ಮಾನವ ಸರಪಳಿಯೊಂದಿಗೆ ಮಹೀಂದ್ರ 50 ಲಕ್ಷದ ಸಂಭ್ರಮ
ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಹೊಸ ಮೈಲುಗಲ್ಲನ್ನು ತಲುಪಿದ್ದು, ಬರೋಬ್ಬರಿ 50 ಲಕ್ಷ ವಾಹನಗಳನ್ನು ಮಾರಾಟ ಮಾಡಿರುವ ಕೀರ್ತಿಗೆ ಪಾತ್ರವಾಗಿದೆ.
ಈ ಸುಸಂದರ್ಭವನ್ನು ವಿನೂತನ ರೀತಿಯಲ್ಲಿ ಆಚರಿಸಿರುವ ಎಸ್‌ಯುವಿ ದೈತ್ಯ ಮಹೀಂದ್ರ ಸಂಸ್ಥೆಯು ಮಾನವ ಸರಪಳಿಯ ಮೂಲಕ ಗಮನ ಸೆಳೆದಿದೆ.

ಏರ್ ಇಂಡಿಯಾ ಬಿಲ್ಡಿಂಗ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 3,000ದಷ್ಟು ಕಾರ್ಮಿಕರು ಕೈಜೋಡಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮಹೀಂದ್ರ ಆಂಡ್ ಮಹೀಂದ್ರ ಆಟೋಮೋಟಿವ್ ವಿಭಾಗದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಪ್ರವೀಣ್ ಷಾ ಉಪಸ್ಥಿತರಿದ್ದರು.
ಆಧುನಿಕತೆ ತಕ್ಕಂತೆ ಅನೇಕ ತಾಜಾ ಮಾದರಿಗಳನ್ನು ಬಿಡುಗಡೆ ಮಾಡುವುದರಲ್ಲಿ ಮಹೀಂದ್ರ ಬದ್ಧವಾಗಿದೆ. ನಿಮ್ಮ ಮಾಹಿತಿಗಾಗಿ ಕಳೆದ ವರ್ಷವಷ್ಟೇ ಹೊಸ ಪೀಳಿಗೆಯ ಸ್ಕಾರ್ಪಿಯೊಯನ್ನು ಬಿಡುಗಡೆಗೊಳಿಸಿತ್ತು.


Click it and Unblock the Notifications








