15ರ ಹರೆಯದ ಬಾಲಕನ ಕನಸು ನನಸಾಗಿಸಿದ ಲಂಬೋರ್ಗಿನಿ
ಅನುವಂಶಿಕ ರೋಗಕ್ಕೆ ತುತ್ತಾಗಿರುವ ಹುಡುಗನೊಬ್ಬನು ಕೊನೆಗೂ ತನ್ನ ಆಸೆಯನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾನೆ. ಚಿಕ್ಕದಿರುವಾಗ ಸೂಪರ್ ಕಾರೊಂದನ್ನು ಪಡೆಯುವುದು ಪ್ರತಿಯೊಬ್ಬರ ಕನಸಾಗಿರುತ್ತದೆ.
15ರ ಬಾಲಕ ನಿಹಾಲ್ ಕೂಡಾ ಇಂತಹದೊಂದು ಕನಸನ್ನು ಹೊತ್ತುಕೊಂಡಿರುತ್ತಾನೆ. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಲಂಬೋರ್ಗಿನಿ ಮುಂಬೈ ಸಂಸ್ಥೆಯು ಬಾಲಕನ ಕನಸನ್ನು ಈಡೇರಿಸಿದೆ.

ವಿಶೇಷವೆಂದರೆ ನಿಹಾಲ್ ಜನ್ಮದಿನವಾದ ಜನವರಿ 20ನರಂದು ಈ ಕನಸು ನನಸಾಗಿದೆ. ಇಟಲಿಯ ಸೂಪರ್ ಕಾರಿನಲ್ಲಿ ಕುಳಿತುಕೊಂಡು ಚಕ್ಕಂದವಾಗಿ ರೈಡ್ ಹೋಗುವುದು ಬಾಲಕನ ಆಸೆಯಾಗಿತ್ತು. ಇದನ್ನೀಗ ನನಸಾಗಿಸಲು ಲಂಬೋರ್ಗಿನಿ ಮುಂಬೈ ತಂಡವು ಯಶಸ್ವಿಯಾಗಿದೆ.
ಅಷ್ಟೇ ಯಾಕೆ ಲಂಬೋರ್ಗಿನಿ ಹ್ಯುರಕನ್‌ಗಳಂತಹ ತಾಜಾ ಆವೃತ್ತಿಗಳನ್ನು ನೋಡುವಂತಹ ಭಾಗ್ಯವು ಈ ಬಾಲಕನಿಗೆ ದೊರಕಿದೆ. ಅನುವಂಶಿಕ ರೋಗಕ್ಕೆ ತುತ್ತಾಗಿರುವ ಹೊರತಾಗಿಯೂ ಲಂಬೋರ್ಗಿನಿ ಸೂಪರ್ ಕಾರಿನ ಬಗ್ಗೆ ಬಾಲಕ ಹೊಂದಿರುವ ಜ್ಞಾನವನ್ನು ಆಲಿಸಿ ಇಡೀ ಲಂಬೋರ್ಗಿನಿ ತಂಡವೇ ಬೆರಗಾಗಿದೆ.

ನಿಹಾಲ್ ಅತಿ ಅಪರೂಪದ ಅಕಾಲವೃದ್ಧಾಪ್ಯ ಉಂಟುಮಾಡುವ ಅನುವಂಶಿಕ ರೋಗಕ್ಕೆ ತುತ್ತಾಗಿದ್ದಾನೆ. ಈಗ ಬಾಲಕನ ಕನಸನ್ನು ಈಡೇರಿಸಿರುವ ಇಟಲಿಯ ಲಂಬೋರ್ನಿ ಸೂಪರ್ ಕಾರು ಸಂಸ್ಥೆಗೆ ನೀವು ಶುಭ ಹಾರೈಸಲು ಮರೆಯದಿರಿ.


Click it and Unblock the Notifications








