ವಿಶ್ವದ ಅತಿ ದೊಡ್ಡ ಆಟೋ ಶೋದಲ್ಲಿ ಲಂಬೋ ಓಪನ್ ಟಾಪ್ ಕಾರು ಎಂಟ್ರಿ
ವಿಶ್ವದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳವೆಂಬ ಕೀರ್ತಿಗೆ ಪಾತ್ರವಾಗಿರುವ ಐಎಎ ಫ್ರಾಂಕ್‌ಫರ್ಟ್ ಮೋಟಾರು ಶೋದಲ್ಲಿ ಐಕಾನಿಕ್ ಲಂಬೋರ್ನಿಗಿ ಹ್ಯುರಕನ್ ಸ್ಪೈಡರ್ ಭರ್ಜರಿ ಪಾದಾರ್ಪಣೆ ಮಾಡಲಿದೆ.
ಜರ್ಮನಿಯಲ್ಲಿ ನಡೆಯಲಿರುವ 2015 ಫ್ರಾಂಕ್‌ಫರ್ಟ್ ಮೋಟಾರು ಶೋ ಸೆಪ್ಟೆಂಬರ್ 17ರಿಂದ 27ರ ವರೆಗೆ ಆಯೋಜನೆಯಾಗಲಿದೆ. ಅಲ್ಲದೆ ಇಟಲಿ ಮೂಲದ ಲಂಬೋರ್ಗಿನಿ ಸಂಸ್ಥೆಯು ಇದರ ಗರಿಷ್ಠ ಪ್ರಯೋಜನ ಪಡೆಯುವ ಇರಾದೆಯಲ್ಲಿದೆ.

ಶಕ್ತಿಶಾಲಿ 5.2 ಲೀಟರ್ ವಿ10 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ಲಂಬೋ ಹ್ಯುರಕನ್ ಸ್ಪೈಡರ್ 413 ಎನ್‌ಎಂ ತಿರುಗುಬಲದಲ್ಲಿ 602 ಅಶ್ವಶಕ್ತಿ ಉತ್ಪಾದಿಸಲಿದೆ. ಅಲ್ಲದೆ ಕೇವಲ 3 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ.

ಇತರ ಲಂಬೋ ಕಾರುಗಳಿಗಿಂತ ವಿಭಿನ್ನವಾಗಿ ಗುರುತಿಸಿಕೊಳ್ಳಲಿರುವ ಹ್ಯುರಕನ್ ಸ್ಪೈಡರ್ ಓಪನ್ ಟಾಪ್ ವಿನ್ಯಾಸದೊಂದಿಗೆ ಅದ್ಭುತ ರಸ್ತೆ ಸಾನಿಧ್ಯವನ್ನು ಹೊಂದಿರುತ್ತದೆ. ಇದು ಫೆರಾರಿ 499 ಜಿಟಿಬಿ, 458 ಸ್ಪೈಡರ್ ಮತ್ತು ಮೆಕ್ ಲ್ಯಾರೆನ್ 650ಎಸ್ ಸ್ಪೈಡರ್ ಗಳಂತಹ ಜನಪ್ರಿಯ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.


Click it and Unblock the Notifications








