ಮೊಬೈಲ್ ಫೋನ್ ನಿಯಂತ್ರಿತ ರೇಂಜ್ ರೋವರ್
ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್‌ನ ಐಕಾನಿಕ್ ಸಂಸ್ಥೆಯಾಗಿರುವ ಜಾಗ್ವಾರ್ ಲ್ಯಾಂಡ್ ರೋವರ್ ಮೊಬೈಲ್ ಫೋನ್ ನಿಯಂತ್ರಿತ ರೇಂಜ್ ರೋವರ್ ಮಾದರಿಯನ್ನು ಪ್ರದರ್ಶಿಸಿದೆ. ಇದು ವಾಹನ ಜಗತ್ತಿನಲ್ಲಿ ಮತ್ತಷ್ಟು ಆಧುನಿಕ ತಂತ್ರಜ್ಞಾನದ ಅವಿಷ್ಕಾರಕ್ಕೆ ಎಡೆ ಮಾಡಿಕೊಟ್ಟಿದೆ.
ಪ್ರಸ್ತುತ ಅಪ್ಲಿಕೇಷನ್ ಸ್ಮಾರ್ಟ್ ಫೋನ್ ನಲ್ಲಿ ಆಳವಡಿಸಿದರೆ ಮೊಬೈಲ್ ನಿಂದಲೇ ಸ್ಟೀರಿಂಗ್ ವೀಲ್ ತಿರುಗಿಸಬಹುದಾಗಿದೆ. ಇದು ಟ್ರಾಫಿಕ್ ಮುಂತಾದ ಇಕ್ಕಟ್ಟಾದ ಪ್ರದೇಶಗಳಲ್ಲಿ ನೆರವಿಗೆ ಬರಲಿದೆ.

ಈ ರಿಮೋಟ್ ಕಂಟ್ರೋಲ್ ನೆರವಿನಿಂದ ಸ್ಟೀರಿಂಗ್ ನಿಯಂತ್ರಣದ ಜೊತೆಗೆ, ಬ್ರೇಕ್ ಅದುಮಲು, ವೇಗ ಹೆಚ್ಚಿಸಲು ಹಾಗೂ ಗೇರ್ ಬದಲಾಯಿಸಬಹುದಾಗಿದೆ. ಈ ಮೂಲಕ ಆಟಿಕೆ ಕಾರಿನಲ್ಲಿ ನೀವು ಕಂಡಿರುವ ಅದೇ ತಂತ್ರಜ್ಞಾನವು ಆಳವಡಿಕೆಯಾಗಲಿದೆ.

ಮೊಬೈಲ್ ಫೋನ್ ನಿಯಂತ್ರಣದಲ್ಲಿರುವ ವೇಳೆ ಕಾರು ಗಂಟೆಗೆ ಗರಿಷ್ಠ 6.5 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅಂತೆಯೇ ಒರಟಾದ ಹಾಗೂ ಗೋಚರತೆ ಕಡಿಮೆಯಿರುವ ಭೂಪ್ರದೇಶಗಳಲ್ಲಿ ಚಾಲನಾ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.



Click it and Unblock the Notifications








