ಭಾರತಕ್ಕೆ ಇಸುಝು ಎಂಯು-ಎಕ್ಸ್ ಎಸ್ ಯುವಿ ?

ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಇಸುಝು ಮೋಟಾರ್ಸ್, ಭಾರತದಲ್ಲಿ ತನ್ನ ಜನಪ್ರಿಯ ಮಾದರಿಯಾಗಿರುವ ಇಸುಝು ಎಂಯು ಕ್ರೀಡಾ ಬಳಕೆಯ ವಾಹನ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಇದಕ್ಕೆ ಸಂಬಂಧಪಟ್ಟಂತೆ ಪೂರಕವಾದ ಮಾಹಿತಿಗಳು ಬರುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ದೇಶದ ವಾಹನ ಪ್ರೇಮಿಗಳಿಗೆ ಮಗದೊಂದು ಆಕರ್ಷಕ ಎಸ್ ಯುವಿ ನೋಡುವ ಅವಕಾಶ ದೊರಕಲಿದೆ.

isuzu mu x

ಪ್ರಸ್ತುತ ಇಸುಝು ಎಂಯು-7 ಪ್ರೀಮಿಯಂ ಎಸ್ ಯುವಿ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಮಾರಾಟದಲ್ಲಿದೆ. ಬಲ್ಲ ಮೂಲಗಳ ಪ್ರಕಾರ ಎಂಯು-ಎಕ್ಸ್ ಕಾರನ್ನು ಭಾರತಕ್ಕೆ ಆಮದು ಮಾಡಿರುವ ಇಸುಝು ಸಂಸ್ಥೆಯು ಪ್ರಯೋಗವನ್ನು ಮಾಡುತ್ತಿದೆ.

ನೂತನ ಇಸುಝು ಎಂಯು-ಎಕ್ಸ್ ಎಸ್ ಯುವಿ ಕಾರು 2.5 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 320 ತಿರುಗುಬಲದಲ್ಲಿ 134 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆ ಆಟೋಮ್ಯಾಟಿಕ್ ಆಯ್ಕೆಯು ಇರಲಿದೆ.

ಮುಂದಿನ ವರ್ಷಾರಂಭದಲ್ಲಿ ನಡೆಯುವ 2016 ಆಟೋ ಎಕ್ಸ್ ಪೋದಲ್ಲಿ ಇಸುಝು ನೂತನ ಎಸ್ ಯುವಿ ಅನಾವರಣಗೊಂಡರೆ ಅಚ್ಚರಿಪಡಬೇಕಾಗಿಲ್ಲ. 20 ಲಕ್ಷ ಬಜೆಟ್ ನೊಳಗೆ ಬಿಡುಗಡೆ ಮಾಡುವುದು ಸಂಸ್ಥೆಯ ಯೋಜನೆಯಾಗಿರಲಿದೆ. ಹಾಗಾದ್ದಲ್ಲಿ ಫೋರ್ಡ್ ಎಂಡೀವರ್, ಹ್ಯುಂಡೈ ಸಾಂಟಾಫೆ, ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಮತ್ತು ಟೊಯೊಟಾ ಫಾರ್ಚ್ಯುನರ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

More from DriveSpark

Article Published On: Monday, April 6, 2015, 8:12 [IST]
English summary
Isuzu Motors has recently entered the Indian market with a selected offering. They currently offer a single SUV in their passenger vehicle segment, MU-7 is their premium offering in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+