ಆಹಾ! ಓಹೋ! ಮಾರುತಿ ಕಾರು ಆಮದು ಮಾಡಲಿರುವ ಜಪಾನ್!
ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಮಂತ್ರಿ ಶಿನ್ಜೊ ಅಬೆ ಜೊತೆಗೆ ಇಂಡೋ-ಜಪಾನ್ ಉದ್ಯಮಿ ನಾಯಕರ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿರುವ ಭಾರತ ಪ್ರಧಾನಿ ನರೇಂದ್ರ ಮೋದಿ, "ಇದೇ ಮೊದಲ ಮಾರುತಿ ಕಾರುಗಳನ್ನು ಜಪಾನ್ ಆಮದು ಮಾಡಲಿದೆ" ಎಂದು ತಿಳಿಸಿದ್ದಾರೆ.
'ಮೇಕ್ ಇನ್ ಇಂಡಿಯಾ' ಯೋಜನೆಗೆ ಒತ್ತು ಕೊಟ್ಟಿರುವ ನರೇಂದ್ರ ಮೋದಿ, "ಜಪಾನ್ ಸಂಸ್ಥೆಯು ಮಾರುತಿ (ಸುಜುಕಿ) ಕಾರುಗಳನ್ನು ದೇಶದಲ್ಲೇ ನಿರ್ಮಿಸಲಿದ್ದು, ಬಳಿಕ ಜಪಾನ್‌ಗೆ ರಫ್ತಾಗಲಿದೆ" ಎಂದು ಬಿಡಿಸಿ ಹೇಳಿದರು.

ಹೈ ಸ್ಪೀಡ್ ರೈಲುಗಳ ಜೊತೆಗೆ ಹೈ ಸ್ಪೀಡ್ ಪ್ರಗತಿಯನ್ನು ಉಭಯ ದೇಶಗಳು ತಲುಪಲಿದೆ ಎಂದು ಮೋದಿ ಆಶಾವಾದ ವ್ಯಕ್ತಪಡಿಸಿದರು.
ಈ ನಡುವೆ ಉದ್ದೇಶಿತ 98,000 ಕೋಟಿ ರು. ವೆಚ್ಚದ ಮುಂಬೈ-ಅಹಮಾದಾಬಾದ್ ಬುಲೆಟ್ ರೈಲು ಮಹತ್ತರ ಯೋಜನೆಗೆ ಉಭಯ ದೇಶದ ನಾಯಕರು ಒಲವು ತೋರಿದ್ದಾರೆ. ಈ ಬಗ್ಗೆ ಹೇಳಿಕೆ ಕೊಟ್ಟಿರುವ ಜಪಾನ್ ಪ್ರಧಾನಿ ಶಿನ್ಜೊ ಅಬೆ, "ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗಳನ್ನು ಅತಿ ವೇಗದಲ್ಲಿ ಅನುಷ್ಠಾನಗೊಳಿಸುವುದು ಮಾತ್ರವಲ್ಲದೆ ಅವುಗಳು ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಷ್ಟು ಸುರಕ್ಷಿತ ಕೂಡಾ ಹೌದು" ಎಂದು ಶ್ಲಾಘಿಸಿದ್ದಾರೆ.


Click it and Unblock the Notifications