ಬ್ರಾಂಡ್ ಕೊರತೆಯಿಂದಾಗಿ ವೈಫಲ್ಯ ಅನುಭವಿಸಿದ ಕಾರುಗಳು
ಒಂದು ಉತ್ತಮ ಕಾರು ಆಗಿರುವ ಹೊರತಾಗಿಯೂ ಕೆಲವೊಂದು ಮಾದರಿಗಳು ಬ್ರಾಂಡ್ ಹೆಸರಿನಿಂದಾಗಿ ಹಿನ್ನೆಡೆ ಅನುಭವಿಸುತ್ತದೆ. ಇಂತಹ ಹಲವು ಮಾದರಿಗಳನ್ನು ಪಟ್ಟಿ ಮಾಡಿ ಕೊಡಬಹುದಾಗಿದೆ. ಹಾಗೊಂದು ವೇಳೆ ಈ ಎಲ್ಲ ಮಾದರಿಗಳು ದೇಶದ ಜನಪ್ರಿಯ ಮಾರುತಿ ಸುಜುಕಿ ಬ್ರಾಂಡ್ ನಲ್ಲಿ ಬಿಡುಗಡೆಯಾಗುತ್ತಿದ್ದರೆ ಬಹುಶ: ಅದೃಷ್ಟವೇ ಬದಲಾಗುತ್ತಿತ್ತು?
ಹೌದು, ಭಾರತ ಮಾರುಕಟ್ಟೆಯಲ್ಲಿ ಬ್ರಾಂಡ್ ಮೇಲೆ ಗ್ರಾಹಕರು ಹೆಚ್ಚಿನ ನಿಷ್ಠೆಯನ್ನು ತೋರಿಸುತ್ತಾರೆ. ಮಾರುತಿ ಎಂದಾಕ್ಷಣ ಜನರು ಕಣ್ಣು ಮುಚ್ಚಿಕೊಂಡು ವಾಹನ ಖರೀದಿಸಲು ಇದಕ್ಕಿರುವ ಕಾರಣ. ದಶಕದಿಂದಲೂ ಸಂಸ್ಥೆ ಉಳಿಸಿಕೊಂಡು ಬಂದಿರುವ ನಂಬಿಕೆಯನ್ನು ಇದು ಸಾರುತ್ತದೆ. ಇಂದಿನ ಈ ಲೇಖನದಲ್ಲಿ ಹಿನ್ನೆಡೆ ಅನುಭವಿಸಿರುವ ಇಂತಹ ಕೆಲವು ಕಾರುಗಳನ್ನು ಪಟ್ಟಿ ಮಾಡಿಕೊಡುವ ಪ್ರಯತ್ನ ಮಾಡಲಿದ್ದೇವೆ.

ಫೋಕ್ಸ್ ವ್ಯಾಗನ್ ಪೊಲೊ
ವಿದೇಶದಲ್ಲಿ ಜನಪ್ರಿಯತೆ ಕಾಪಾಡಿಕೊಂಡಿರುವ ಹೊರತಾಗಿಯೂ ಫೋಕ್ಸ್ ವ್ಯಾಗನ್ ಪೊಲೊ ಭಾರತದಲ್ಲಿ ನಿರೀಕ್ಷಿಸಿದಷ್ಟು ಯಶ ಸಾಧಿಸಲಿಲ್ಲ. ಗುಣಮಟ್ಟ, ನಿರ್ವಹಣೆ, ನೋಟ ಹೀಗೆ ಎಲ್ಲ ವಿಭಾಗದಲ್ಲಿ ಫೋಕ್ಸ್ ವ್ಯಾಗನ್ ಪೊಲೊ ಒಂದು ಉತ್ತಮ ಕಾರಾಗಿದೆ ಎಂಬುದನ್ನು ವಾಹನ ವಿಶ್ಲೇಷಕರೇ ಒಪ್ಪುತ್ತಾರೆ.

ನಿಸ್ಸಾನ್ ಮೈಕ್ರಾ
ನಿಧಾನವಾಗಿ ಜಪಾನ್ ಮೂಲದ ನಿಸ್ಸಾನ್ ಸಂಸ್ಥೆಯು ಜನಪ್ರಿಯತೆಯನ್ನು ಗಿಟ್ಟಿಸಿಕೊಳ್ಳುತ್ತಿದೆ. ಇದಕ್ಕೊಂದು ಉತ್ತಮ ಉದಾಹರಣೆ ನಿಸ್ಸಾನ್ ಟೆರನೊ. ಆದರೆ ಆಗಲೇ ಮಾರಾಟದಲ್ಲಿರುವ ನಿಸ್ಸಾನ್ ಮೈಕ್ರಾ ಮಾತ್ರ ನೆಲಕಚ್ಚಿ ಹೋಗಿದೆ. ಅಷ್ಟಕ್ಕೂ ನಿಸ್ಸಾನ್ ಮೈಕ್ರಾ ಕಾರಲ್ಲಿ ಕಂಡುಬಂದಿರುವ ದೋಷಗಳನ್ನು ಹೇಳಬಲ್ಲೀರಾ?

ಹೋಂಡಾ ಬ್ರಿಯೊ
ಸಣ್ಣ ಕಾರು ವಿಭಾಗದಲ್ಲಿ ವಿಶಿಷ್ಟ ಶೈಲಿಯೊಂದಿಗೆ ಬ್ರಿಯೊ ಪ್ರವೇಶ ಪಡೆದಿತ್ತು. ಆದರೆ ಗ್ರಾಹಕರು ಮಾತ್ರ ಮಾರುತಿ, ಹ್ಯುಂಡೈ ಮಾದರಿಗಳನ್ನು ಬಿಟ್ಟು ಇತರ ಯಾವುದೇ ಮಾದರಿಗಳನ್ನು ಪರಿಗಣಿಸುವುದಿಲ್ಲ ಎಂಬುದಕ್ಕೆ ಇಂದೊಂದು ನಿದರ್ಶನವಾಗಿದೆ. ಹೋಂಡಾ ಹಲವು ಜನಪ್ರಿಯ ಮಾದರಿಗಳನ್ನು ಬಿಡುಗಡೆ ಮಾಡಿದೆಯಾದರೂ ಬ್ರಿಯೊ ಮಾತ್ರ ಹಿನ್ನೆಡೆ ಅನುಭವಿಸುತ್ತಿದೆ.

ಫಿಯೆಟ್ ಪುಂಟೊ
ಪಿಯೆಟ್‌ನ ಸಮರ್ಥ ಡೀಸೆಲ್ ಎಂಜಿನ್ ಗಳನ್ನು ಮಾರುತಿ ಸಹಿತ ಜಗತ್ತಿನ ಅನೇಕ ಜನಪ್ರಿಯ ಕಾರು ಬ್ರಾಂಡ್ ಗಳು ಬಳಕೆ ಮಾಡುತ್ತಿವೆ. ಹಾಗಿದ್ದರೂ ಇದೇ ಎಂಜಿನ್ ಗಳು ನೈಜ ಫಿಯೆಟ್ ಬ್ರಾಂಡ್ ನಲ್ಲಿ ಬಂದರೆ ಮಾತ್ರ ಯಾರಿಗೂ ಇಷ್ಟವಾಗುವುದಿಲ್ಲ. ಇದರ ಹಿಂದಿರುವ ಗುಟ್ಟೇನು? ಫಿಯೆಟ್ ಎಡಮಟ್ಟು ಮಾಡಿತೇ?

ಫಿಯೆಟ್ ಲಿನಿಯಾ
ಫಿಯೆಟ್ ಇಟಲಿಯ ಐಕಾನಿಕ್ ಮಾದರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಲ್ಲದೆ ಗುಣಮಟ್ಟದ ಕಾರು ನಿರ್ಮಾಣದಲ್ಲಿ ಹೆಸರು ಮಾಡಿದೆ. ಇಷ್ಟೆಲ್ಲ ಜನಪ್ರಿಯತೆ ಇದ್ದರೂ ಭಾರತದಲ್ಲಿ ಫಿಯೆಟ್ ಯಶಸ್ಸು ಕೇವಲ ನಾಮಮಾತ್ರಕ್ಕೆ ಸೀಮಿತಗೊಂಡಿದೆ.

ಸ್ಕೋಡಾ ರಾಪಿಡ್
ಫೋಕ್ಸ್ ವ್ಯಾಗನ್ ಸಂಸ್ಥೆಯ ಮಗದೊಂದು ಗುಣಮಟ್ಟದ ಕಾರು ಬ್ರಾಂಡ್ ಸ್ಕೋಡಾ ಆಗಿದೆ. ಆದರೆ ದೇಶದಲ್ಲಿ ಸ್ಕೋಡಾ ಕಾರನ್ನು ಖರೀದಿಸುವ ಗೋಜಿಗೆ ಯಾರೂ ಹೋಗುವುದಿಲ್ಲ. ಇವುಗಳ ನಿರ್ವಹಣಾ ವೆಚ್ಚ ತುಂಬಾನೇ ಜಾಸ್ತಿ ಎಂಬ ಅಪವಾದವಿದೆ. ನಿಜನಾ?

ಫೋರ್ಡ್ ಫಿಯೆಸ್ಟಾ
ನಿಸ್ಸಾನ್ ತರಹನೇ ಫೋರ್ಡ್ ಸಹ ಭಾರತದಲ್ಲಿ ನಿಧಾನವಾಗಿ ಜನಪ್ರಿಯತೆ ಸಾಧಿಸುತ್ತಿದೆ. ಆದರೆ ಅತ್ಯುತ್ತಮ ಕಾರು ಆಗಿರುವ ಹೊರತಾಗಿಯೂ ಫಿಯೆಸ್ಟಾ ಮಾತ್ರ ಸೋಲನ್ನು ಒಪ್ಪಿಕೊಳ್ಳಲೇಬೇಕಾಯಿತು.

ಟೊಯೆಟಾ ಲಿವಾ
ಟೊಯೊಟಾದ ನಿರ್ದಿಷ್ಟ ಮಾದರಿಗಳು ಮಾತ್ರ ಭಾರತದಲ್ಲಿ ಯಶ ಕಂಡಿದೆ. ಇನ್ನೋವಾ ಬಹು ಬಳಕೆಯ ವಾಹನ ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಆದರೆ ಲಿವಾ ಸಣ್ಣ ಕಾರು ಜನಮನ ಗೆಲ್ಲುವಲ್ಲಿ ವೈಫಲ್ಯ ಅನುಭವಿಸಿರುವುದಂತೂ ಅಷ್ಟೇ ಸತ್ಯ.

ಟಾಟಾ ಜೆಸ್ಟ್
ಹೊಸ ವಿನ್ಯಾಸ ತಂತ್ರಗಾರಿಕೆಯಲ್ಲಿ ಪರಿಚಯಗೊಂಡಿರುವ ಟಾಟಾ ಜೆಸ್ಟ್ ಆರಂಭದಲ್ಲಿ ಸ್ವಲ್ಪ ಸದ್ದು ಮಾಡಿತ್ತಾದರೂ ಈಗ ಹಿನ್ನೆಡೆ ಅನುಭವಿಸುತ್ತಿದೆ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಜೆಸ್ಟ್ ಆದಷ್ಟು ಬೇಗನೇ ಪುಟಿದೇಳಲಿ ಎಂಬುದೇ ನಮ್ಮ ಆಶಯವಾಗಿದೆ.


Click it and Unblock the Notifications








