ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಐಷಾರಾಮಿ ಎಸ್‌ಯುವಿ ಎಂಟ್ರಿ
ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್ ಮೂಲದ ಲ್ಯಾಂಡ್ ರೋವರ್ ಸಂಸ್ಥೆಯು ಭಾರತದಲ್ಲಿ ಅತಿ ನೂತನ ಡಿಸ್ಕವರಿ ಸ್ಪೋರ್ಟ್ ಕಾರನ್ನು ಬಿಡುಗಡೆ ಮಾಡಿದೆ.
ಪ್ರಾರಂಭಿಕ ಬೆಲೆ: 46.1 ಲಕ್ಷ ರು. (ಎಕ್ಸ್ ಶೋ ರೂಂ ಮುಂಬೈ)
ವಿಶೇಷವೆಂದರೆ ಕಂಪ್ಲೀಟ್ ನೌಕ್ಡ್ ಡೌನ್ ಮುಖಾಂತರ ಪುಣೆ ಘಟಕವನ್ನು ತಲುಪಲಿರುವ ಈ ಐಷಾರಾಮಿ ಕ್ರೀಡಾ ಬಳಕೆಯ ವಾಹನವು ಜೋಡಣೆಯಾಗಲಿದೆ. ಬಲ್ಲ ಮೂಲಗಳ ಪ್ರಕಾರ ಬಹುನಿರೀಕ್ಷಿತ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಈಗಾಗಲೇ 300ರಷ್ಟು ಮುಂಗಡ ಬುಕ್ಕಿಂಗ್ ಗಳನ್ನು ಗಿಟ್ಟಿಸಿಕೊಂಡಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)
- 2.2 ಲೀಟರ್ ಟಿಡಿಐ ಡೀಸೆಲ್ ಎಸ್: 46.10 ಲಕ್ಷ ರು.
- 2.2 ಲೀಟರ್ ಟಿಡಿ4 ಡೀಸೆಲ್ ಎಸ್‌ಇ: 52.50 ಲಕ್ಷ ರು.
- 2.2 ಲೀಟರ್ ಟಿಡಿಐ ಡೀಸೆಲ್ ಎಚ್‌ಎಸ್‌ಇ: 54.83 ಲಕ್ಷ ರು.
- 2.2 ಲೀಟರ್ ಟಿಡಿ4 ಡೀಸೆಲ್ ಎಚ್‌ಎಸ್ಇ ಲಗ್ಷುರಿ: 62.18 ಲಕ್ಷ ರು.
- ಟರೈನ್ ರೆಸ್ಪಾನ್ಸ್,
- ಹಿಲ್ ಡಿಸೆಂಟ್ ಕಂಟ್ರೋಲ್,
- ಎಬಿಎಸ್,
- ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್,
- ಉರುಳುವಿಕೆ ನಿಯಂತ್ರಣ,
- ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್,
- ಹೊಂದಾಣಿಸಬಹುದಾದ ಹೀಟಡ್ ವಿಂಗ್ ಮಿರರ್,
- ಫಾಗ್ ಲ್ಯಾಂಪ್,
- 60:40 ವಿಭಜಿತ ಸೀಟು,
- 8 ಇಂಚುಗಳ ಮಾಹಿತಿ ಮನರಂಜನಾ ವ್ಯವಸ್ಥೆ,
- 6 ಏರ್ ಬ್ಯಾಗ್
- ಫ್ಯೂಜಿ ವೈಟ್,
- ಇಂಡಸ್ ಸಿಲ್ವರ್,
- ಸ್ಕಾಟಿಯಾ ಗ್ರೇ,
- ಫೈರನ್ಜ್ ರೆಡ್,
- ಎಯಿನ್‌ಟ್ರೀ ಗ್ರೀನ್,
- ಲೌರೆ ಬ್ಲೂ,
- ಸ್ಯಾಂಟೊರಿನಿ ಬ್ಲ್ಯಾಕ್

ಎಂಜಿನ್
2.2 ಲೀಟರ್ ಫೋರ್ ಸಿಲಿಂಡರ್ ಎಂಜಿನ್,
ಟಿಡಿ4 ವರ್ಷನ್: 150 ಅಶ್ವಶಕ್ತಿ (400 ಎನ್ಎಂ ತಿರುಗುಬಲ)
ಎಸ್‌ಡಿ4 ವರ್ಷನ್: 190 ಅಶ್ವಶಕ್ತಿ (450 ಎನ್ಎಂ ತಿರುಗುಬಲ)

ಗೇರ್ ಬಾಕ್ಸ್
ಎಲ್ಲ ಶ್ರೇಣಿಗಳಲ್ಲೂ 9 ಸ್ಪೀಡ್ ಝಡ್ ಎಫ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸ್ಟ್ಯಾಂಡರ್ಡ್ ಆಗಿ ಲಭ್ಯವಾಗಲಿದೆ. ಜೊತೆಗೆ ಟರೈನ್ ರೆಸ್ಪಾನ್ಸ್ ಸಿಸ್ಟಂ ಸಹ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

ವೈಶಿಷ್ಟ್ಯಗಳು (ಸ್ಟ್ಯಾಂಡರ್ಡ್)

ವೈಶಿಷ್ಟ್ಯಗಳು (ಸ್ಟ್ಯಾಂಡರ್ಡ್)

ಇವೆಲ್ಲದಕ್ಕೂ ಜೊತೆಗೆ ಟಾಪ್ ಎಂಡ್ ವೆರಿಯಂಟ್ ಗಳಲ್ಲಿ ಕಾಂಟ್ರಾಸ್ಟ್ ಬಣ್ಣ, ಅಡಾಪ್ಟಿಪವ್ ಡೈನಾಮಿಕ್ಸ್ ಮ್ಯಾಗ್ನೆರೈಡ್ ಸಸ್ಪನ್ಷನ್, ಕ್ಸೆನಾನ್ ಹೆಡ್ ಲ್ಯಾಂಪ್ ಜೊತೆ ಎಲ್ ಇಡಿ ಸಿಗ್ನೇಚರ್, ಆಟೋಮ್ಯಾಟಿಕ್ ವೈಪರ್ ಹಾಗೂ ಹೆಡ್ ಲ್ಯಾಂಪ್, ಚಕ್ರದೊತ್ತಡ ಪರಿವೀಕ್ಷಣೆ ವ್ಯವಸ್ಥೆ, ವಿಡ್ಸರ್ ಲೆಥರು ಸೀಟು, 10 ವಿಧಗಳಲ್ಲಿ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಮುಂಭಾಗದ ಸೀಟು ಜೊತೆಗೆ ಮೆಮರಿ, ಐಚ್ಛಿಕ ಮೂರನೇ ಸಾಲಿನ ಸೀಟು, ಕ್ರೂಸ್ ಕಂಟ್ರೋಲ್, ಪಾರ್ಕಿಂಗ್ ನೆರವು ಜೊತೆ ರಿಯರ್ ವ್ಯೂ ಕ್ಯಾಮೆರಾ, ಪಾರ್ಕ್ ಅಸಿಸ್ಟ್, ಟು ಝೋನ್ ಕ್ಲೈಮೇಟ್ ಕಂಟ್ರೋಲ್ ಜೊತೆ ಏರ್ ಕ್ವಾಲಿಟಿ ಸೆನ್ಸಿಂಗ್, ಮೂಡ್ ಲೈಟಿಂಗ್, ಮೆರಿಡಿಯನ್ ಸೌರಂಡ್ ಸಿಸ್ಟಂ ಮತ್ತು 17 ಸ್ಪೀಕರುಗಳ ಸೇವೆಗಳು ಲಭ್ಯವಾಗಲಿದೆ.

ಏಳು ಆಕರ್ಷಕ ಬಣ್ಣಗಳು
ಮೂರು ಇಂಟಿರಿಯರ್ ಥೀಮ್: ಎಬೋನಿ, ಅಲ್ಮಾಂಡ್/ಎಬೋನಿ ಮತ್ತು ಟ್ಯಾನ್/ಎಬೋನಿ

ನೂತನ ಲ್ಯಾಂಡ್ ರೋವರ್ ಡಿಸ್ಕವರಿ ಕಾರಿಗೆ ಮೂರು ವರ್ಷಗಳ ಅಥವಾ ಒಂದು ಲಕ್ಷ ಕೀ.ಮೀ. ಜೊತೆಗೆ ಮೂರು ವರ್ಷಗಳ ಸರ್ವಿಸ್ ಪ್ಯಾಕ್ ಸೇವೆಯೂ ಲಭ್ಯವಿರುತ್ತದೆ.


Click it and Unblock the Notifications








