು, ಈ ನಿಟ್ಟಿನಲ್ಲಿ ಭಾರಿ ಸಂಖ್ಯೆಯಲ್ಲಿ ವಾಪಾಸ್ ಕರೆ ನೀಡಲಾಗುತ್ತಿದೆ ಎಂಬುದನ್ನು ಸಂಸ್ಥೆ ತಿಳಿಸಿದೆ.

ಸದ್ಯ ಅಮೆರಿಕದಲ್ಲಿ ಮಾತ್ರ 2011ರಿಂದ 2012ನೇ ಸಾಲಿನಲ್ಲಿ ನಿರ್ಮಾಣವಾದ ಸೊನಾಟಾ ಮಾದರಿಗಳನ್ನು ಹಿಂಪಡೆಯಲಾಗುತ್ತಿದೆ. ಇತರ ದೇಶಗಳಲ್ಲೂ ಇದಕ್ಕೆ ಸಮಾನವಾದ ರಿಕಾಲ್ ಸಂಭವಿಸಿದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ.
ಹ್ಯುಂಡೈನ ಅಲಬಾಮಾ ಘಟಕದಲ್ಲಿ ನಿರ್ಮಿಸಲಾಿಗರುವ 2.0 ಹಾಗೂ 2.4 ಲೀಟರ್ ಎಂಜಿನ್ ಗಳಲ್ಲಿ ತೊಂದರೆ ಕಾಣಿಸಿಕೊಂಡಿರುವ ಬಗ್ಗೆ ಶಂಕೆಯಿದೆ. ಹಾಗಿದ್ದರೂ ಇದುವರೆಗೆ ಯಾವುದೇ ಗಾಯಗಳುಂಟಾಗಿರುವ ಬಗ್ಗೆ ವರದಿಯಾಗಿಲ್ಲ.

ಇನ್ನೊಂದೆಡೆ ಹ್ಯುಂಡೈ ಆಸೆಂಟ್ ಬ್ರೇಕ್ ಲೈಟ್ ನಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಒಂದು ಲಕ್ಷಗಳಷ್ಟು ಯುನಿಟ್ ಗಳಿಗೆ ಹಿಂದಕ್ಕೆ ಕರೆ ನೀಡಲಾಗಿದೆ. ಈ ಕಾರಿನಲ್ಲಿ ಕ್ರೂಸ್ ಕಂಟ್ರೋಲ್ ವ್ಯವಸ್ಥೆಯಲ್ಲೂ ಸಮಸ್ಯೆಯಿದೆ ಎಂಬುದು ತಿಳಿದು ಬಂದಿದೆ.


Click it and Unblock the Notifications