ಇಸುಝು ಎಸಿ ಟ್ರಕ್ ಭಾರತದಲ್ಲಿ ಬಿಡುಗಡೆ
ತನ್ನ ಫ್ಯಾಗ್ ಶಿಪ್ ಡಿ ಮ್ಯಾಕ್ಸ್ ಪಿಕಪ್ ಸಾನಿಧ್ಯವನ್ನು ಭಾರತದಲ್ಲಿ ಮತ್ತಷ್ಟು ವಿಸ್ತರಿಸಿರುವ ಜಪಾನ್ ಮೂಲದ ಇಸುಝು ಸಂಸ್ಥೆಯು ಮತ್ತೆರಡು ಪಿಕಪ್ ವೆರಿಯಂಟ್ ಗಳನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ಅದುವೇ ಡಿಮ್ಯಾಕ್ಸ್ ಎಸಿ ಹಾಗೂ ಕ್ಯಾಬ್ ಚಾಸೀ.
ಪ್ರಮುಖವಾಗಿಯೂ ಗ್ರಾಹಕರ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಇಸುಝು ಡಿಮ್ಯಾಕ್ಸ್ ಹೊಸ ಶ್ರೇಣಿಗಳು ಭಾರತ ವಾಹನ ಮಾರುಕಟ್ಟೆಯನ್ನು ಪ್ರವೇಶ ಪಡೆದಿದೆ. ಈಗ ಫಾಕ್ಟರಿ ನಿರ್ಮಿತ ಸಿಂಗ ಕ್ಯಾಬ್ ಡಿಮ್ಯಾಕ್ಸ್ ಎಸಿ ಪಿಕಪ್ ಟ್ರಕ್ ಪ್ರಯಾಣಿಕರ ದಣಿವನ್ನು ಕಡಿಮೆ ಮಾಡಿ ಉಲ್ಲಾಸದಾಯಕ ಪಯಣವನ್ನು ಖಾತ್ರಿಪಡಿಸಲಿದೆ.

ಭಾರತದಂತಹ ಗರಿಷ್ಠ ಉಷ್ಣಾಂಶ ಪ್ರದೇಶಗಳಲ್ಲಿ ಇದರ ಅಗತ್ಯವನ್ನು ಸಂಸ್ಥೆಯು ಅರಿತುಕೊಂಡಿದ್ದು, ಇದಕ್ಕೆ ತಕ್ಕಂತೆ ಪ್ರತಿಕ್ರಿಯಿಸಿದೆ. ಇನ್ನೊಂದೆಡೆ ಕ್ಯಾಬ್ ಚಾಸೀ ವೆರಿಯಂಟ್ ಗಳು ಆಹಾರ, ಅಡುಗೆ, ಹಾರ್ಡ್ ವೇರ್ ಮುಂತಾದ ವಾಣಿಜ್ಯಗಳನ್ನು ಹರಸಿಕೊಂಡು ಜೀವಿಸುವವರ ಅಗತ್ಯಗಳನ್ನು ಈಡೇರಿಸಲಿದೆ. ಇದು ಕೂಡಾ ಸಿಂಗಲ್ ಕ್ಯಾಬ್ ಮಾಡೆಲ್ ಆಗಿರಲಿದೆ.
ಅಂತೆಯೇ ತನ್ನ ಡೀಲರ್ ಜಾಲವನ್ನು ಆದಷ್ಟು ಬೇಗನೇ ವಿಸ್ತರಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ. 2015-16ರ ವೇಳೆಯಾಗುವಾಗ ದೇಶದ್ಯಾಂತ 60ರಷ್ಟು ಔಟ್ಲೆಟ್ ಗಳನ್ನು ತೆರೆಕೊಳ್ಳುವ ಯೋಜನೆ ಹೊಂದಿದೆ. ಪ್ರಸ್ತುತ ಸಂಸ್ಥೆಯು ಬೆಂಗಳೂರು ಸೇರಿದಂತೆ 20ರಷ್ಟು ಡೀಲರ್ ಶಿಪ್ ಗಳನ್ನು ಹೊಂದಿದೆ.

- ಎಂಜಿನ್: 2499 ಸಿಸಿ ಫೋರ್ ಸಿಲಿಂಡರ್, ಕಾಮನ್ ರೈಲ್, ಟರ್ಬೊ ಚಾರ್ಜ್ಡ್ ಇಂಟರ್ ಕೂಲ್ಡ್ ಡೀಸೆಲ್
- ಅಶ್ವಶಕ್ತಿ: 134
- ತಿರುಗುಬಲ: 294
- ಗೇರ್ ಬಾಕ್ಸ್: ಐದು ಫಾರ್ವರ್ಡ್ ಮತ್ತು ಒಂದು ರಿವರ್ಸ್ ಮ್ಯಾನುವಲ್ ಟ್ರಾನ್ಸ್ ಮಿಷನ್


Click it and Unblock the Notifications








