ಬಹುನಿರೀಕ್ಷಿತ ಇಸುಝು ಡಿ-ಮ್ಯಾಕ್ಸ್ ಎಲೆಕ್ಟ್ರಿಕ್ ಪಿಕ್-ಅಪ್ ಟ್ರಕ್ ವಿಶೇಷತೆಗಳು

ಜಪಾನ್ ವಾಹನ ತಯಾರಕ ಕಂಪನಿಯಾಗಿರುವ ಇಸುಝು ಮೋಟಾರ್ಸ್ ಕಂಪನಿಯು ಡಿ-ಮ್ಯಾಕ್ಸ್ ಪಿಕ್-ಅಪ್ ಟ್ರಕ್‌ನ ಎಲೆಕ್ಟ್ರಿಕ್ ಆವೃತ್ತಿಯ ಪ್ರೋಟೋಟೈಪ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಿತು. ಇನ್ನು ಇಸುಝು ಡಿ-ಮ್ಯಾಕ್ಸ್ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (ಬಿಇವಿ) ಪ್ರಿ ಉತ್ಪಾದನೆಯ ಮೂಲಮಾದರಿಯು ಮಾರ್ಚ್ 27 ರಂದು ಥೈಲ್ಯಾಂಡ್‌ನಲ್ಲಿ ನಡೆಯುವ 2024ರ ಬ್ಯಾಂಕಾಕ್ ಇಂಟರ್ನ್ಯಾಷನಲ್ ಮೋಟಾರ್ ಶೋನಲ್ಲಿ ಸಾರ್ವಜನಿವಾಗಿ ಪ್ರದರ್ಶಿಸಲಿದೆ.

ಇಸುಝು ಡಿ-ಮ್ಯಾಕ್ಸ್ (Isuzu D-Max) ಬ್ಯಾಟರಿ ಎಲೆಕ್ಟ್ರಿಕ್ ಪಿಕ್-ಅಪ್ ಉತ್ಪಾದನೆಯನ್ನು 2025ರ ವೇಳೆಗೆ ಯುರೋಪ್‌ನಲ್ಲಿ ಪ್ರಾರಂಭಿಸಬಹುದು. ಹೊಸ ಇಸುಝು ಡಿ-ಮ್ಯಾಕ್ಸ್ ಎಲೆಕ್ಟ್ರಿಕ್ ಪಿಕ್-ಅಪ್ ಟ್ರಕ್ ಯುರೋಪ್, UK, ಆಸ್ಟ್ರೇಲಿಯಾ, ಥೈಲ್ಯಾಂಡ್ ಮತ್ತು ಇತರ ದೇಶಗಳಂತಹ ಮಾರುಕಟ್ಟೆಗಳಲ್ಲಿ D-Max ಎಲೆಕ್ಟ್ರಿಕ್ ಅನ್ನು ಪರಿಚಯಿಸಲು ಯೋಜಿಸಿದೆ. ಈ ಹೊಸ ಇಸುಝು ಡಿ-ಮ್ಯಾಕ್ಸ್ ಎಲೆಕ್ಟ್ರಿಕ್ ಪಿಕ್-ಅಪ್ ಟ್ರಕ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Isuzu D-Max Electric concept Top Things

ವಿನ್ಯಾಸ: ಹೊಸ ಇಸುಝು ಡಿ-ಮ್ಯಾಕ್ಸ್ ಎಲೆಕ್ಟ್ರಿಕ್ ಪಿಕ್-ಅಪ್ ಟ್ರಕ್ ಬದಲಾವಣೆಯು ವಾಣಿಜ್ಯ ಮತ್ತು ಪ್ರಯಾಣಿಕ ವಾಹನ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಪಿಕ್-ಅಪ್ ಟ್ರಕ್ ಫುಲ್ ಟೈಮ್ 4WD ಸಿಸ್ಟಂ ಅನ್ನು ಹೊಂದಿರುತ್ತದೆ. ಇದು ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಇ-ಆಕ್ಸಲ್‌ಗಳಿಂದ ಕೆಲಸ ಮಾಡುತ್ತದೆ.

ಎಲೆಕ್ಟ್ರಿಕ್ ಪಿಕ್-ಅಪ್ ಟ್ರಕ್ ಮೂಲಮಾದರಿಯ ಮರುವಿನ್ಯಾಸವು ಬ್ಲೂ ಅಸ್ಸೆಂತ್ ಗಳೊಂದಿಗೆ ಕ್ಲೋಸ್ಟ್ ಗ್ರಿಲ್ ಅನ್ನು ಸಂಯೋಜಿಸುತ್ತದೆ. ಇಸುಝು ಡಿ-ಮ್ಯಾಕ್ಸ್ ಎಲೆಕ್ಟ್ರಿಕ್ ಪಿಕ್-ಅಪ್ ಟ್ರಕ್ ಸಾಂಪ್ರದಾಯಿಕ D-ಮ್ಯಾಕ್ಸ್ ಸಿಲೂಯೆಟ್ ಅನ್ನು ಹೊಸ ಸಿಕ್ಸ್-ಸ್ಪೋಕ್ ಅಲಾಯ್ ವ್ಹೀಲ್ ಗಳು ಮತ್ತು ಲೋಡಿಂಗ್ ಬೆಡ್‌ನಲ್ಲಿ "EV ಕಾನ್ಸೆಪ್ಟ್" ಬ್ಯಾಡ್ಜಿಂಗ್ ಅನ್ನು ಹೊಂದಿರುತ್ತದೆ.

ಕಾರ್ಯಕ್ಷಮತೆ: ಈ ಇಸುಝು ಡಿ-ಮ್ಯಾಕ್ಸ್ ಎಲೆಕ್ಟ್ರಿಕ್ (Isuzu D-Max Electric) ಪಿಕ್-ಅಪ್ ಟ್ರಕ್ ಕಠಿಣ ಕಾರ್ಯಕ್ಷಮತೆಯನ್ನು ಉಳಿಸಿಕೊಳ್ಳುತ್ತದೆ. ಗಮನಾರ್ಹವಾಗಿ, ಇಸುಝು D-Max BEV ಎಲೆಕ್ಟ್ರಿಕ್ ಪಿಕ್-ಅಪ್ ಅದರ ಡೀಸೆಲ್ ಕೌಂಟರ್ಪಾರ್ಟ್ಸ್ನಂತೆಯೇ ಅದೇ ಪೇಲೋಡ್ ಸಾಮರ್ಥ್ಯವನ್ನು ಹೊಂದಿರುತ್ತದೆ. ಎಲೆಕ್ಟ್ರಿಕ್ ಪಿಕ್-ಅಪ್ ದಕ್ಷತೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ಇಸುಝು ಕಂಪನಿಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ಬ್ಯಾಟರಿ ಪ್ಯಾಕ್: ಇಸುಝು ಡಿ-ಮ್ಯಾಕ್ಸ್ ಎಲೆಕ್ಟ್ರಿಕ್ ಪಿಕ್-ಅಪ್ ಟ್ರಕ್ 66.9kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು 174 bhp ಪವರ್ ಮತ್ತು 325 Nm ಟಾರ್ಕ್ ಅನ್ನು ಉತ್ಪಾದಿದುವ ಸಾಮರ್ಥ್ಯವನ್ನು ಹೊಂದಿದೆ. ಈ ಸಂಯೋಜಿತ ಔಟ್‌ಪುಟ್ ಅನ್ನು ಪ್ರತಿ ಆಕ್ಸಲ್‌ನಲ್ಲಿ ಇರಿಸಲಾಗಿರುವ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳಿಂದ ಪವರ್ ಅನ್ನು ಸೆಳೆಯುತ್ತದೆ. ಈ ಪಿಕ್-ಅಪ್ ಟ್ರಕ್ 130 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ.

ಡ್ರೈವಿಂಗ್ ರೇಂಜ್ ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಇಸುಝು ಹೆಚ್ಚಿನ ಟ್ರ್ಯಾಷನ್ ಸಾಮರ್ಥ್ಯ ಮತ್ತು ದೃಢವಾದ ಫ್ರೇಮ್ ಅನ್ನು ಹೊಂದಿರುತ್ತದೆ. ಇನ್ನು ಎಲೆಕ್ಟ್ರಿಕ್ ಪಿಕ್-ಅಪ್ ಟ್ರಕ್ ಆವೃತ್ತಿಯು ಡೀಸೆಲ್ ಮಾದರಿಯ ಕಾರ್ಯಕ್ಷಮತೆಗೆ ಸಮಾನಾಂತರವಾಗಿದೆ ಎಂದು ಹೇಳಲಾಗುತ್ತಿದೆ. ಇದು ನಿಜಕ್ಕೂ ವಾಹನ ಪ್ರೇಮಿಗಳಿಗೆ ಖುಷಿ ಕೊಡುತ್ತದೆ. ಎಲೆಕ್ಟ್ರಿಕ್ ಮೂಲಮಾದರಿಯ ಜೊತೆಯಲ್ಲಿ, ಇಸುಜು 1.9-ಲೀಟರ್ ಡೀಸೆಲ್ ಮೈಲ್ಡ್-ಹೈಬ್ರಿಡ್ ಎಂಜಿನ್‌ನೊಂದಿಗೆ ಡಿ-ಮ್ಯಾಕ್ಸ್ ಮೂಲಮಾದರಿಯನ್ನು ಸಹ ಪ್ರದರ್ಶಿಸಿತು.

ಈ ಹೊಸ ಹೈ-ಲ್ಯಾಂಡರ್ MHEV ಮೂಲಮಾದರಿಯು 48-ವೋಲ್ಟ್ ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಟರ್ಬೊ ಡೀಸೆಲ್ ಎಂಜಿನ್‌ನೊಂದಿಗೆ ಜೋಡಿಸಲಾಗಿದೆ. ಈ ಮಾದರಿಯ ವಿವರವಾದ ವಿಶೇಷಣಗಳು ಮತ್ತು ಉತ್ಪಾದನಾ ಟೈಮ್‌ಲೈನ್‌ ಬಗ್ಗೆ ಮಾಹಿತಿಗಳು ಬಹಿರಂಗವಾಗಿಲ್ಲ. ಮಾರುಕಟ್ಟೆಗೆ ಅನುಗುಣವಾಗಿ ಮೈಲ್ಡ್-ಹೈಬ್ರಿಡ್ ಮತ್ತು ಪ್ಲಗ್-ಇನ್ ಹೈಬ್ರಿಡ್ ಆವೃತ್ತಿಗಳನ್ನು ನೀಡುವ ಟೊಯೊಟಾ ಹಿಲಕ್ಸ್ ಮತ್ತು ಫೋರ್ಡ್ ರೇಂಜರ್‌ಗಳಂತಹವುಗಳೊಂದಿಗೆ ಜಾಗತಿಕವಾಗಿ ಸ್ಪರ್ಧಿಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, March 23, 2024, 11:07 [IST]
English summary
New isuzu d max electric concept top things details
Read more on ಇಸುಝು isuzu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+