ಸಾಟಿಯಿಲ್ಲದ ಪರ್ಫಾಮೆನ್ಸ್, ರಾಶಿ ಫೀಚರ್ಸ್ ಹೊಂದಿರುವ 2024ರ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಬಿಡುಗಡೆ
ಜಪಾನ್ ವಾಹನ ತಯಾರಕ ಕಂಪನಿಯಾಗಿರುವ ಇಸುಝು ಮೋಟಾರ್ಸ್ ಕಂಪನಿಯು 2024ರ ಇಸುಝು ಡಿ-ಮ್ಯಾಕ್ಸ್ವಿ-ಕ್ರಾಸ್ ಪಿಕಪ್ ಟ್ರಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಇಸುಝು ಡಿ-ಮ್ಯಾಕ್ಸ್ವಿ-ಕ್ರಾಸ್ (Isuzu D-Max V-Cross) ಪಿಕಪ್ ಟ್ರಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.21.20 ಲಕ್ಷವಾಗಿದೆ.
ಫೇಸ್‌ಲಿಫ್ಟೆಡ್ 2024ರ ಇಸುಜು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕಪ್ ಟ್ರಕ್ ಕಾಸ್ಮೆಟಿಕ್ ಬದಲಾವಣೆಗಳು ಮತ್ತು ನವೀಕರಿಸಿದ ವೈಶಿಷ್ಟ್ಯಗಳ ಪಟ್ಟಿ ಮತ್ತು ಹೊಸ ಝಡ್ ಪ್ರೆಸ್ಟೀಜ್ ಟ್ರಿಮ್ ಮಟ್ಟದಲ್ಲಿ ಕೆಲವು ನವೀಕರಣಗಳನ್ನು ತಂದಿದೆ. ಈ 2024ರ ಇಸುಜು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕಪ್ ಟ್ರಕ್ ಮಾದರಿಯು ಹೈಲ್ಯಾಂಡರ್, ವಿ-ಕ್ರಾಸ್ ಝಡ್ ಮತ್ತು ವಿ-ಕ್ರಾಸ್ ಝಡ್ ಪ್ರೆಸ್ಟೀಜ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.

ರೂಪಾಂತರಗಳ ಅನುಗುಣವಾಗಿ ಬೆಲೆಗಳ ಬಗ್ಗೆ ಹೇಳುವುದಾದರೆ, ಇಸುಜು ಡಿ-ಮ್ಯಾಕ್ಸ್ ವಿ-ಕ್ರಾಸ್ ಹೈಲ್ಯಾಂಡರ್ ರೂಪಾಂತರದ ಬೆಲೆಯು ರೂ.21,19,900, ವಿ-ಕ್ರಾಸ್ ಝಡ್ ರೂಪಾಂತರಕ್ಕೆ ರೂ.21,19,900 ಆದರೆ ಟಾಪ್-ಸ್ಪೆಕ್ ವಿ-ಕ್ರಾಸ್ ಝಡ್ ಪ್ರೆಸ್ಟೀಜ್ ರೂಪಾಂತರದ ಬೆಲೆಯು ರೂ.26 ,91,700 ಆಗಿದೆ. ಈ ಎಲ್ಲಾ ಬೆಲೆಗಳು ಚೆನ್ನೈ ಎಕ್ ಶೋರೂಂ ಪ್ರಕಾರವಾಗಿದೆ.
2024ರ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಹೊಸ ಗ್ರಿಲ್ ಮತ್ತು ಮುಂಭಾಗದ ಬಂಪರ್ ಗಾರ್ಡ್ ಜೊತೆಗೆ ಬಾನೆಟ್ ಮತ್ತು ಬ್ಲ್ಯಾಕ್-ಔಟ್ ಅಲಾಯ್ ವ್ಹೀಲ್ ಗಳಿಗೆ ಹೊಸ ಕಾಸ್ಮೆಟಿಕ್ ಅಲಂಕರಣವನ್ನು ಹೊಂದಿದೆ. ಈ ಪಿಕಪ್ ಟ್ರಕ್ ಮಾದರಿ ಮುಂಭಾಗದ ಫೆಂಡರ್, ಫಾಗ್ ಲ್ಯಾಂಪ್, ಹಿಂಭಾಗದ ಬಂಪರ್, ವ್ಹೀಲ್ ಅರ್ಚಾರ್ ಮತ್ತು ರೂಫ್ ಡಾರ್ಕ್ ಗ್ರೇ ಬಣ್ಣವನ್ನು ಹೊಂದಿದ್ದು, ORVM ಗಳು ಕಪ್ಪು ಬಣ್ಣದ್ದಾಗಿರುತ್ತವೆ.

2024ರ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ ಅಪ್ ಟ್ರಕ್ ಮಾದರಿಯಲ್ಲಿ 1.9-ಲೀಟರ್, ಟರ್ಬೋಚಾರ್ಜ್ಡ್ ಕಾಮನ್-ರೈಲ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 163 bhp ಮತ್ತು 360 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಲೈಫ್ ಸ್ಟೈಲ್ ಪಿಕ್ ಅಪ್ ಟ್ರಕ್ 4×2 ಮತ್ತು 4×4 ಎರಡನ್ನು ಹೊಂದಿದೆ.
ಹೊಸ ಇಸುಝು ಪಿಕಪ್ ಟ್ರಕ್ ಸಿಲ್ಕಿ ವೈಟ್ ಪರ್ಲ್, ಬ್ಲ್ಯಾಕ್ ಮೈಕಾ, ರೆಡ್ ಸ್ಪಿನೆಲ್ ಮೈಕಾ, ನಾಟಿಲಸ್ ಬ್ಲೂ, ಗಲೆನಾ ಗ್ರೇ, ಸಿಲ್ವರ್ ಮೆಟಾಲಿಕ್ ಮತ್ತು ಸ್ಪ್ಲಾಶ್ ವೈಟ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇನ್ನು ಈ ಹೊಸ ಇಸುಝು ಪಿಕಪ್ ಟ್ರಕ್ ಮಾದರಿಯ ಒಳಭಾಗದಲ್ಲಿ 9-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ನೊಂದಿಗೆ ಹೆಚ್ಚು ಸ್ಪಷ್ಟವಾಗಿವೆ, ಇದು ವೈರ್‌ಲೆಸ್ Apple CarPlay ಮತ್ತು Android Auto ಕನೆಕ್ಟಿವಿಟಿಯನ್ನು ಹೊಂದಿದೆ.

2024ರ ಇಸುಜು ಡಿ-ಮ್ಯಾಕ್ಸ್ ವಿ-ಕ್ರಾಸ್ ಈಗ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ರಿಯರ್ ಸೀಟ್ ಅಕ್ಯುಪಂಟ್ ಡಿಟೆಕ್ಷನ್ ಸೆನ್ಸರ್‌ಗಳು, ಹಿಂಬದಿಯ ಪ್ರಯಾಣಿಕರಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು ಮತ್ತು ಹಿಂಬದಿಯ ಸೀಟುಗಳಿಗೆ ಹೊಂದಾಣಿಕೆ ಮಾಡಬಹುದಾದ ರಿಕ್ಲೈನ್ ಕಾರ್ಯವನ್ನು ನೀಡುತ್ತದೆ. ಇದರೊಂದಿಗೆ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್, ಶಿಫ್ಟ್-ಆನ್-ದಿ-ಫ್ಲೈ 4WD ಮತ್ತು ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








